ನಿನ್ನೆ ಸಂಜೆ ಸುರಿದ ಭಾರೀ ಮಳೆಗೆ ಸುಳ್ಯ ಸಮೀಪದ ಕಂದಡ್ಕದಲ್ಲಿ ತೋಟಗಳು ನೀರಿನಿಂದ ಜಲಾವೃತಗೊಂಡತ್ತಾಗಿದೆ.
ಕಂದಡ್ಕ ಮುತ್ತುಮಾರಿಯಮ್ಮ ಗುಡಿಯ ಬಳಿ ನೀರಿನಿಂದ ರಸ್ತೆ ಬ್ಲಾಕ್ ಆಗಿತ್ತಲ್ಲದೆ ಸುಳ್ಯ ನ.ಪಂ. ಅಧ್ಯಕ್ಷ ವಿನಯ್ ಕಂದಡ್ಕರ ತೋಟಕ್ಕೆ, ಅವರ ಸಹೋದರ ಹೇಮಂತ್ ಕಂದಡ್ಕರ ತೋಟಕ್ಕೆ, ಆನಂದ ನಾಯಕ್ ರವರ ತೋಟಕ್ಕೆ ತೋಡಿನ ಕಟ್ಟೆ ಒಡೆದು ನೀರು ತೋಟದೊಳಗೆ ನುಗ್ಗಿದೆ.