ತುಕರಾಮ ಏನೆಕಲ್ಲು,ಪಿ.ಜಿ. ಅಂಬೆಕಲ್, ಚಂಡೀರ ಬಸಪ್ಪ ಅವರಿಗೆ ಪ್ರಶಸ್ತಿ
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ನೀಡುವ 2021ನೇ ಸಾಲಿನ ಗೌರವ ಪ್ರಶಸ್ತಿ ಪ್ರಕಟಿಸಲಾಗಿದೆ. ತುಕರಾಂ ಏನೆಕಲ್ಲು, ಪಿ.ಜಿ. ಅಂಬೆಕಲ್, ಚಂಡೀರ ಬಸಪ್ಪ ಇವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಅಕಾಡೆಮಿಯ ಅಧ್ಯಕ್ಷ ಲಕ್ಷ್ಮೀ ನಾರಾಯಣ ಕಜೆಗದ್ದೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಶಸ್ತಿ ಪುರಸ್ಕೃತರ ಪರಿಚಯ:
ತುಕರಾಮಏನೆಕಲ್ಲು-ರಂಗಭೂಮಿಕ್ಷೇತ್ರ
ದಕ್ಷಿಣಕನ್ನಡಜಿಲ್ಲೆಯಕಡಬ ತಾಲೂಕಿನಏನೆಕಲ್ಲುಗ್ರಾಮದ ಶ್ರೀ ತುಕರಾಂಏನೆಕಲ್ಲುಇವರುವೃತ್ತಿಯಲ್ಲಿಕಾಲೇಜುದೈಹಿಕ ನಿರ್ದೇಶಕರಾಗಿದ್ದು, ಈಗ ನಿವೃತ್ತರು. ೧೯೯೨ ರಲ್ಲಿಕಡಬ ತಾಲೂಕಿನ ಸುಬ್ರಹ್ಮಣ್ಯದಕೆ.ಯಸ್.ಯಸ್ಕಾಲೇಜಿನಲ್ಲಿ ‘ಕುಸುಮ ಸಾರಂಗ’ ರಂಗಘಟಕ ಸ್ಥಾಪನೆ, ೨೩ ವರ್ಷದಲ್ಲಿ ೨೬ ನಾಟಕ ನಿರ್ಮಾಣ ಮಾಡಿಅರೆಭಾಷೆಪರಿಸರದ ಹಲವಾರುಗ್ರಾಮೀಣ ಪ್ರತಿಭೆಗಳನ್ನು ಆಧುನಿಕರಂಗಭೂಮಿಗೆಕರೆತಂದುರಂಗ ಶಿಕ್ಷಣ ನೀಡಿರುತ್ತಾರೆ. ಕುಸುಮಸಾರಂಗರಂಗತಂಡದ ಹಳೆ ವಿದ್ಯಾರ್ಥಿಗಳು ಪ್ರತಿಷ್ಠಿತ ‘ನೀನಾಸಂ’ ಸಂಸ್ಥೆಗೆ ಆಯ್ಕೆಯಾಗಿರುವುದರ ಹಿಂದೆಇವರಕೊಡುಗೆಅಪಾರ.ಇವರ ನೇತೃತ್ವದಲ್ಲಿ ನಿರ್ಮಾಣಗೊಂಡಮಹಮಾಯಿ(ನಿರ್ದೇಶನಜೀವನರಾಂ,ಸುಳ್ಯ)ಚಿತ್ರಪಟ, ಹರಿಣಾಭಿಸರಣ (ನಿರ್ದೇಶನ-ಮಂಜುನಾಥ ಬಡಿಗೇರ್)ಸಿರಿಸಂಪಿಗೆ (ನಿರ್ದೇಶನ-ಕೃಷ್ಣಮೂರ್ತಿಕವತ್ತಾರು) ನಾಟಕಗಳಿಗೆರಾಜ್ಯ ಮಟ್ಟದ ಪ್ರಶಸ್ತಿ ದೊರಕಿದೆ.ಇವರಿಗೆಕರ್ನಾಟಕರಾಜ್ಯ ನಾಟಕಅಕಾಡೆಮಿ ೨೦೧೦ ರಲ್ಲಿಪ್ರಶಸ್ತಿ ನೀಡಿ ಗೌರವಿಸಿದೆ ಎಂಬುದುಉಲ್ಲೇಖಾರ್ಹ.ಇತ್ತಿಚೇಗೆದ.ಕಜಿಲ್ಲಾ ಸಿ.ಜಿ.ಕೆ ರಂಗ ಪ್ರಶಸ್ತಿಗೂ ಇವರು ಭಾಜನರಾಗಿರುತ್ತಾರೆ.
ಚಂಡೀರ .ಕೆ.ಬಸಪ್ಪ – ಸಂಸ್ಕ್ರತಿಕ್ಷೇತ್ರ
ಕೊಡಗುಜಿಲ್ಲೆಯ, ಮಡಿಕೇರಿತಾಲೂಕಿನ, ನಾಪೋಕ್ಲು ನಾಡು, ಕೋಕೇರಿಗ್ರಾಮದಚಂಡೀರ ಕೆ.ಬಸಪ್ಪ ನವರಾದಇವರುಎಸ್ಎಸ್ಎಲ್ಸಿ ವಿದ್ಯಾಬ್ಯಾಸದ ನಂತರ ಭಾರತೀಯ ಭೂ ಸೇನೆಯಲ್ಲಿ ಸುಭೇಧಾರ್ ಆಗಿ ನಿವೃತ್ತಿ ಹೊಂದಿದ್ದು, ಪ್ರಸ್ತುತ ಮೈಸೂರಿನಲ್ಲಿ ನೆಲೆಸಿದ್ದು, ಇವರುಅರೆಭಾಷೆಯಲ್ಲಿ ಶ್ರೀ ಮಾತೆಕಾವೇರಿ ಸುಪ್ರಭಾತರಚನೆ, ಶ್ರೀ ಪಾಡಿಇಗ್ಗುತಪ್ಪದೇವರ ಸುಪ್ರಬಾತರಚನೆ, ಅರೆಭಾಷೆಯಲ್ಲಿದೇವರ ನಾಮಗಳ ರಚನೆ ಹೀಗೆ ಅರೆಭಾಷೆಯಲ್ಲಿಕತಿರಚನೆಅಲ್ಲದೆ ಸೋಬಾನೆ ಹಾಡುಗಾರರಾಗಿಜೊತೆಗೆ ಅರೆಭಾಷೆ ಸಂಸ್ಕೃತಿಯ ಬಗ್ಗೆ ಅಪಾರ ಪ್ರೀತಿಇಟ್ಟುಕೊಂಡು ಮೈಸೂರು ನಗರದ ಬಹು ಸಂಸ್ಕೃತಿಯ ವಾತವರಣದಲ್ಲಿ ಅರೆಭಾಷೆ ಸಂಸ್ಕೃತಿ ಉಳಿಸಲು ಪಣತೊಟ್ಟಿರುವುದುಇವರ ವಿಶೇಷತೆ.
.ಜಿ.ಅಂಬೆಕಲ್ (ಪುಟ್ಟಣ್ಣಗೌಡಅಂಬೆಕಲ್) -ಸಾಹಿತ್ಯಕ್ಷೇತ್ರ
ಶ್ರೀಯುತರು ದಕ್ಷಿಣಕನ್ನಡಜಿಲ್ಲೆಯ, ಸುಳ್ಯ ತಾಲ್ಲೂಕು, ಅಮರ ಮುಡ್ನೂರುಗ್ರಾಮದ ಪೈಲಾರು ನಲ್ಲಿ ಜನಿಸಿ ಎಂ.ಎ, ಬಿಇಡಿ ಪದವಿ ಪಡೆದಿರುವಇವರುಕೊಡಗುಜಿಲ್ಲೆಯ ಚೆಟ್ಟಳ್ಳಿ ಫ್ರೌಢಶಾಲೆಯಲ್ಲಿ ಶಿಕ್ಷಕ ವೃತ್ತಿಯಲ್ಲಿದ್ದು, ನಿವೃತ್ತಿಗೊಂಡ ನಂತರ ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.
ಇವರಪ್ರಕಟಿತ ಕೃತಿಗಳು: * ತಬ್ಲಿ ಮಂಞ-ಅರೆಭಾಷೆ ಕಥಾಸಂಕಲನ, * ಗೂಡೆ ಬೇಕಾಗುಟ್ಟು-ಅರೆಭಾಷೆ ನಾಟಕಗಳ ಜೊಂಪೆ, * ನಿನ್ನ ಪ್ರೇಮದ ಪರಿಯ-ಕನ್ನಡಕಥಾ ಸಂಕಲನ * ಅವರವರಕಣ್ಣ್ಲಿ- ಅರೆಭಾಷೆ ಕಥಾಸಂಕಲನ (ಅಚ್ಚಿನಲ್ಲಿದೆ)
ಇವರುಅರೆಭಾಷೆಯಲ್ಲಿಕೊಡಗು ಸಂಗಾತಿ, ಗೌಡದೊನಿ ಮತ್ತು ಹಿಂಗಾರಪತ್ರಿಕೆಯಲ್ಲಿ ಹಲವಾರುಅರೆಬಾಷೆ ಲೇಖನಗಳ ಮೂಲಕ ಅರೆಭಾಷೆ ಸಮುದಾಯಕ್ಕೆಚಿರಪರಿಚಿತರು.ಅಭಿನಯಇವರ ಹವ್ಯಾಸ ಹಲವಾರು ನಾಟಕಗಳಲ್ಲಿ ಅಭಿನಯಿಸಿದ್ದು ಮಾತ್ರವಲ್ಲದೆ ಹಲವಾರು ಶಾಲಾ ವಿದ್ಯಾರ್ಥಿಗಳನ್ನು ಕೂಡರಂಗಕ್ಕೆಕರೆತಂದಿದ್ದಾರೆ.ಸೋಮವಾರಪೇಟೆತಾಲ್ಲೂಕಿನ ಆಲೂರು-ಸಿದ್ದಾಪುರದಲ್ಲಿ ನಡೆದ ೨ಡನೇ ಅರೆಭಾಷೆ ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತ್ಯಕ್ಷೇತ್ರದ ಸಾಧನೆಗಾಗಿಗೌರವ ಸನ್ಮಾನ ಪಡೆದಿರುತ್ತಾರೆ.