ನಿನ್ನೆ ರಾತ್ರಿ ಸುಳ್ಯದ ಜಟ್ಟಿಪಳ್ಳ ರಸ್ತೆಯಲ್ಲಿ 2 ಬೈಕ್ ಗಳು ಪರಸ್ಪರ ಡಿಕ್ಕಿ ಹೊಡೆದುಕೊಂಡು ಸವಾರರು ಜಖಂಗೊಂಡ ಘಟನೆ ವರದಿಯಾಗಿದೆ.
ಒಂದು ಬೈಕಿನ ಸವಾರ ಕಾನತ್ತಿಲ ನಿವಾಸಿ ದಿನೇಶ್ ಎಂಬವರು ತೀವ್ರ ಜಖಂಗೊಂಡಿದ್ದು ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡಿರುವ ಇನ್ನೊಂದು ಬೈಕಿನ ಸವಾರ ಕುರುಂಜಿಗುಡ್ಡೆ ನಿವಾಸಿ ಲೋಹಿತ್ ಎಂಬವರು ಸುಳ್ಳು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.