ಸುನ್ನೀ ಜಂಇಯ್ಯತ್ತುಲ್ ಮುಅಲ್ಲಿಮೀನ್ ಎಸ್ ಜೆ ಎಂ ಸುಳ್ಯ ರೇಂಜ್ ಇದರ ಕಾನ್ಫರೆನ್ಸ್ ಹಾಗೂ ಇತ್ತೀಚೆಗೆ ಅಗಲಿದ ಮರ್ಹೂಂ ಅಬ್ದುಲ್ ಹಮೀದ್ ಮುಸ್ಲಿಯಾರ್ ಕುಂಬ್ರ ರವರ ಅನುಸ್ಮರಣೆ ಕಾರ್ಯಕ್ರಮವು ಹಯಾತುಲ್ ಇಸ್ಲಾಂ ಮದ್ರಸ ಗೂನಡ್ಕ ದಲ್ಲಿ ನಡೆಯಿತು.
ಅಸ್ಸಯ್ಯಿದ್ ಹುಸೈನ್ ಪಾಷಾ ಸಅದಿ ತಂಙಳ್ ಅನ್ಸಾರಿಯ್ಯಾ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ರೇಂಜ್ ಅಧ್ಯಕ್ಷ ಮುಹಮ್ಮದ್ ಸಖಾಫಿ ಮೊಗರ್ಪಣೆ ಅಧ್ಯಕ್ಷತೆ ವಹಿಸಿದರು. ಪ್ರಧಾನ ಕಾರ್ಯದರ್ಶಿ ನಿಝಾರ್ ಸಖಾಫಿ ಮುಡೂರು ಸ್ವಾಗತ ಮತ್ತು ವರದಿ ವಾಚಿಸಿದರು. ಅಬೂಬಕ್ಕರ್ ಸಖಾಫಿ ಪೆರಾಜೆ ಖಿರಾಅತ್ ಪಠಿಸಿ ಮುಹಮ್ಮದ್ ಅಲಿ ಸಖಾಫಿ ಮಾದಾಪುರ ಖತೀಬ್ ಬದ್ರಿಯಾ ಜುಮಾ ಮಸ್ಜಿದ್ ಗೂನಡ್ಕ ಉದ್ಘಾಟಿಸಿದರು ಬದರುಲ್ ಮುನೀರ್ ಹನೀಫಿ ಏಣಾವರ ಮಾದರಿ ತರಗತಿ ನಡೆಸಿದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಸಖಾಫಿ ಪುಂಡೂರು ನಿರೂಪಿಸದರು ಮೊಯಿದೀನ್ ನೌಶಾದ್ ಮದನಿ ಅನ್ಸಾರಿಯಾ ಪ್ರಬಂಧ ಮಂಡಿಸಿ ಅಬ್ದುಲ್ ಕರೀಂ ಸಖಾಫಿ ಜಯನಗರ ನ್ಯೂಸ್ ರೀಡಿಂಗ್ ನಡೆಸಿದರು.
ಅಬ್ದುಲ್ ಖಾದರ್ ಮುಸ್ಲಿಯಾರ್ ಎಡಪ್ಪಲಂ ಕ್ವಿಝ್ ನಡೆಸಿ,ಜುನೈದ್ ಹಿಮಮಿ ಸಖಾಫಿ ಜಾಲ್ಸೂರ್ ಟೌನ್ ಬುರ್ಧಾ ಆಲಾಪನೆ ನಡೆಸಿದರು ಮುಹಮ್ಮದ್ ಹನೀಫ್ ಸಖಾಫಿ ಬೆಳ್ಳಾರೆ ಪರೀಕ್ಷಾ ಸಂಬಂಧ ಹಾಗೂ ಮಿಶನರಿ ಮತ್ತು ಎಸ್ ಎಂ ಎ ಸಂಬಂಧಿತ ಮಾಹಿತಿಗಳನ್ನು ಅಬ್ದುಲ್ ಲತೀಫ್ ಸಖಾಫಿ ಗೂನಡ್ಕ ನೀಡಿದರು. ಎಸ್ ಜೆ ಎಂ ಕೇಂದ್ರ ಸಮಿತಿ ನಡೆಸಿದ ರೇಂಜ್ ಮಟ್ಟದ ಖುರ್ ಆನ್ ಪಾರಾಯಣ ಶಾಸ್ತ್ರ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದ ಅಬ್ದುಲ್ ಕರೀಂ ಸಖಾಫಿ ಜಯನಗರ ದ್ವಿತೀಯ ಸ್ಥಾನ ಪಡೆದ ಶಾಹುಲ್ ಹಮೀದ್ ಸಖಾಫಿ ಬಂಬ್ರಾಣಿ ಯವರನ್ನು ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು.
ಬದ್ರಿಯಾ ಜುಮಾ ಮಸೀದಿ ಗೂನಡ್ಕ ಅಧ್ಯಕ್ಷರಾದ ಹಾಜಿ ಅಬ್ದುಲ್ಲ ಕೊಪ್ಪತ್ತಕಜೆ ಎಸ್ ಎಂ ಎ ಪೂರ್ವಾಧ್ಯಕ್ಷ ಮುಹಮ್ಮದ್ ಕುಂಞ್ಞಿ ಗೂನಡ್ಕ ಶುಭ ಹಾರೈಸಿದರು. ಜಮಾಅತ್ ಪ್ರಧಾನ ಕಾರ್ಯದರ್ಶಿ ಉಮ್ಮರ್ ಪಿ ಎ ಕಾರ್ಯದರ್ಶಿ ಅಶ್ರಫ್ ಏ ಟಿ, ಸದಸ್ಯರುಗಳಾದ ಸಿದ್ದೀಖ್ ಗೂನಡ್ಕ, ಹಾರಿಸ್ ಝಂ ಝಂ, ಅಬ್ದುಲ್ಲ ಜಿ ಎಂ ಮುಂತಾದವರು ಉಪಸ್ಥಿತರಿದ್ದರು.ರೇಂಜ್ ಕೋಶಾಧಿಕಾರಿ ಶಾಹುಲ್ ಹಮೀದ್ ಸಖಾಫಿ ಜಾಲ್ಸೂರು ವಂದಿಸಿದರು. ಗೂನಡ್ಕ ಜಮಾಅತ್ ವತಿಯಿಂದ ಆತಿಥ್ಯ ಸತ್ಕಾರ ಏರ್ಪಡಿಸಲಾಗಿತ್ತು.