Breaking News

ಮಲಗಿದ್ದವನ ಕಿಸೆಯಿಂದ ಹಣ ತೆಗೆಯುತ್ತಿರುವ ವಿಡಿಯೋ ವೈರಲ್

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ನಾಲ್ವರನ್ನು ವಶಕ್ಕೆ ಪಡೆದು ಎಚ್ಚರಿಕೆ ನೀಡಿ ಕಳುಹಿಸಿದ ಪೋಲೀಸರು*

ಸುಳ್ಯ ನಗರದ ಗಾಂಧಿನಗರ ಪ್ರಯಾಣಿಕರ ತಂಗುದಾಣದಲ್ಲಿ ಓರ್ವ ವ್ಯಕ್ತಿಯ ಜೇಬಿನಿಂದ ನಾಲ್ವರು ಸೇರಿ ಪಿಕ್ ಪಾಕೆಟ್ ಮಾಡುತ್ತಿದ್ದ ದೃಶ್ಯ ವೈರಲ್ ಆಗಿದ್ದು ಘಟನೆಯಲ್ಲಿ‌ ಭಾಗಿಯಾದ ನಾಲ್ವರನ್ನು ಪೋಲೀಸರು ವಶಕ್ಕೆ ಪಡೆದು ಎಚ್ಚರಿಕೆ ನೀಡಿರುವುದಾಗಿ ತಿಳಿದುಬಂದಿದೆ.

ಕಿಸೆಯಿಂದ ಹಣ ತೆಗೆಯುತ್ತಿರುವ ದೃಶ್ಯದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಆ ನಾಲ್ವರನ್ನು ಕೂಡಾ ಪೋಲೀಸರು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದರು.

 

ವಿಚಾರಣೆ ವೇಳೆ ತಿಳಿದು ಬಂದಿದ್ದೇನೆಂದರೆ ಕುಡಿದ ಅಮಲಿನಲ್ಲಿದ್ದ ನಾಲ್ವರು ಸೇರಿ ತಮ್ಮ ಸಹಚರ ರೊಬ್ಬ ತಗುದಾಣದಲ್ಲಿ ಮಲಗಿದ್ದು ಅವನು ನೀಡಬೇಕಾದ ಹಣವನ್ನು ಕೇಳಿದಾಗ ನೀಡಲಿಲ್ಲವೆಂದೂ ಅದನ್ನು ಅವನ ಜೇಬಿನಿಂದ ತೆಗೆದುಕೊಂಡಿರುವುದಾಗಿ ಹೇಳಿದರಲ್ಲದೆ, ನಾವೆಲ್ಲರೂ ಸ್ನೇಹಿತರೆಂದು ಹೇಳಿದ್ದರೆನ್ನಲಾಗಿದೆ. ಪೋಲೀಸರು ಅವರೆಲ್ಲರಿಗೂ ಎಚ್ಚರಿಕೆ ನೀಡಿ ಕಳುಹಿಸಿ ಕೊಟ್ಟರೆಂದು ತಿಳಿದುಬಂದಿದೆ.

ಈ ಘಟನೆಯನ್ನು ಯಾರೋ ಪಕ್ಕದಲ್ಲಿದ್ದವರು ವಿಡಿಯೋ ಮಾಡಿ ಗ್ರೂಪ್ ಗಳಲ್ಲಿ ಶೇರ್ ಮಾಡಿದ್ದರು.
ಇದನ್ನು ನೋಡಿದ ಕೆಲವರು ಸುಳ್ಯದ ಹೃದಯ ಭಾಗವಾದ ಗಾಂಧಿನಗರ ಪರಿಸರದಲ್ಲಿ ಹಾಡು ಹಗಲೇ ಪಿಕ್ ಪಾಕೆಟ್ ಗಳು ನಡೆಯುತ್ತಿದ್ದು ಸಂಬಂಧಪಟ್ಟ ಪೊಲೀಸರು ಗಮನಹರಿಸುವುದಿಲ್ಲವೆಂಬ ಮಾತುಗಳು ಕೇಳಿಬಂದಿತು.
ಒಟ್ಟಿನಲ್ಲಿ ಕುಡುಕರು ಮಾಡಿದ ಅವಾಂತರ ಪೊಲೀಸರಿಗೆ ಕಿರಿಕಿರಿ ಮಾಡಿದಂತಾಗಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.