ಶ್ರೀ ಶಾರದಾ ಕಾಲೇಜಿನ ರಕ್ಷಾ ಕೆ.ಆರ್.ಗೆ ಕಂಚಿನ ಪದಕ
ಮಂಗಳೂರು ವಿಶ್ವ ವಿದ್ಯಾನಿಲಯದ ವತಿಯಿಂದ ಜುಲೈ 25 ರಂದು ಮೂಡಬಿದಿರೆಯ ಸ್ಕೌಟ್ ಮತ್ತು ಗೈಡ್ ಕನ್ನಡ ಭವನದಲ್ಲಿ ನಡೆದ ಅಂತರ್ ಕಾಲೇಜು ವೇಟ್ ಲಿಪ್ಟಿಂಗ್ ಚಾಂಪಿಯನ್ಶಿಪ್ನಲ್ಲಿ ಸುಳ್ಯ ಶ್ರೀ ಶಾರದಾ ಕಾಲೇಜಿನ ಅಂತಿಮ ಬಿ.ಕಾಂ ವಿದ್ಯಾರ್ಥಿನಿ ರಕ್ಷಾ ಕೆ.ಆರ್.ಗೆ ಮಹಿಳೆಯರ 55 ಕೆ.ಜಿ ವಿಭಾಗದಲ್ಲಿ ತೃತೀಯ ಸ್ಥಾನ ಪಡೆದು ಕಂಚಿನ ಪದಕವನ್ನು ತನ್ನದಾಗಿಸಿಕೊಂಡಿದ್ದಾರೆ.
ಇವರು ವೇಟ್ ಲಿಪ್ಟಿಂಗ್ ರಾಷ್ಟ್ರೀಯ ಚಾಂಪಿಯನ್ ಎ.ರಮೇಶ್ ಅವರಲ್ಲಿ ತರಬೇತಿ ಪಡೆದಿದ್ದಾರೆ ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.