ಎಡಮಂಗಲ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದ್ದು ಗ್ರಾಮಸ್ಥರು ಆಂತಕದಲ್ಲಿದ್ದಾರೆ.
ಎಡಮಂಗಲದ ರೈಲ್ವೆ ಗೇಟ್ ಬಳಿಯ ಜಗದೀಶ್ ಎಂಬವರ ಮನೆಗೆ ನುಗ್ಗಿದ ಕಳ್ಳರು ಚಿನ್ನ ಮತ್ತು ಹಣ ದೋಚಿ ಬಳಿಕ ಸಮೀಪದ ಅಂಗಡಿಯೊಂದರ ಶೆಟರ್ ಮುರಿದು ಹಣ ದೋಚಿ ಪರಾರಿಯಾಗಿದ್ದರು. ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿ ತಿಂಗಳುಗಳೇ ಕಳೆದರೂ ಕಳ್ಳರ ಪತ್ತೆಯಾಗಿಲ್ಲ. ಇದಾದ ನಂತರ ಸತೀಶ್ ಪಟ್ಲದಮೂಲೆ ಎಂಬವರ ಮನೆ, ಜಯೇಂದ್ರ ಎಂಬವರ ಮನೆಗೂ ಕಳ್ಳರು ಕಣ್ಣ ಹಾಕಿರುವುದಾಗಿ ತಿಳಿದು ಬಂದಿದೆ. ಈ ಬಗ್ಗೆ ಪೊಲೀಸ್ ಇಲಾಖೆ ತನಿಖೆಯನ್ನು ತೀವ್ರಗೊಳಿಸಿ ಕಳ್ಳರನ್ನು ಹಿಡಿಯದಿದ್ದರೆ ಕಳ್ಳತನ ನಡೆಯುತ್ತಲೇ ಇರುತ್ತದೆ. ಗ್ರಾಮಸ್ಥರು ನೆಮ್ಮದಿಯಿಂದ ಜೀವನ ಸಾಗಿಸುವಂತಿಲ್ಲ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.