Breaking News

ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ವತಿಯಿಂದ ಪತ್ರಿಕಾ ದಿನಾಚರಣೆ ಮತ್ತು ಆಟಿ ಆಚರಣೆ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಜನರ ವಿಶ್ವಾಸದಿಂದಾಗಿ ಪತ್ರಿಕೋದ್ಯಮ ಉದ್ಯಮವಾಗಿ ಬೆಳೆದಿದೆ: ಜೀತು ನಿಡ್ಲೆ

ಆಟಿ ತಿಂಗಳಲ್ಲಿ ಬರುವ ಆಟಿ ಕಳೆಂಜ ಈಶ್ವರ ದೇವರ ಪ್ರತಿರೂಪ: ಕೇಪು ಅಜಿಲ

ಮಂಗಳೂರು ಸಮಾಚಾರ ಪತ್ರಿಕೆಯ ಪ್ರಾರಂಭವೇ ಪತ್ರಿಕಾ ದಿನಾಚರಣೆಗೆ ನಾಂದಿಯಾಗಿದೆ. ಅದೊಂದು ಪೂರ್ಣ ಪ್ರಮಾಣದ ಪತ್ರಿಕೆಯಾಗಿ ಬೆಳೆದಿತ್ತು. ಆದರೆ ಇಂದಿನ ಕಾಲಘಟ್ಟದಲ್ಲಿ ಮುದ್ರಣ ಮಾಧ್ಯಮ ಕಳೆಗುಂದುತ್ತಿದೆ. ಆದರೂ ತಾಲೂಕು ಮಟ್ಟದ ಪತ್ರಿಕೆಗಳಿಗೆ ಇಂದಿನ ಕಾಲದಲ್ಲಿ ಓದುಗರಿದ್ದಾರೆ. ಜನರ ವಿಶ್ವಾಸದಿಂದಾಗಿ ಪತ್ರಿಕೋದ್ಯಮವು ಇಂದು ಉದ್ಯಮವಾಗಿ ಬೆಳೆದಿದೆ ಎಂದು ಕೇಂದ್ರ ಸಂವಹನ ಶಾಖೆ, ಸಮಾಚಾರ ಮತ್ತು ಪ್ರಸಾರ ಸಚಿವಾಲಯದ ಕ್ಷೇತ್ರ ಪ್ರಚಾರಾಧಿಕಾರಿ ಜೀತು ನಿಡ್ಲೆ ಹೇಳಿದರು.

ಅವರು ಸುಳ್ಯ ತಾಲೂಕು ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ವತಿಯಿಂದ ಪತ್ರಿಕಾ ದಿನಾಚರಣೆ ಮತ್ತು ಆಟಿ ಆಚರಣೆ ಕಾರ್ಯಕ್ರಮನ್ನು ಉದ್ಘಾಟಿಸಿ, ಮಾತನಾಡಿದರು.
ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಸುಳ್ಯ ತಾಲೂಕು ಘಟಕದ ವತಿಯಿಂದ ಪತ್ರಿಕಾ ದಿನಾಚರಣೆ ಮತ್ತು ಆಟಿ ಆಚರಣೆ ಕಾರ್ಯಕ್ರಮವು ಸುಳ್ಯದ ಶ್ರೀಹರಿ ಕಾಂಪ್ಲೆಕ್ಸ್ ನಲ್ಲಿರುವ ರಂಗಮಯೂರಿ ಕಲಾ ಶಾಲೆಯಲ್ಲಿ ಜು.26ರಂದು ಜರುಗಿತು.

ಕೆ.ಜೆ.ಯು. ಸುಳ್ಯ ತಾಲೂಕು ಘಟಕದ ಅಧ್ಯಕ್ಷ ಜೆ.ಕೆ.ರೈ ಅವರು ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಹಿರಿಯ ಪತ್ರಿಕಾ ವಿತರಕರಾದ ದಾಮೋದರ ಪಾಟಾಳಿ ಮಿತ್ತಡ್ಕ ಅವರನ್ನು V4 ನ್ಯೂಸ್ ನ ಎಂ.ಡಿ. ಲಕ್ಷ್ಮಣ್ ಕುಂದರ್ ಅವರು ಸುಳ್ಯ ತಾಲೂಕು ಕೆ.ಜೆ.ಯು. ವತಿಯಿಂದ ಸನ್ಮಾನಿಸಿ, ಗೌರವಿಸಿದರು.

 


ಚೆನ್ನೆಮಣೆ ಆಡುವುದರ ಮೂಲಕ ಜಾನಪದ ವಿದ್ವಾಂಸ ಕೇಪು ಅಜಿಲ ಅವರು ಆಟಿ ಆಚರಣೆಯ ಕುರಿತು ಉಪನ್ಯಾಸ ನೀಡಿ ಮಾತನಾಡಿ ‘ಆಟಿ ತಿಂಗಳಲ್ಲಿ ರೋಗರುಜಿನಗಳು ಹೆಚ್ಚಾಗಿರುವ ಕಾಲವಾಗಿದೆ. ಆಟಿ ತಿಂಗಳಲ್ಲಿ ಬರುವ ಅಮವಾಸ್ಯೆಯ ದಿನ ಎಲ್ಲಾ ಔಷಧಿಗಳು ಬಂದು ಹಾಲೆ ಮರದಲ್ಲಿ ಸೇರಿಕೊಳ್ಳುತ್ತದೆ ಎಂಬ ನಂಬಿಕೆಯಿದೆ. ಆದ್ದರಿಂದ ಆಟಿ ಅಮವಾಸ್ಯೆ ದಿನದಂದು ಹಾಲೆ ಮರದ ಕಷಾಯಕ್ಕೆ ಮಹತ್ವ ನೀಡಲಾಗಿದೆ. ಆಟಿ ತಿಂಗಳಲ್ಲಿ ಬರುವ ಆಟಿ ಕಳೆಂಜ ಈಶ್ವರ ದೇವರ ಪ್ರತಿರೂಪ. ಊರಿನ ಜನರ ಯೋಗಕ್ಷೇಮ ವಿಚಾರಿಸಲು ತುಳುನಾಡಿನಲ್ಲಿ ಮನೆಮನೆಗೆ ಬರುವುದು ರೂಡಿಯಾಗಿದೆ” ಎಂದು ಹೇಳಿದರು.


ಮುಖ್ಯ ಅತಿಥಿಗಳಾಗಿ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ದ.ಕ. ಜಿಲ್ಲಾಧ್ಯಕ್ಷ ಹರೀಶ್ ಬಂಟ್ವಾಳ್, ಜಿಲ್ಲಾ ಪ್ರ.ಕಾರ್ಯದರ್ಶಿ ತಾರನಾಥ ಗಟ್ಟಿ ಕಾಪಿಕಾಡು, ತಾಲೂಕು ಘಟಕದ ಗೌರವಾಧ್ಯಕ್ಷ ಉಮೇಶ್ ಮಣಿಕ್ಕಾರ ಅವರು ಪತ್ರಿಕಾ ದಿನಾಚರಣೆ ಹಾಗೂ ಆಟಿ ಆಚರಣೆಗೆ ಶುಭಹಾರೈಸಿದರು.
ಈ ಸಂದರ್ಭದಲ್ಲಿ ವಿದ್ಯಾಭ್ಯಾಸದಲ್ಲಿ ವಿಶೇಷ ಸಾಧನೆ ಮಾಡಿದ ಸಂಘದ ಸದಸ್ಯರ ಮಕ್ಕಳಾದ ಅನುಷ್ ಕೊಯಿಂಗೋಡಿ ಹಾಗೂ ಕು. ಸ್ಮಿತಾ ಬಂಟ್ವಾಳ್, ಕು. ಶಮಿತಾ ಜೆ. ರೈ  ಅವರಿಗೆ ಪುರಸ್ಕಾರ ಮಾಡಲಾಯಿತು. ತಾಲೂಕು ಘಟಕದ ಕೋಶಾಧಿಕಾರಿ ಶಿವರಾಮ ಕಜೆಮೂಲೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪಾಧ್ಯಕ್ಷೆ ಶ್ರೀಮತಿ ಜಯಶ್ರೀ ಕೊಯಿಂಗೋಡಿ ಸ್ವಾಗತಿಸಿ, ಕಾರ್ಯದರ್ಶಿ ಶಿವಪ್ರಸಾದ್ ಆಲೆಟ್ಟಿ ವಂದಿಸಿದರು. ಕೆಜೆಯು ನ ಜಿಲ್ಲಾ ಸಮಿತಿ ಸದಸ್ಯ ರಮೇಶ್ ನೀರಬಿದಿರೆ ಕಾರ್ಯಕ್ರಮ  ನಿರೂಪಿಸಿದರು.

75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಸುದ್ದಿ ಜನಾಂದೋಲನ ವೇದಿಕೆ ವತಿಯಿಂದ ಹಮ್ಮಿಕೊಂಡ ಸ್ವಾತಂತ್ರ್ಯ  ಅಮೃತ ಮಹೋತ್ಸವದ ಆಚರಣೆಯ ಕುರಿತು ಮಾಹಿತಿ ನೀಡಲಾಯಿತು. ಬಳಿಕ ಲಂಚ ಭ್ರಷ್ಟಾಚಾರ  ಮುಕ್ತ ಆಂದೋಲನದ ಘೋಷಣೆ ಕೂಗಿ ಪ್ರತಿಜ್ಞೆ ಕೈಗೊಳ್ಳಲಾಯಿತು.


ಸುಳ್ಯದ ನೆಹರೂ ಮೆಮೋರಿಯಲ್ ಪ.ಪೂ.ಕಾಲೇಜು, ಶಾರದಾ ಪದವಿ ಪೂರ್ವ ಕಾಲೇಜು ಹಾಗೂ ಸುಳ್ಯ ಸರಕಾರಿ ಪ್ರ.ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಹಾಗೂ
ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಸುಳ್ಯ ತಾಲೂಕಿನ ಪದಾಧಿಕಾರಿಗಳು ಉಪಸ್ಥಿತರಿದ್ದರು. ಆಟಿ ಆಚರಣೆಯ ಪ್ರಯುಕ್ತ ಹಲವು ಬಗೆಯ ವಿವಿಧ ಖಾದ್ಯಗಳನ್ನು ತಯಾರಿಸಲಾಗಿತ್ತು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.