Breaking News

ಕೆ.ಪಿ.ಸಿ.ಸಿ. ಸಂಯೋಜಕ ನಂದಕುಮಾರ್ ಹೆಚ್. ಎಂ. ರಿಂದ ಸುಳ್ಯದ ವಿವಿಧೆಡೆ ಅಸಹಾಯಕರಿಗೆ ನೆರವಿನ ಸಹಾಯಹಸ್ತ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

 

ಕೆ.ಪಿ.ಸಿ.ಸಿ ಸಂಯೋಜಕ ನಂದಕುಮಾರ್ ಹೆಚ್.ಎಂ ರವರು ಸುಳ್ಯ ತಾಲೂಕಿನ ವಿವಿಧ ಕಡೆ ಅನಾರೋಗ್ಯದಿಂದ ಸಂಕಷ್ಟಕ್ಕೊಳಗಾದವರಿಗೆ ಸಹಾಯಹಸ್ತ ನೀಡಿದರು. ಸುಳ್ಯ ಕಸಬಾ ಗ್ರಾಮದ ದುಗ್ಗಲಡ್ಕದ ಹಿರಿಯ ಕಾಂಗ್ರೆಸ್ ಕಾರ್ಯಕರ್ತ, ದುಗ್ಗಲಡ್ಕದಲ್ಲಿ ಹಲವಾರು ವರ್ಷಗಳಿಂದ ಟೈಲರಿಂಗ್ ವೃತ್ತಿ ನಿರ್ವಹಿಸುತ್ತಿರುವ ನಾರಾಯಣ ಟೈಲರ್‌ರವರು ಕೆಲವು ದಿನಗಳಿಂದ ಅನಾರೋಗ್ಯದಿಂದಿದ್ದು, ಅವರಿಗೆ ಕೆ.ಪಿ.ಸಿ.ಸಿ .ಸಂಯೋಜಕ ನಂದಕುಮಾರ್ ರವರು ಧನಸಹಾಯ ನೀಡಿದರು. ಸುಳ್ಯದ ಕಾಂತಮಂಗಲ ನಿವಾಸಿ ಹಿರಿಯ ಕಾಂಗ್ರೆಸ್ ಕಾರ್ಯಕರ್ತರಾದ ರಾಜೇಶ್ ಆಚಾರ್ಯರವರು ಕೆಲವು ತಿಂಗಳುಗಳಿಂದ ಪಾರ್ಶ್ವವಾಯುವಿನಿಂದಾಗಿ ಅನಾರೋಗ್ಯಹೊಂದಿದ್ದು ಅವರ ನಿವಾಸಕ್ಕೆ ತೆರಳಿ ಆರೋಗ್ಯ ವಿಚಾರಿಸಿ ಧನಸಹಾಯ ನೀಡಿದ್ದಾರೆ. ಸುಳ್ಯ ಕಾಂತಮಂಗಲದಲ್ಲಿ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿರುವ ಗಣೇಶ ಮತ್ತು ಜ್ಯೋತಿ ದಂಪತಿಗಳ 11 ವರ್ಷದ ಪುತ್ರ ತಶ್ವಿತ್ 2 ತಿಂಗಳ ಹಿಂದೆ ಹಠಾತ್ ಆಗಿ ಆರೋಗ್ಯ ಕ್ಷೀಣಿಸಿ ಮಲಗಿದ್ದಲ್ಲೇ ಇರುವಂತಾಗಿದ್ದು ಇದೀಗ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನಲ್ಲಿ ದಾಖಲಾಗಿದ್ದಾನೆ. ಆತನ ಚಿಕಿತ್ಸೆಗೆ ನೆರವಾಗಲು ನಂದಕುಮಾರ್ ರವರು ಧನಸಹಾಯವನ್ನು ನೀಡಿ ಸ್ಪಂದಿಸಿದ್ದಾರೆ. ಅಮರಮುಡ್ನೂರು ಗ್ರಾಮದ ಕಲ್ಲುಮಲೆ ಎಂಬಲ್ಲಿ ವಾಸವಾಗಿರುವ ಅಶಕ್ತ ಬಡಕುಟುಂಬದ ನಾರಾಯಣ ಮುಗೇರ ಮತ್ತು ಗಂಗು ದಂಪತಿಗಳ ಮನೆಯು ಗಾಳಿ ,ಮಳೆಗೆ ಸಂಪೂರ್ಣ ಹಾನಿಗೊಂಡದ್ದನ್ನು ಮನಗಂಡ ನಂದಕುಮಾರ್ ರವರು ಸ್ಥಳೀಯ ಪಂಚಾಯತ್ ಸದಸ್ಯ ಅಶೋಕ್ ಚೂಂತಾರ್‌ರವರೊಂದಿಗೆ ಸ್ಥಳಕ್ಕೆ ತೆರಳಿ ಅಶಕ್ತ ಕುಟುಂಬಕ್ಕೆ ನೆರವು ನೀಡಿದ್ದಾರೆ.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪಿ.ಎಸ್. ಗಂಗಾಧರ, ಮಾಜಿ ನಗರ ಪಂಚಾಯತ್ ಸದಸ್ಯ ಗೋಕುಲ್ ದಾಸ್, ನಗರ ಕಾಂಗ್ರೆಸ್ ಅಧ್ಯಕ್ಷ ಶಶಿಧರ ಎಂ. ಜೆ.ಇಂಟಕ್ ಅಧ್ಯಕ್ಷ ಶಾಫಿ ಕುತ್ತಮೊಟ್ಟೆ, ರಾಜು ಪಂಡಿತ್, ರಾಮಯ್ಯ ರೈ ಕಜೆಮೂಲೆ ಮೊದಲಾದವರು ಉಪಸ್ಥಿತರಿದ್ದರು.

 

 

 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.