ಜುಲೈ 25 ರಂದು ರಾಜ್ಯಒಕ್ಕಲಿಗರ ಸಂಘದಅಧ್ಯಕ್ಷರಾದ ಸಿ.ಎನ್ ಬಾಲಕೃಷ್ಣ ರವರು ಸಂಘದ ಪದಾಧಿಕಾರಿಗಳೊಂದಿಗೆ ಆಗಮಿಸಿ ಸುಳ್ಯದಲ್ಲಿ ಉಚಿತ ವಸತಿ ನಿಲಯಕ್ಕಾಗಿ ಮಂಜೂರಾದ ಸ್ಥಳ ವೀಕ್ಷಣೆ ಮಾಡಿದರು. ರಾಜ್ಯಒಕ್ಕಲಿಗರ ಸಂಗದಉಪಾಧ್ಯಕ್ಷರಾದಡಾ.ರೇಣುಕಾ ಪ್ರಸಾದ್ರವರ ವಿಶೇಷ ಮನವಿ ಮೇರೆಗೆಗೌಡ ಸಮುದಾಯದ ಬಡ ವಿದೈಆರ್ಥಿಗಳಿಗಾಗಿ ಕೆ.ವಿ.ಜಿ.ವಿದ್ಯಾ ಸಂಸ್ಥೆಗಳ ಸಮೀಪದಲ್ಲೇ ಸ್ಥಳ ಮಂಜೂರು ಮಾಡುವಂತೆ ಮನವಿ ಮಾಡಿಕೊಂಡಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದರಾಜ್ಯಒಕ್ಕಲಿಗರ ಸಂಘದಉಪಾಧ್ಯಕ್ಷರಾದಡಾ. ರೇಣುಕಾ ಪ್ರಸಾದ್ ಕೆ.ವಿ ಯವರುಈ ಭಾಗದ ಹೆಚ್ಚಿನಗೌಡ ಸಮುದಾಯದವರು ಕೃಷಿ ಆಧಾರಿತಜೀವನ ನಡೆಸುತ್ತಿರುವಬಡ ಕೃಷಿ ಕೂಲಿ ಕಾರ್ಮಿಕರ ಮಕ್ಕಳಿಗೂಉತ್ತಮ ಶಿಕ್ಷಣ ದೊರೆಯಬೇಕೆಂಬುವುದು ನನ್ನಉದ್ದೇಶ. ಈ ನಿಟ್ಟಿನಲ್ಲಿ ಈ ಭಾಗದಜನತೆಯ ಬೇಡಿಕೆಯಂತೆಉಚಿತ ವಸತಿ ನಿಲಯದ ಸ್ಥಾಪನೆಗೆ ಅನೇಕ ಸಮಯದಿಂದ ನಾನು ಪ್ರಯತ್ನಿಸುತ್ತಿದ್ದೆ. ಈ ಬಾರಿಆ ಬೇಡಿಕೆಯನ್ನು ಈಡೇರಿಸಿದ ತೃಪ್ತಿ ನನಗಿದೆ. ಇದಕ್ಕೆ ಸಹಕರಿಸಿದ ರಾಜ್ಯಒಕ್ಕಲಿಗರ ಸಂಘದಅಧ್ಯಕ್ಷರಾದ ಸಿ.ಎನ್ ಬಾಲಕೃಷ್ಣ ಮತ್ತುಎಲ್ಲಾ ಪದಾಧಿಕಾರಿಗಳಿಗೆ ನಾನುಅಭಾರಿಯಾಗಿರುತ್ತೇನೆಎಂದರು.
ಈ ಸಂಧರ್ಭದಲ್ಲಿರಾಜ್ಯಒಕ್ಕಲಿಗರ ಸಂಘದಅಧ್ಯಕ್ಷರಾದ ಸಿ.ಎನ್ ಬಾಲಕೃಷ್ಣ, ಪ್ರಧಾನ ಕಾರ್ಯದರ್ಶಿ ಕೋನಪ್ಪರೆಡ್ಡಿ, ಸಹಾಯಕ ಕಾರ್ಯದರ್ಶಿ ರಾಘವೇಂದ್ರ, ನಿರ್ದೇಶಕರುಗಳಾದ ಲೋಕೇಶ್, ರಘುಗೌಡ, ನೆಲ್ಲಿಗೆರೆ ಬಾಲು, ಪೂರ್ಣೇಶ್, ಮಂಜೇಗೌಡ, ಡಾ. ರಮೇಶ್, ಪುಟ್ಟ ಸ್ವಾಮಿ, ಹನುಮಂತರಾಯಪ್ಪ ಮತ್ತುಕೆ.ವಿ.ಜಿ ಶಿಕ್ಷಣ ಸಂಸ್ಥೆಗಳ ಮುಖ್ಯಕಾರ್ಯನಿರ್ವಹಣಾಧಿಕಾರಿಡಾ. ಉಜ್ವಲ್ಊರುಬೈಲು, ನಗರ ಪಂಚಾಯತ್ ಮಾಜಿಅಧ್ಯಕ್ಷರಾದಎನ್.ಎ.ರಾಮಚಂದ್ರ ಮತ್ತುಕೆ.ವಿ.ಜಿ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರುಗಳುಉಪಸ್ಥಿತರಿದ್ದರು.