Breaking News

ಬ್ಲಾಕ್ ಕಾಂಗ್ರೆಸ್ ಕಾರ್ಯಕಾರಿಣಿ ಸಭೆ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರವರ ಹುಟ್ಟುಹಬ್ಬ ಆಚರಣೆಯಲ್ಲಿ ಸುಳ್ಯದಿಂದ ಕಾಂಗ್ರೆಸ್ ಕಾರ್ಯಕರ್ತರು ಭಾಗಿ

ಆಗಸ್ಟ್ 9 ರಂದು ಸ್ವಾತಂತ್ರ್ಯ ಅಮೃತಮಹೋತ್ಸವ ಆಚರಣೆಗೆ ನಿರ್ಧಾರ

ಸುಳ್ಯ ಬ್ಲಾಕ್ ಕಾಂಗ್ರೆಸ್ ಕಾರ್ಯಕಾರಿಣಿ ಸಭೆ ಇಂದು ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ನಡೆಯಿತು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ ಜಯರಾಮ್ ಅಧ್ಯಕ್ಷತೆ ವಹಿಸಿದ್ದರು. ಬೆಳ್ಳಾರೆ ಬಿಜೆಪಿಯ ಯುವ ಮುಖಂಡ ಪ್ರವೀಣ್ ನೆಟ್ಟಾರ್ ರವರನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆಮಾಡಿರುವುದನ್ನು ಖಂಡಿಸಲಾಯಿತು. ಮತ್ತು ಮೃತ ಪ್ರವೀಣ್ ನೆಟ್ಟಾರ್‌ರವರಿಗೆ ಮೌನ ಪ್ರಾರ್ಥನೆ ಸಲ್ಲಿಸಿ ಶೃದ್ಧಾಂಜಲಿ ಅರ್ಪಿಸಲಾಯಿತು. ಈ ಸಂದರ್ಭದಲ್ಲಿ ಪ್ರವೀಣ್ ನೆಟ್ಟಾರ್ ಮತ್ತು ಕಳಂಜದ ಮಸೂದ್ ಕುಟುಂಬಕ್ಕೆ ಪರಿಹಾರವನ್ನು ಒದಗಿಸುವಂತೆ ಸರಕಾರಕ್ಕೆ ಮನವಿ ಸಲ್ಲಿಸುವುದಾಗಿ ತೀರ್ಮಾನಿಸಲಾಯಿತು.


ಆಗಸ್ಟ್ 03 ರಂದು ದಾವಣಗೆರೆಯಲ್ಲಿ ನಡೆಯಲಿರುವ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯರವರ 75ನೇ ಹುಟ್ಟುಹಬ್ಬ ಅಮೃತಹೋತ್ಸವ ಕಾರ್ಯಕ್ರಮಕ್ಕೆ ಸುಳ್ಯ ಬ್ಲಾಕ್‌ನಿಂದ 100ಕ್ಕು ಅಧಿಕ ಕಾರ್ಯಕರ್ತರು ಭಾಗವಹಿಸುವ ಬಗ್ಗೆ ನಿರ್ಧರಿಸಲಾಯಿತು.
ಭಾರತಕ್ಕೆ ಸ್ವಾತಂತ್ರ್ಯ ದೊರಕಿ 75 ವರ್ಷ ತುಂಬಿದ ಹಿನ್ನೆಲೆಯಲ್ಲಿ ಎ.ಐ.ಸಿ.ಸಿ ಮತ್ತು ಕೆ.ಪಿ.ಸಿ.ಸಿ ನಿರ್ದೇಶನದಂತೆ ಸ್ವಾಂತ್ರೊತ್ಸವವನ್ನು ವಿಜ್ರಂಭನೆಯಿಂದ ಆಚರಿಸಲು ತೀರ್ಮಾನಿಸಲಾಯಿತು. ಆಗಸ್ಟ್ 9ರಂದು ಅರಂತೋಡಿನಿಂದ ಸುಳ್ಯ ನಗರಕ್ಕೆ ಸ್ವಾತಂತ್ರ್ಯ ಪಾದಯಾತ್ರೆ ಮಾಡುವ ಮೂಲಕ ಆಚರಿಸಲು ನಿರ್ದರಿಸಲಾಯಿತು. ಇದೇ ಸಂದರ್ಭದಲ್ಲಿ ತಾಲೂಕಿನಲ್ಲಿರುವ ಹಿರಿಯ ಸ್ವಾಂತತ್ತ್ರ್ಯ ಹೋರಾಟಗಾರರನ್ನು ಗುರುತಿಸಿ ಸನ್ಮಾನಿಸುವುದೆಂದು ತೀರ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ಧನಂಜಯ ಅಡ್ಪಂಗಾಯ, ಕೆ.ಪಿಸಿ.ಸಿ ಮಾಜಿ ಕಾರ್ಯದರ್ಶಿ ಭರತ್ ಮುಂಡೋಡಿ ಮಾತನಾಡಿ ಸಲಹೆ ಸೂಚನೆ ನೀಡಿದರು.
ಸಭೆಯಲ್ಲಿ ಬ್ಲಾಕ್ ಪಧಾದಿಕಾರಿಗಳಾದ ಎಸ್.ಸಂಶುದ್ಧೀನ್, ಸುರೇಶ್ ಎಂ ಹೆಚ್, ಸುಧೀರ್ ರೈ ಮೇನಾಲ, ಸದಾನಂದ ಮಾವಜಿ, ಬೆಟ್ಟ ರಾಜಾರಾಂ ಭಟ್, ಅನಿಲ್ ರೈ ಬೆಳ್ಳಾರೆ, ಭವಾನಿಶಂಕರ್ ಕಲ್ಮಡ್ಕ, ಗೋಕುಲ್ ದಾಸ್, ಕೆ.ಎಂ. ಮುಸ್ತಫ, ರ್ಗಊರ್ ಕಲ್ಮಡ್ಕ, ಇಸ್ಮಾಯಿಲ್ ಪಡ್ಪಿನಂಗಡಿ, ಅನಿಲ್ ರೈ ಪುಡ್ಕಜೆ, ರ್ಶಾಇ ಕುತ್ತಮೊಟ್ಟೆ, ಶಶಿಧರ ಎಂ ಜೆ, ಸಚಿನ್ ರಾಜ್ ಶೆಟ್ಟಿ ಪೆರುವಾಜೆ, ಆನಂದ ಬೆಳ್ಳಾರೆ, ನಂದರಾಜ್ ಸಂಕೇಶ, ಬಾಫೂ ಸಾಹೇಬ್, ತಿರುನಲೇಶ್ವರಿ ಅಡ್ಕಾರು, ಡೇವಿಡ್ ಧೀರಾ ಕ್ರಾಸ್ತ, ತವೀದ್ ಕಲ್ಚರ್ಪೆ, ಸತ್ಯಕುಮಾರ್ ಆಡಿಂಜ, ಗಂಗಾಧರ ಮೇನಾಲ ಮೊದಲಾದವರು ಉಪಸ್ಥಿತರಿದ್ದರು.
ಬ್ಲಾಕ್ ಪ್ರಧಾನ ಕಾರ್ಯದರ್ಶಿ ಪಿ ಎಸ್ ಗಂಗಾಧರ್ ಸ್ವಾಗತಿಸಿ, ವಂದಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.