Breaking News

ಗೂನಡ್ಕ : ಡಾಕ್ಟರೇಟ್ ಪುರಸ್ಕೃತ ತಾಜುದ್ದೀನ್ ಟರ್ಲಿ ಹಾಗೂ ಎನ್‌ಎಸ್‌ಯುಐ ಕಾರ್ಯದರ್ಶಿಯಾಗಿ ನೇಮಕಗೊಂಡ ಉಬೈಸ್‌ರವರಿಗೆ ಸನ್ಮಾನ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

ಅತ್ಯಂತ ಕಿರಿಯ ವಯಸ್ಸಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಎನ್.ಎಸ್.ಯು.ಐ ನೂತನ ಕಾರ್ಯದರ್ಶಿಯಾಗಿ ಆಯ್ಕೆಗೊಂಡ ಉಬೈಸ್ ಗೂನಡ್ಕರವರನ್ನು ಎನ್.ಎಸ್.ಯು.ಐ. ಪರವಾಗಿ ಹುಟ್ಟೂರಿನಲ್ಲಿ ಸನ್ಮಾನಿಸಲಾಯಿತು.

ಇತ್ತೀಚಿಗೆ ಗೌರವ ಡಾಕ್ಟರೇಟ್ ಪದವಿಯನ್ನು ಪಡೆದು ಸಂಪಾಜೆ ಗ್ರಾಮಕ್ಕೆ ಗೌರವವನ್ನು ತಂದು ಕೊಟ್ಟ ಡಾಕ್ಟರ್ ತಾಜುದ್ದೀನ್ ತೆಕ್ಕಿಲ್ ಟರ್ಲಿ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಸನ್ಮಾನ ಸಮಾರಂಭವನ್ನು ಉದ್ದೇಶಿಸಿ ಕೆಪಿಸಿಸಿಯ ಮಾಜಿ ಕಾರ್ಯದರ್ಶಿ ಹಾಗೂ ತೆಕ್ಕಿಲ್ ಶಿಕ್ಷಣ ಸಂಸ್ಥೆಯ ಸ್ಥಾಪಕರಾದ ಟಿ.ಎಂ ಶಾಹೀದ್ ತೆಕ್ಕಿಲ್ ಮಾತನಾಡುತ್ತಾ ಕಾಂಗ್ರೇಸ್ ಪಕ್ಷ ಜಾತ್ಯತೀತ ಪಕ್ಷವಾಗಿದ್ದು ಯುವ ಸಮೂಹ ಕೋಮುವಾದಿ ಪಕ್ಷಗಳೊಂದಿಗೆ ಕೈ ಜೋಡಿಸಿದೆ ಇರುವಂತೆ ಎನ್.ಎಸ್.ಯು.ಐ ಕಾರ್ಯಕರ್ತರು, ವಿದ್ಯಾರ್ಥಿ ಘಟಕವು ಶ್ರಮವಹಿಸಿ ಜ್ಯಾತ್ಯಾತೀತ ತತ್ವವನ್ನು ಎತ್ತಿ ಹಿಡಿಯಬೇಕಾಗಿದೆ ಎಂದು ಯುವಕರಿಗೆ ಕರೆ ನೀಡಿದರು ವಿದ್ಯಾರ್ಥಿಗಳಿಗೆ ತೊಂದರೆ ಆದಾಗ ಸ್ಪಂದಿಸಿ ಅವರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಬೇಕು ಅತ್ಯಂತ ಕಿರಿಯ ವಯಸ್ಸಿನಲ್ಲಿ ಎನ್. ಎಸ್.ಯು. ಐ ಜಿಲ್ಲಾ ಕಾರ್ಯದರ್ಶಿಯಾಗಿ ಆಯ್ಕೆಯಾದ ಉಬೈಸ್ ಗೂನಡ್ಕ ಅವರನ್ನು ಪ್ರಶಂಸಿಸಿದರು.

ಶ್ರೀಮಂತಿಕೆಯಲ್ಲಿ ಹುಟ್ಟಿ ಕಡು ಬಡತನದಲ್ಲಿ ಇದ್ದರು ಸಹ ಸಮಾಜ ಸೇವೆ ಮಾಡುತ್ತಿರುವ ಡಾಕ್ಟರೇಟ್ ಪುರಸ್ಕೃತ ತಾಜುದ್ದೀನ್ ತೆಕ್ಕಿಲ್ ಅವರನ್ನು ಅಭಿನಂದಿಸಿ ಈ ಊರಿಗೆ ಸೇವೆ ಸಲ್ಲಿಸಿದ ತಮ್ಮ ಕುಟುಂಬದ ಹಾಗೂ ಊರಿನ ಹಿರಿಯ ತಲೆಮಾರಿನ ಹಲವರನ್ನು ಸ್ಮರಿಸಿದರು ನಾನು 28 ವರ್ಷಗಳ ಹಿಂದೆ ರಾಜ್ಯ ಎನ್.ಎಸ್.ಯು. ಐ ಪ್ರಧಾನ ಕಾರ್ಯದರ್ಶಿ ಯಾಗಿ ಇಂದಿನ ವರೆಗೆ ಒಂದೇ ಪಕ್ಷ ಹಾಗೂ ಜಾತ್ಯತೀತ ತತ್ವ ದೊಂದಿಗೆ ಸೇವೆ ಸಲ್ಲಿಸಿ ಅನೇಕ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣದ ಜೊತೆಗೆ ಬೇರೆ ಬೇರೆ ರೀತಿಯಲ್ಲಿ ಊರಿಗೆ ಸಹಾಯ ಮಾಡಿದ್ದು ಯುವ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕಗಳಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದು ಈ ಗ್ರಾಮಕ್ಕೆ ಹಲವು ಅನುದಾನವನ್ನು ತಂದು ಸಮಾಜದ ಕಟ್ಟಕಡೆಯ ವರ್ಗದ ಧ್ವನಿಯಾಗಿ ಕೆಲಸ ಮಾಡುತ್ತಿದ್ದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೆ ಅತೀ ಹೆಜ್ಜೆ ಕಾಂಗ್ರೇಸ್ ಸದಸ್ಯತ್ವವನ್ನು ನೊಂದಾಯಿಸಿರುದರ ಬಗ್ಗೆ ನನಗೆ ಹೆಮ್ಮೆ ಇದೆ ಆದರೂ ಸಹ ಅತ್ಯಂತ ಕಿರಿಯ ವಯಸ್ಸಿನಲ್ಲಿ ಪಕ್ಷಕ್ಕೆ 35 ವರ್ಷಗಳಿಂದ ತನು ಮನ ಧನ ಅರ್ಪಿಸಿದರು ಸಹ ಪಕ್ಷದಿಂದ ಸೂಕ್ತ ಸ್ಥಾನಮಾನ ದೊರೆಯದೆ ಇರುದಕ್ಕೆ ಬೇಸರವಿಲ್ಲ ಮುಂದೊಂದು ದಿನ ಅವಕಾಶ ಸಿಗಬಹುದು ಎಂಬ ಆಶಾಭಾವ ಹೊಂದಿದ್ದೇನೆ. ವಿದ್ಯಾರ್ಥಿಗಳು ನಾಯಕತ್ವ ಗುಣ ಮತ್ತು ಜಾತ್ಯಾತೀತ ತತ್ವವನ್ನು ಅಳವಡಿಸಿಕೊಂಡು ಸಮಾಜಕ್ಕೆ ಮಾದರಿಯಾಗಬೇಕು ಎಂದು ಅಧಿಕಾರದ ಹಿಂದೆ ಹೋಗದೆ ಸೇವೆ ಮಾಡಿ ಎಂದು ಕರೆ ನೀಡಿದರು.

ಸಭೆಯನ್ನು ಉದ್ದೇಶಿಸಿ ಅರಂತೋಡು ತಾಲೂಕ್ ಪಂಚಾಯತ್ ಕ್ಷೇತ್ರದ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾದ ರಹೀಂ ಬೀಜದಕಟ್ಟೆ,ಸುಳ್ಯ ಬ್ಲಾಕ್ ಕಾಂಗ್ರೇಸ್ ಸದಸ್ಯ ತಾಜುದ್ದೀನ್ ಅರಂತೋಡು, ಎನ್ ಎಸ್ ಯು ಐ ನ ಇಜ್ಜಾಝ್ ಗೂನಡ್ಕ ಅಭಿನಂದನಾ ಭಾಷಣವನ್ನು ಮಾಡಿದರು ಸನ್ಮಾನ ಸ್ವೀಕರಿಸಿದ ಉಬೈಸ್ ಗೂನಡ್ಕ ಮತ್ತು ತಾಜುದ್ದೀನ್ ತೆಕ್ಕಿಲ್ ಟರ್ಲಿ ಕೃತಜ್ಞತೆಯನ್ನು ಅರ್ಪಿಸಿದರು ಈ ಸಭೆಯಲ್ಲಿ ಕಾಂಗ್ರೆಸ್ ಮುಕಂಡರಾದ ಸಿ.ಎಂ ಅಬ್ದುಲ್ಲಾ ಚೇರೂರ್, ಪೇರಡ್ಕ ಮಸ್ಜಿದ್ ಕಾರ್ಯದರ್ಶಿ ಟಿ ಎಂ ರಜಾಕ್ ಹಾಜಿ ತೆಕ್ಕಿಲ್, ಟಿ.ಬಿ ಅಬ್ಬಾಸ್ ತುರ್ತಿ ಗೂನಡ್ಕ, ಹನೀಫ್ ಡಿ. ಎ., ಯುವ ಮುಖಂಡರಾದ ಹಾರಿಸ್ ಕೆ.ಎಸ್ ದರ್ಕಾಸ್ಸ್ ಗೂನಡ್ಕ , ಉನೈಸ್ ಗೂನಡ್ಕ , ಟಿ.ಎ ಇಬ್ರಾಹಿಂ ತೆಕ್ಕಿಲ್ ದರ್ಕಾಸ್ ಗೂನಡ್ಕ, ಜುರೈದ್ ತೆಕ್ಕಿಲ್ ಪೇರಡ್ಕ, ಸಾದುಮಾನ್ ತೆಕ್ಕಿಲ್ ಪೇರಡ್ಕ , ಜುಬೈರ್ ಅರಂತೋಡು, ಸಫ್ವಾನ್ ಗೂನಡ್ಕ,ಫಾರೂಕ್ ಪೆಲ್ತಡ್ಕ, ಸಫೀರ್ ಗೂನಡ್ಕ ಮತ್ತು ೫೦ಕ್ಕೂ ಮಿಕ್ಕಿ ಎನ್.ಎಸ್.ಯು.ಐ ಕಾರ್ಯಕರ್ತರು ಉಪಸ್ಥಿತರಿದ್ದರು. ಪ್ರಾಸ್ತಾವಿವಾಗಿ ಮಾತನಾಡಿದ ಸಂಪಾಜೆ ಗ್ರಾಮ ಪಂಚಾಯತ್ ಸದಸ್ಯರಾದ ಪಿ.ಕೆ ಅಬುಸಾಲಿ ಗೂನಡ್ಕ ಅವರು ಮಾಡಿ ಯುವಕರ ವಿದ್ಯಾರ್ಥಿಗಳನ್ನು ಗುರುತಿಸಿ ಪಕ್ಷ ದಲ್ಲಿ ಮತ್ತು ಇತರ ಸ್ಥಳದಲ್ಲಿ ನಮ್ಮನ್ನು ಬೆಂಬಲಿಸಿದ ಅಭಿವೃದ್ದಿಯ ಹರಿಕಾರ ನಮ್ಮೂರಿನ ಅಭಿಮಾನವಾದ ಟಿ ಎಂ ಶಾಹೀದ್ ತೆಕ್ಕಿಲ್ ಹಾಗೂ ರಾಜ್ಯಾಧ್ಯಕ್ಷರಾದ ಕೀರ್ತಿ ಗಣೇಶ್ ರನ್ನು ಅಭಿನಂದಿಸಿ ಉಬೈಸ್ ಗೂನಡ್ಕ ಅತ್ಯಂತ ಕಿರಿಯ ವಯಸ್ಸಿನಲ್ಲಿ ಇಷ್ಟು ಎತ್ತರಕ್ಕೆ ಬೆಳೆದಿದ್ದು ಮುಂದೆ ದೇಶದ ವಿದ್ಯಾರ್ಥಿ ನಾಯಕರಾಗಿ ಬೆಳೆಯುತ್ತಾರೆ ನಮ್ಮೂರಿಗೆ ಗೂನಡ್ಕಕ್ಕೆ ಹೆಮ್ಮೆ ಎಂದು ಅವರಿಗೇ ಎಲ್ಲರೂ ಬೆಂಬಲಿಸಲು ಹಾಗೂ ಯಾರೂ ಮತ್ಸರ ತೋರಿಸದಿರಿ ಎಂದು ವಿನಂತಿಸಿದರು. ಸಣ್ಣ ಪ್ರಾಯದಲ್ಲೇ ಚುನಾವಣೆಗೆ ಸ್ಪರ್ಧಿಸಿ ಸೋತರೂ ಎದೆ ಗುಂದದೆ ನಾಯಕತ್ವ ಗುಣ ಇದೆ ಎಂದು ಶ್ಲಾಘಿಸಿದರು.ಸಂಪಾಜೆ ಗ್ರಾ.ಪಂಚಾಯತ್ ಸದಸ್ಯ ಅಬುಸಾಲಿ ಸ್ವಾಗತಿಸಿ ಇಜ್ಜಾಸ್ ಗೂನಡ್ಕ ವಂದಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.