Breaking News

ಜು.31ರಂದು ಸುಳ್ಯ ಕೃಷಿ ಇಲಾಖೆಯ ತಾಂತ್ರಿಕ ಅಧಿಕಾರಿ ಮೋಹನ್ ನಂಗಾರು ನಿವೃತ್ತಿ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 


ಸುಳ್ಯ ಕೃಷಿ ಇಲಾಖೆಯ ತಾಂತ್ರಿಕ ಅಧಿಕಾರಿ ಮೋಹನ್ ನಂಗಾರು ಜು.೩೧ರಂದು ಸರಕಾರಿ ಸೇವೆಯಿಂದ ನಿವೃತ್ತರಾಗಲಿದ್ದಾರೆ.
ಜಾಲ್ಸೂರು ಗ್ರಾಮದ ನಂಗಾರು ನಾರ್ಣಪ್ಪ ಗೌಡ ಹಾಗೂ ಅಂಬುಜಾಕ್ಷಿಯವರ ಪುತ್ರರಾದ ಮೋಹನ್ ನಂಗಾರುರವರು ೧೯೮೯ ರಲ್ಲಿ ಕೃಷಿ ಸಹಾಯಕರಾಗಿ ಆಲೆಟ್ಟಿ ಮಂಡಲ ಪಂಚಾಯತ್ ವ್ಯಾಪ್ತಿಯಲ್ಲಿ ಸರಕಾರಿ ಸೇವೆ ಆರಂಭಿಸಿದರು. ೧೯೯೭ರಲ್ಲಿ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಬಂಟ್ವಾಳಕ್ಕೆ ವರ್ಗಾವಣೆಗೊಂಡು ಮಾಣಿ ವೃತ್ತದಲ್ಲಿ ಕೃಷಿ ಸಹಾಯಕರಾಗಿ ಸೇವೆ ಸಲ್ಲಿಸಿದರು. ೨೦೦೦ ಇಸವಿಯಲ್ಲಿ ಸುಳ್ಯಕ್ಕೆ ವರ್ಗಾವಣೆಗೊಂಡ ಅವರು ಸುಳ್ಯ ರೈತ ಸಂಪರ್ಕ ಕೇಂದ್ರದ ಪ್ರಭಾರ ಕೃಷಿ ಅಧಿಕಾರಿಯಾಗಿ ನಿಯೋಜನೆಗೊಂಡರು. ೨೦೧೫ರಿಂದ ಸುಳ್ಯ ಕೃಷಿ ಇಲಾಖೆಯಲ್ಲಿ ತಾಂತ್ರಿಕ ಕೃಷಿ ಅಧಿಕಾರಿಯಾಗಿ ಹೆಚ್ಚುವರಿ ಪ್ರಭಾರ ವಹಿಸಿಕೊಂಡರು. ಇದರ ಜತೆಗೆ ಜಲಾನಯನ ಇಲಾಖೆಯ ಅಧಿಕಾರಿಯಾಗಿ, ಕಳೆದ ಒಂದು ತಿಂಗಳಿನಿಂದ ಪಂಜ ರೈತ ಸಂಪರ್ಕ ಕೇಂದ್ರದ ಪ್ರಭಾರ ಕೃಷಿ ಅಧಿಕಾರಿ ಜವಾಬ್ದಾರಿಯನ್ನು ಇವರು ನಿಭಾಯಿಸಿದ್ದಾರೆ. ಮೋಹನ್ ನಂಗಾರುರವರು ಕೃಷಿ ಇಲಾಖೆಯ ಸೇವೆಯೊಂದಿಗೆ ೨೦೧೮ -೧೯ರಲ್ಲಿ ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದ ಆಡಳಿತಾಧಿಕಾರಿಯಾಗಿ ೧ ವರ್ಷ, ಬೆಳ್ಳಾರೆ ಅಜಪಿಲ ದೇವಸ್ಥಾನದ ಆಡಳಿತಾಧಿಕಾರಿಯಾಗಿ ೬ ತಿಂಗಳು ಸೇವೆ ಸಲ್ಲಿಸಿದರಲ್ಲದೆ, ೨೦೧೯ – ೨೦ರಲ್ಲಿ ಜಾಲ್ಸೂರು ಗ್ರಾಮದ ಅಡ್ಕಾರು ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಉತ್ಸವ ಸಮಿತಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಅಡ್ಕಾರು ಶ್ರೀ ವಯನಾಟ್ ಕುಲವನ್ ದೈವಸ್ಥಾನದ ಅಧ್ಯಕ್ಷರಾಗಿ, ನಂಗಾರು ತರವಾಡು ಶ್ರೀ ಮಹಾವಿಷ್ಣುಮೂರ್ತಿಮತ್ತು ಸಪರಿವಾರ ದೈವಸ್ಥಾನದ ಆಡಳಿತ ಮೊಕ್ತೇಸರರಾಗಿ ಸೇವೆ ಸಲ್ಲಿಸಿದ್ದಾರೆ. ೨೦೨೧ರಲ್ಲಿ ಸ್ವಾತಂತ್ರ್ಯೋತ್ಸವ ಸಂದರ್ಭ ಸುದ್ದಿ ಸಂಸ್ಥೆ ಹಮ್ಮಿಕೊಂಡ ಅತ್ಯುತ್ತಮ ಜನಮೆಚ್ಚಿದ ಅಧಿಕಾರಿ ಸ್ಪರ್ಧೆಯಲ್ಲಿ ಕೃಷಿ ಇಲಾಖೆಯಿಂದ ಪ್ರಥಮ ಪ್ರಾಶಸ್ತ್ಯದಲ್ಲಿ ಇವರು ಜನರಿಂದ ಆಯ್ಕೆಯಾಗಿದ್ದರು. ಗ್ರಾ.ಪಂ., ತಾ.ಪಂ., ಜಿ.ಪಂ., ವಿಧಾನ ಸಭಾ ಚುನಾವಣೆಯ ಸಂದರ್ಭ ತಾಲೂಕಿನಲ್ಲಿ ಆರ್.ಒ. ಆಗಿಯೂ ಇವರು ಸೇವೆ ಸಲ್ಲಿಸಿದ್ದಾರೆ.
ಮೋಹನ್ ರವರ ಪತ್ನಿ ಶ್ರೀಮತಿ ಚಂದ್ರಕಲಾರವರು ಸುಳ್ಯ ರೋಟರಿ ವಿದ್ಯಾಸಂಸ್ಥೆಯಲ್ಲಿ ಸಹಶಿಕ್ಷಕಿಯಾಗಿದ್ದಾರೆ. ಮಗ ಹಿತೇಶ್ ನಂಗಾರು ಎಂಟೆಕ್ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಪುತ್ರಿ ಕು.ಮೇಘನಾ ನಂಗಾರು ಸುಳ್ಯ ಕೆ.ವಿ.ಜಿ. ದಂತ ಮಹಾವಿದ್ಯಾಲಯದಲ್ಲಿ ೩ ನೇ ವರ್ಷದ ಬಿಡಿಎಸ್ ವ್ಯಾಸಂಗ ಮಾಡುತ್ತಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.