ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬೆಳ್ಳಾರೆ ವಲಯದಲ್ಲಿ ಸಾಮೂಹಿಕ ಸತ್ಯನಾರಾಯಣ ದೇವರ ಪೂಜೆ ಹಾಗೂ 9 ಒಕ್ಕೂಟಗಳಾದ ಬೆಳ್ಳಾರೆ, ಪೆರುವಾಜೆ, ಐವಾರ್ಣಡು , ಪಾಲೇಪ್ಪಾಡಿ, ಕೊಡಿಯಾಲ, ಬಾಳಿಲ, ಕಲ್ಮಡ್ಕ ದೇವರಕಾನ, ಮುರುಳ್ಯ ಒಕ್ಕೂಟಗಳ ಪದಾಧಿಕಾರಿಗಳ ಪದಗ್ರಹಣ ಮತ್ತು ನೊತನ ಒಕ್ಕೂಟಗಳಾದ ನೆಟ್ಟಾರು, ಮುಪ್ಪೆರಿಯ, ಕೊಡಿಯಾಲ ಬಿ, ಅಲೆಕ್ಕಾಡಿ, ಒಕ್ಕೂಟಗಳ ಉದ್ಘಾಟನಾ ಕಾರ್ಯಕ್ರಮವನ್ನು ಪೆರುವಾಜೆ ಜೆಡಿ ಆಡಿಟೋರಿಯಮ್ ನಲ್ಲಿ ಜು. 25ರಂದು ನಡೆಯಿತು. ಕರ್ನಾಟಕ ವಿಧಾನ ಪರಿಷತ್ತಿನ ಮಾಜಿ ಸದಸ್ಯರು ಅಣ್ಣಾ ವಿನಯಚಂದ್ರ ಉದ್ಘಾಟನೆಯನ್ನು ನೆರವೇರಿಸಿದರು. ನೂತನ ಪದಾಧಿಕಾರಿಗಳಿಗೆ ದಾಖಲಾತಿಯನ್ನು ಹಸ್ತಾಂತರಿಸಿ, ಪದಗ್ರಹಣ ನೆರವೇರಿಸಿ ಯೋಜನೆಯ ಮಾಹಿತಿ ಮಾರ್ಗದರ್ಶನವನ್ನು ಪ್ರಾದೇಶಿಕ ನಿರ್ದೇಶಕರಾದ ಶ್ರೀ. ಕ್ಷೇ.ಧ. ಗ್ರಾ. ಯೋ. ಬಿ. ಸಿ. ಟ್ರಸ್ಟ್ ಉಡುಪಿ ಪ್ರಾದೇಶಿಕ ಕಛೇರಿಯ ವಸಂತ ಸಾಲ್ಯಾನ್ ನೀಡಿದರು. ಈ ಸಂದರ್ಭದಲ್ಲಿ ಶ್ರೀ ಕ್ಷೇ.ಧ.ಗ್ರಾ.ಯೋ. ಬಿ. ಸಿ ಟ್ರಸ್ಟ್ ದ. ಕ ಜಿಲ್ಲೆ -2 ಪುತ್ತೂರು ಇದರ ನಿರ್ದೇಶಕರಾದ ಪ್ರವೀಣ್ ಕುಮಾರ್, ತಾಲೂಕು ಜನಜಾಗ್ರತಿ ವೇದಿಕೆಯ ಅಧ್ಯಕ್ಷರಾದ ಎನ್. ವಿಶ್ವನಾಥ ರೈ ಕಳಂಜ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಎಸ್.ಎನ್. ಮನ್ಮಥ, ಪೆರುವಾಜೆ ಗ್ರಾ.ಪಂ. ಅಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು, ಶ್ರೀ. ಕ್ಷೆ. ಧ. ಗ್ರಾ. ಯೋ. ಬಿ. ಸಿ ಟ್ರಸ್ಟ್ ಸುಳ್ಯ ತಾಲೂಕು ಇದರ ಯೋಜನಾಧಿಕಾರಿ ನಾಗೇಶ್ ಪಿ, ಬೆಳ್ಳಾರೆ ಗ್ರಾಮ ಪಂ. ಅಧ್ಯಕ್ಷ ಚಂದ್ರಶೇಖರ್ ಪನ್ನೆ, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯ ಪಿ.ಜಿ.ಎಸ್.ಎನ್ ಪ್ರಸಾದ್, ಶ್ರೀ ಜಾಲಾದುರ್ಗಾದೇವಿ ದೇವಸ್ಥಾನ ಪೆರುವಾಜೆ ಇದರ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹಾಗೂ ಜೆಡಿ ಆಡಿಟೋರಿಯಂನ ಮಾಲಕರಾದ ಪದ್ಮನಾಭ ಶೆಟ್ಟಿ, ಜನಜಾಗ್ರತಿ ವೇದಿಕೆಯ ಬೆಳ್ಳಾರೆ ವಲಯಾಧ್ಯಕ್ಷ ಎಂ. ಕೂಸಪ್ಪ ಗೌಡ ಮುಗುಪ್ಪು, ವಲಯ ಮೇಲ್ವಿಚಾರಕ ವಸಂತ್ ಎಲ್, ನಿಂತಿಕಲ್ಲು ವಲಯ ಮೇಲ್ವಿಚಾರಕಿ ಶ್ರೀಮತಿ ಉಷಾ ಕಲ್ಯಾಣಿ, ಸೇವಾಪ್ರತಿನಿಧಿಗಳಾದ ವನಿತಾ, ಯಶೋದಾ ಶಶಿಕಲಾ ದೇವರಕಾನಾ, ಸೌಜನ್ಯ, ಪ್ರಿಯಾ, ಧನ್ಯಶ್ರೀ, ಆಶಾಲತಾ, ಮಧುಶ್ರೀ, ಬೇಬಿ ಶಾಲಿನಿ, ಹರಿಣಾಕ್ಷಿ, ಶಶಿಕಲಾ ಮುರುಳ್ಯ, ರತ್ನಾವತಿ ಹಾಗೂ ನೂತನ ಒಕ್ಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಸಭೆಯ ಅಧ್ಯಕ್ಷತೆಯನ್ನು ಪ್ರಗತಿ ಬಂಧು ಮತ್ತು ಸ್ವಸಹಾಯ ಸಂಘಗಳ ಒಕ್ಕೂಟದ ವಲಯ ಅಧ್ಯಕ್ಷರಾದ ಪಿ. ಆನಂದ ಗೌಡ ವಹಿಸಿದ್ದರು. ಪ್ರದೀಪ್ ಕುಮಾರ್ ರೈ ಪನ್ನೆ ಕಾರ್ಯಕ್ರಮ ನಿರೂಪಿಸಿದರು. ನಿಂತಿಕಲ್ಲು ವಲಯ ಮಲ್ವಿಚಾರಕಿ ಉಷಾ ಕಲ್ಯಾಣಿ ಸ್ವಾಗತಿಸಿ ಸೇವಾಪ್ರತಿನಿಧಿ ವನಿತಾ ವಲಯದ ವರದಿ ಮಂಡಿಸಿದರು. ಮೇಲ್ವಿಚಾರಕ ವಸಂತ್ ಎಲ್ ವಂದಿಸಿದರು. 13 ಕಾರ್ಯಕ್ಷೆತ್ರದ ಸೇವಾಪ್ರತಿನಿಧಿ, ಎಲ್ಲಾ ಒಕ್ಕೂಟದ ಪದಾಧಿಕಾರಿಗಳು ಮತ್ತು ಸದಸ್ಯರು, ಸೌರ್ಯ ವಿಪತ್ತು ನಿರ್ವಹಣಾ ಘಟಕ ಬೆಳ್ಳಾರೆ ಮತ್ತು ಕಲ್ಮಡ್ಕದ ಸಾಂಯೋಜಕರಾದ ವಸಂತ ನೆಟ್ಟಾರು, ಜಯಪ್ರಕಾಶ್ ಮತ್ತು ಸದಸ್ಯರು ಉಪಸ್ಥಿತರಿದ್ದರು.