ಮುಖಂಡರನ್ನು ಮತ್ತು ಅಧಿಕಾರಿಗಳನ್ನು ನಾವೇ ಕರೆದದ್ದು ಎಂದು ಐನೆಕಿದು ಬಿಜೆಪಿ ಬೂತ್ ಸಮಿತಿ ಒಪ್ಪಿಕೊಂಡಿರುತ್ತದೆ. ನಾವು ಐದು ಗ್ರಾಮಗಳ ಜನರನ್ನು ಪಕ್ಷಾತೀತವಾದಂಥ ಸಭೆಯನ್ನು ಕರೆದಿದ್ದೆವು. ನಾವು ಕರೆಯದೇ ಬಂದು ಸುಳ್ಳು ಭರವಸೆಯನ್ನು ನೀಡಿ ನಮ್ಮ ಸಭೆಯನ್ನು ಹಾಳು ಮಾಡಿದ ಕೀರ್ತಿ ಐನೆಕಿದು ಬಿಜೆಪಿ ಬೂತ್ ಸಮಿತಿಗೆ ಸಲ್ಲುತ್ತದೆ ಎಂದು ಸತೀಶ್ ಕೂಜುಗೋಡು ತಿಳಿಸಿದ್ದಾರೆ.
ನಾವು ದ ಕ ಜಿಲ್ಲಾಧಿಕಾರಿ ಅವರನ್ನು ಗ್ರಾಮ ವಾಸ್ತವ್ಯಕ್ಕೆ ಆಹ್ವಾನಿಸಲು ನಿರ್ಧರಿಸಿದ್ದೆವು. ನಮ್ಮ ರಸ್ತೆಯ ದುರವಸ್ಥೆ ಬಗ್ಗೆ ಜಿಲ್ಲಾಧಿಕಾರಿಗಳ ಗಮನ ಸೆಳೆಯುವ ಉzಶ ನಮ್ಮದಾಗಿತ್ತು. ಆದರೆ ಬಿಜೆಪಿ ಮುಖಂಡರು ಮತ್ತು ಪಿಡಬ್ಲ್ಯುಡಿ ಅಧಿಕಾರಿಗಳು ಬಂದು ೫೦ ಲಕ್ಷದ ಆರ್ಡರ್ ಕಾಪಿಯನ್ನು ನಮ್ಮ ಗ್ರಾಮಸ್ಥರಿಗೆ ನೀಡಿರುತ್ತಾರೆ. ಸುಳ್ಯ ತಾಲ್ಲೂಕಿಗೆ ಸುಮಾರು ೫೦ ಕೋಟಿ ಅನುದಾನ ಬಂದಿದ್ದು ಅದರಲ್ಲಿ ನಮ್ಮ ರಸ್ತೆಗೆ ೫ ಕೋಟಿಯನ್ನು ಹಣವನ್ನು ನೀಡಬಹುದಿತ್ತು. ಆದರೆ ಬರೀ ೫೦ ಲಕ್ಷ ಅನುದಾನ ನೀಡಿರುತ್ತಾರೆ. ಇದು ನಮಗೆಲ್ಲಾ ಬೇಸರ ತಂದಿದೆ. ಸಚಿವ ಸಿ ಸಿ ಪಾಟೀಲ ರವರು ಸುಬ್ರಹ್ಮಣ್ಯಕ್ಕೆ ಬಂದಾಗ ೫.೮ ಕೋಟಿ ಪ್ರಸ್ತಾವನೆಯನ್ನು ಸಹಿ ಮಾಡಿದ್ದು ಯಾವುದೇ ಅನುದಾನವನ್ನು ಬಿಡುಗಡೆ ಮಾಡಿರುವುದಿಲ್ಲ. ಬಿಜೆಪಿ ನಾಯಕರು ನಮ್ಮ ಜೊತೆ ಬೆಂಗಳೂರಿಗೆ ಬನ್ನಿ ನಾವು ಜೊತೆಯಾಗಿ ಹೋಗಿ ಅನುದಾನ ತರುವುದಾಗಿ ನಮಗೆ ಭರವಸೆಯನ್ನು ನೀಡಿದ್ದರು. ಅವರ ಮಾತನ್ನು ನಂಬಿ ನಾವು ಹೋರಾಟ ಸಮಿತಿಯನ್ನು ರಚಿಸದೆ ಬರೀ ಅಭಿವೃದ್ಧಿ ಸಮಿತಿಯನ್ನು ರಚಿಸಿರುತ್ತೇವೆ. ಮುಂದಿನ ಹತ್ತು ದಿವಸದೊಳಗೆ ನಮ್ಮ ರಸ್ತೆಗೆ ೫.೮ ಕೋಟಿ ಅನುದಾನ ಬಿಡುಗಡೆ ಮಾಡದಿದ್ದರೆ ಮುಂದೆ ಹೋರಾಟ ಸಮಿತಿ ರಚಿಸಿ ಪಕ್ಷಾತೀತ ಹೋರಾಟ ಮಾಡಲಿzವೆ . ಎಂದು ಕೂಜುಗೋಡು ತಿಳಿಸಿದರು.
೨೦೦೨ನೇ ಇಸವಿಯಲ್ಲಿ ಆಗಿನ ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದ ಭರತ್ ಮುಂಡೋಡಿ ಅವರು ನಮ್ಮ ರಸ್ತೆಯನ್ನು ಸಂಪೂರ್ಣ ಡಾಮರೀಕರಣ ಮಾಡಿಸಿದ್ದರು. ನಂತರ ಕೆ ಎಸ್ ದೇವರಾಜ್ ಜಿಲ್ಲಾ ಪಂಚಾಯತ್ ನಿಂದ ೨೫ ಲಕ್ಷ ಅನುದಾನವನ್ನು ನೀಡಿದ್ದರು. ನಂತರ ನಮ್ಮ ಕ್ಷೇತ್ರಕ್ಕೆ ಆಶಾ ತಿಮ್ಮಪ್ಪ ರವರು ನಮ್ಮ ರಸ್ತೆಗೆ ಯಾವುದೇ ಅನುದಾನ ನೀಡಿರುವುದಿಲ್ಲ. ೩೦ ವರ್ಷಗಳಿಂದ ಶಾಸಕರಾಗಿ ಇದೀಗ ಸಚಿವರಾಗಿ ನಮ್ಮ ರಸ್ತೆಗೆ ಯಾವುದೇ ಅನುದಾನ ನೀಡದೆ ಕೇವಲ ೫೦ ಲಕ್ಷ ಅನುದಾನ ನೀಡಿರುತ್ತಾರೆ. ಮಲೆಯಾಲದಿಂದ ಸುಮಾರು ೧ಕಿಲೋ ಮೀಟರ್ ಕಾಂಕ್ರೀಟ್ ರಸ್ತೆಯನ್ನು ತಮ್ಮ ಅನುದಾನದಿಂದ ಮಾಡಿರುತ್ತಾರೆ ಅದು ಬಿಟ್ಟರೆ ನಮ್ಮ ರಸ್ತೆಗೆ ಯಾವುದೇ ಅನುದಾನ ನೀಡಿರುವುದಿಲ್ಲ.
ನಾವು ೨೦೧೮ ರಿಂದ ಹರಿಹರೇಶ್ವರ ದೇವಸ್ಥಾನ ಜೀರ್ಣೋದ್ಧಾರ ಸಂದರ್ಭದಲ್ಲಿ ನಮ್ಮ ಸ್ಥಳೀಯ ಬಿಜೆಪಿ ನಾಯಕರನ್ನು ವಿನಂತಿ ಮಾಡಿದ್ದೆವು. ಆಗ ನಮಗೆ ಭರವಸೆಯನ್ನೂ ನೀಡಿದ್ದರು. ನಂತರ ಅದು ಕೊರೋನಾದಿಂದಾಗಿ ಈಡೇರಲಿಲ್ಲ. ಆದರೆ ಮೊನ್ನೆ ಫೆಬ್ರವರಿಯಲ್ಲಿ ಹರಿಹರ ಜಾತ್ರೆಗೆ ಬಂದಿದ್ದ ಬಿಜೆಪಿ ನಾಯಕರು ಖಂಡಿತ ಮಾರ್ಚಿನಲ್ಲಿ ೧ಕೋಟಿ ಅನುದಾನ ಪ್ರಥಮ ಹಂತ ನಿಮ್ಮ ರಸ್ತೆಯನ್ನು ಮಾಡಿಕೊಡುತ್ತೇವೆ. ೫ ಕೋಟಿ ಅನುದಾನವನ್ನು ತರಿಸಿ ಏಪ್ರಿಲ್ ನಲ್ಲಿ ಸಂಪೂರ್ಣವಾಗ ರಸ್ತೆಯನ್ನು ಕಾಂಕ್ರಿಟೀಕರಣ ಮಾಡುತ್ತೇವೆ ಎಂದು ಹೇಳಿದ್ದರು. ನಾವು ತಾಳ್ಮೆಯಿಂದ ಇದ್ದೆವು. ಇದೀಗ ನಮ್ಮ ಐದು ಗ್ರಾಮದ ಜನರ ತಾಳ್ಮೆಯ ಕಟ್ಟೆ ಒಡೆದು ಹೋಗಿರುತ್ತದೆ. ಮುಂದೆ ಹೋರಾಟ ಅನಿವಾರ್ಯ ಅನಿವಾರ್ಯವಾಗಿರುತ್ತದೆ ಎಂದು ಸತೀಶ್ ಕೂಜುಗೋಡು ಲಿಖಿತ ಹೇಳಿಕೆಯಲ್ಲಿ ತಿಳಿಸಿದ್ದಾರೆ.