Breaking News

ರಾಷ್ಟ್ರ ಮಟ್ಟದಲ್ಲಿ ಸಂಚಲನ ಸೃಷ್ಟಿಸಿದ ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

ರಾಜ್ಯ ಸರಕಾರಕ್ಕೂ, ಬಿಜೆಪಿಗೂ ಬಿಗ್ ಶಾಕ್: ಹಲವು ಜಿಲ್ಲೆಗಳಲ್ಲಿ ರಾಜೀನಾಮೆ

ರಾಜ್ಯ ಸರಕಾರದ ಜನೋತ್ಸವ ಕಾರ್ಯಕ್ರಮವನ್ನೇ ರದ್ದು ಮಾಡಿದ ಮುಖ್ಯಮಂತ್ರಿ

ಮೊನ್ನೆಯಷ್ಟೇ ಬೆಳ್ಳಾರೆಯಲ್ಲಿ ಬಿಜೆಪಿ ಯುವ ಮೋರ್ಛಾ ಜಿಲ್ಲಾ ಸದಸ್ಯ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿದ್ದು ರಾಜ್ಯದಲ್ಲಂತೂ ಸಂಚಲನವನ್ನೇ ಸೃಷ್ಟಿಸಿದೆ.

ಆಕ್ರೋಶದಿಂದ ಕುದಿಯುತ್ತಿರುವ ಕಾರ್ಯಕರ್ತರು ರಾಜ್ಯದ ಹಲವಡೆ ವಿವಿಧ ಜವಾಬ್ದಾರಿಗಳಿಗೆ ಸಾಮೂಹಿಕ ರಾಜೀನಾಮೆ ನೀಡುತ್ತಿರುವುದು ಪಕ್ಷಕ್ಕೆ, ಸರಕಾರಕ್ಕೆ ಆಘಾತ ತಂದಿದೆ.‌

ಮೊನ್ನೆ ರಾತ್ರಿಯೇ ದುರ್ಘಟನೆ ನಡೆದಿದ್ದರೂ ನಾಯಕರು ಮತ್ತು‌ ಜನಪ್ರತಿನಿಧಿಗಳು ಸ್ಥಳಕ್ಕೆ ಬರುವುದು ತಡವಾದುದು ಕಾರ್ಯಕರ್ತರ ಆಕ್ರೋಶಕ್ಕೆ ಒಂದು ಕಾರಣವಾದರೆ, ಈ ಹಿಂದೆಯೂ ಹಿಂದೂ ಕಾರ್ಯಕರ್ತರ ಹತ್ಯೆಯಾಗಿದ್ದಾರೂ ಸರಕಾರ ಕಠಿಣ ಕ್ರಮ ಕೈಗೊಂಡಿಲ್ಲ ಎನ್ನುವುದು ಮತ್ತೊಂದು ಕಾರಣ. ಈ ಹಿನ್ನೆಲೆಯಲ್ಲಿ ನಿನ್ನೆ ರಾಜ್ಯಾಧ್ಯಕ್ಷರ ಸಹಿತ ನಾಯಕರು ಆಗಮಿಸಿದ್ದ ವೇಳೆ ಆಕ್ರೋಶ ಭುಗಿಲೆದ್ದಿತ್ತು.

ಈ ಆಕ್ರೋಶ ರಾಜ್ಯ ಮಟ್ಟಕ್ಕೂ ವ್ಯಾಪಿಸಿ ಅನೇಕ ಜಿಲ್ಲೆಗಳಲ್ಲಿ ಪಕ್ಷದ ವಿವಿಧ ಜವಾಬ್ದಾರಿಗಳಿದ್ದ ಬಿಜೆಪಿ ಮತ್ತು ಯುವ ಮೋರ್ಚಾ ಪದಾಧಿಕಾರಿಗಳು ರಾಜೀನಾಮೆ ನೀಡಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಂತೂ ನಾಯಕರ ವಿರುದ್ಧ ಟ್ರೋಲ್ ಮತ್ತು ಭಾರೀ ಟೀಕೆ ವ್ಯಕ್ತವಾಗಿದೆ.

ಇವೆಲ್ಲ ಪರಿಣಾಮಗಳಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಬಿಜೆಪಿ ಸರಕಾರ ಮೂರು ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಇಂದು ನಡೆಯಬೇಕಿದ್ದ ಜನೋತ್ಸವ ಕಾರ್ಯಕ್ರಮವನ್ನೇ ರದ್ದು ಮಾಡುವ ತೀರ್ಮಾನಕ್ಕೆ ಬಂದಿದ್ದಾರೆ.

ಮತ್ತೊಂದೆಡೆ ಬೆಳ್ಳಾರೆ ಘಟನೆಯ ವರದಿಗಾಗಿ ರಾಷ್ಟ್ರೀಯ ವಾಹಿನಿಗಳು , ಕೇರಳದ ಮಾಧ್ಯಮಗಳು ಸೇರಿದಂತೆ ರಾಜ್ಯದ ಮಾಧ್ಯಮಗಳು ಬೆಳ್ಳಾರೆಗೆ ಬಂದಿದ್ದು ಈ ಹತ್ಯೆ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗುವಂತಾಗಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.