ಮುಳ್ಳೇರಿಯಾ ಮಂಡಲಾಂತರ್ಗತ ಹವ್ಯಕ ವಲಯ ಸುಳ್ಯದ ಜುಲೈ ತಿಂಗಳ ಸಭೆ ಶಿವಕೃಪಾ ಕಲಾಮಂದಿರದಲ್ಲಿ ಜು.10.ರಂದು ವಲಯಾಧ್ಯಕ್ಷ ವಿಷ್ಣುಕಿರಣ ನೀರಬಿದಿರೆಯವರ ಅಧ್ಯಕ್ಷತೆಯಲ್ಲಿ ಜರುಗಿತು. ಧ್ವಜಾರೋಹಣ, ಶಂಖನಾದ, ಗುರು-ಗೋವಂದನೆಯೊಂದಿಗೆ ಸಭೆ ಆರಂಭವಾಯಿತು.
ಕಾರ್ಯದರ್ಶಿ ಅಶೋಕರಾಮ ಪಿಲಿಂಗುಳಿ ಗತಸಭೆಯ ವರದಿಯನ್ನೂ, ಕೋಶಾಧಿಕಾರಿ ಸರವು ಈಶ್ವರ ಭಟ್ ಲಕ್ಷ್ಮಿಶಾಖಾ ವರದಿಯನ್ನು ಮಂಡಿಸಿದರು. ವಿಭಾಗವಾರು ವರದಿಗಳನ್ನು ವಿವಿಧ ವಿಭಾಗ ಪ್ರಧಾನರು ಸಭೆಯ ಮುಂದಿಟ್ಟರು.
2021-22 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ವಿಶಿಷ್ಟ ಸಾಧನೆ ಮಾಡಿದ 7 ಮಂದಿ, ಪಿಯುಸಿಯಲ್ಲಿ ವಿಶಿಷ್ಟ ಸಾಧನೆ ಮಾಡಿದ 5 ಮಂದಿ, ಪದವಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ಇಬ್ಬರು ಹಾಗೂ ಪಠ್ಯೇತರ ವಿಷಯದಲ್ಲಿ ಸಾಧನೆ ಮಾಡಿದ 4 ಮಂದಿಯನ್ನು ವಲಯದ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು.
ಸಭೆಯಲ್ಲಿ ಉಪಸ್ಥಿತರಿದ್ದ ಮಂಡಲ ವೈದಿಕ ಪ್ರಧಾನರಾದ ವೇ.ಮೂ. ವೆಂಕಟೇಶ ಶಾಸ್ತ್ರಿ ಹಾಗೂ ಮಂಡಲ ಸೇವಾ ವಿಭಾಗ ಪ್ರಧಾನರಾದ ಈಶ್ವರ ಕುಮಾರ ಭಟ್ ಮತ್ತು ವಲಯ ಪದಾಧಿಕಾರಿಗಳು, ಗುರಿಕ್ಕಾರರು, ಅಂಗಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ರಾಮತಾರಕ ಮಂತ್ರ, ಶಾಂತಿ ಮಂತ್ರ, ಧ್ವಜಾವತರಣ, ಶಂಖನಾದದೊಂದಿಗೆ ಸಭೆ ಸಂಪನ್ನವಾಯಿತು.