Breaking News

ಪ್ರವೀಣ್ ಹತ್ಯೆ ಪ್ರಕರಣ : ಗುತ್ತಿಗಾರಿನ ಪ್ರಗತಿ ಅಂಗಡಿಯಲ್ಲಿ ಕೆಲಸಕ್ಕಿದ್ದ ಯುವಕ ಭಾಗಿ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

ಆಕ್ರೋಶಗೊಂಡ ಹಿಂದೂ ಕಾರ್ಯಕರ್ತರಿಂದ ಮುಸ್ಲಿಮರ ಅಂಗಡಿಗಳ ದ್ವಂಸ-ಸ್ಕೂಟರ್ ಗೆ ಬೆಂಕಿ

ಪೋಲೀಸರಿಂದ ಲಾಠಿ ಚಾರ್ಜ್

ಪ್ರವೀಣ್ ಹತ್ಯೆ ಹಿನ್ನೆಲೆಯಲ್ಲಿ ಗುತ್ತಿಗಾರಿನ ಶಫೀಕ್ ಎಂಬಾತ ಭಾಗಿಯಾಗಿದ್ದಾನೆ ಎಂಬ ಆರೋಪ ಕೇಳಿ ಬಂದ ತಕ್ಷಣ ಗುತ್ತಿಗಾರಿನಲ್ಲಿ ಹಿಂದೂ ಕಾರ್ಯಕರ್ತರು ಜಮಾಯಿಸಲು ಪ್ರಾರಂಭಿಸಿದರಲ್ಲದೆ, ಶಫೀಕ್ ಕೆಲಸಕ್ಕಿದ್ದ ಗುತ್ತಿಗಾರಿನ ಉಷಾ ಕಾಂಪ್ಲೆಕ್ಸ್ ನಲ್ಲಿದ್ದ ಅಡಿಕೆ ಅಂಗಡಿಗೆ ನುಗ್ಗಿ ವಸ್ತುಗಳನ್ನು ಎಳೆದು ಹಾಕಿ ಪುಡಿಮಾಡಿದರು. ಆ ವೇಳೆ ಅಂಗಡಿಯಲ್ಲಿದ್ದವರು ಹೊರ ಹೋಗಿದ್ದರೆನ್ನಲಾಗಿದೆ. ಬಳಿಕ ಜಿ.ಟಿ.ಆರ್. ಜನರಲ್ ಸ್ಟೋರ್ ಕಡೆ ಬಂದು ಅಂಗಡಿಯ ದಿನಸಿಗಳನ್ನು ಹೊರ ಎಳೆದು ಹಾಕಿದರು. ಬಳಿಕ ಪ್ರಗತಿ ಅಡಿಕೆ ಅಂಗಡಿಗೆ ತೆರಳಿ ಮೇಜು ಕುರ್ಚಿಯನ್ನು ಹೊರಗೆಸೆದರು. ಬಳಿಕ ಗುತ್ತಿಗಾರು ಬಸ್ ತಂಗುದಾಣದ ಎದುರು ಭಾಗದ ತೆಂಗಿನ ಕಾಯಿ ಅಂಗಡಿಗೆ ತೆರಳಿ ಅಲ್ಲಿದ್ದ ಕೆಲ ವಸ್ತುಗಳನ್ನು ಹೊರಗೆಸೆದರು.

ಕೆಳಗಿನ ಪೇಟೆಯಲ್ಲಿನ ಜಿ ಟಿ ಆರ್ ಸುಪಾರಿ ಟ್ರೇಡರ್ಸ್ ನ ಜಿ. ಟಿ.ಆರ್ ಅವರನ್ನು ದೂಡಿ ಹಾಕಿದ್ದಾರೆ. ಬಳಿಕ ಕೆಳಗಿನ ಪೇಟೆಯಲ್ಲಿರುವ ಸ್ವಾಗತ್ ತರಕಾರಿ ಅಂಗಡಿಗೆ ತೆರಳಿದ ಕಾರ್ಯಕರ್ತರ ಗುಂಪು ತರಕಾರಿ ಟ್ರೇ ಗಳನ್ನು ಎಳೆದು ಹೊರಹಾಕಿತು. ಬಳಿಕ ಕೆಳಗಿನ ಪೇಟೆ ವರೆಗೆ ಮರಳಿದರು.
ಬಳಿಕ ಪೇಟೆಯಲ್ಲಿ ಸ್ಕೂಟರೊಂದಕ್ಕೆ ಬೆಂಕಿ ಹಚ್ಚಿದರು.
ಕೆಲವು ಯುವಕರು ವಳಲಂಬೆಗೆ ಹೋಗಿ ಅಲ್ಲಿನ ಬಸ್ ನಿಲ್ದಾಣದಲ್ಲಿದ್ದ ಶಟರ್ ಮುಚ್ಚಿದ ದಿನಸಿ ಅಂಗಡಿಯ ಶಟರ್ ಮುರಿದು ಒಳನುಗ್ಗಿ ಅಂಗಡಿ ಪುಡಿ ಮಾಡಿದರಲ್ಲದೆ, ಸಾಮಾನುಗಳನ್ನು ಹೊರಗೆಸೆದು ವಿಧ್ವಂಸ ಕೃತ್ಯ ನಡೆಸಿದರೆಂದು ತಿಳಿದುಬಂದಿದೆ.

ಕೆಳಗಿನ ಪೇಟೆಯಲ್ಲಿ ಸ್ಕೂಟಿಯೊಂದಕ್ಕೆ ಬೆಂಕಿ ಹಚ್ಚಿದ್ದು ಸ್ಥಳಕ್ಕಾಗಮಿಸಿದ ಪೊಲೀಸರು ಲಾಟಿ ಬೀಸಲು ಆರಂಭಿಸಿದರು. ಈ ಬಗ್ಗೆ ಪೋಲೀಸರಿಗೆ ತಂಡವೇ ಗುತ್ತಿಗಾರಿಗೆ ಬಂದಿದ್ದು ಪೇಟೆಯಾದ್ಯಂತ ಗಸ್ತು ತಿರುಗುತಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.