ಬೆಳ್ಳಾರೆಯಲ್ಲಿ ಉದ್ಯಮಿಯಾಗಿದ್ದ ಪ್ರವೀಣ್ ನೆಟ್ಟಾರುರವರನ್ನು ದುಶ್ಕರ್ಮಿಗಳು ಕೊಲೆ ಮಾಡಿದ ಹಿನ್ನೆಲೆಯಲ್ಲಿ ಜು. 27ರಂದು ಸಂಜೆ ಎಡಮಂಗಲದಲ್ಲಿ ಸಭೆ ಸೇರಿದ ಕಾರ್ಯಕರ್ತರು ಫೊಟೊ ತೆಗೆದು ಪ್ರವೀಣ್ ನೆಟ್ಟಾರು ಕೊಲೆ ಆರೋಪಿಗಳಿಗೆ ಗಲ್ಲು ಶಿಕ್ಷೆ ಆಗುವ ತನಕ ಪಕ್ಷದ ಕಾರ್ಯಕ್ರಮದಲ್ಲಿ ಭಾಗವಹಿಸದಿರಲು ನಿರ್ಧಾರ ಎಂದು ಬರೆದು ವಾಟ್ಸಾಪ್ ಸ್ಟೇಟಸ್ ಹಾಕಿಕೊಂಡಿರುವುದಾಗಿ ತಿಳಿದುಬಂದಿದೆ.