ಸ್ವಾತಂತ್ರ್ಯೋತ್ಸವ ಅಮೃತಮಹೋತ್ಸವದ ಪ್ರಯುಕ್ತ ಮುಂಬರುವ ಆ.15ರಂದು ಪ್ರತೀ ಮನೆ ಮನೆಗಳಲ್ಲಿ ಸ್ವಾತಂತ್ರ್ಯೋತ್ಸವ ಅಮೃತಮಹೋತ್ಸವನ್ನು ಹಬ್ಬವನ್ನಾಗಿ ಆಚರಿಸುವ ನಿಟ್ಟಿನಲ್ಲಿ ಸುದ್ದಿ ಸ್ವಾತಂತ್ರ್ಯ ರಥವು ಇಂದು ಕೊಡಿಯಾಲ ಪಂಚಾಯತ್ ಗೆ ಆಗಮಿಸಿದಾಗ ಗ್ರಾಮಸ್ಥರು ಸ್ವಾಗತಿಸಿದರು.
ಸುದ್ದಿ ವರದಿಗಾರ ಶಿವಪ್ರಸಾದ್ ಆಲೆಟ್ಟಿ ಮಾತನಾಡಿ ಗ್ರಾಮದ ಪ್ರತೀ ಮನೆ ಮನೆಗಳಲ್ಲಿ ಆ.15ರಂದು ಸ್ವಾತಂತ್ರ್ಯೋತ್ಸವ ಅಮೃತಮಹೋತ್ಸವವನ್ನು ಹಬ್ಬದ ರೀತಿಯಲ್ಲಿ ಆಚರಿಸುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಚಂದ್ರಾವತಿ, ಪಂಚಾಯತ್ ಸಿಬ್ಬಂದಿಗಳಾದ ಗುರುಪ್ರಸಾದ್, ರಾಜೇಶ್ವರಿ, ಸುದ್ದಿ ವರದಿಗಾರರಾದ ಗಣೇಶ್ ಕುಕ್ಕುದಡಿ, ಜಯಶ್ರೀ ಕೊಯಿಂಗೋಡಿ
ಉಪಸ್ಥಿತರಿದ್ದರು.