ಕೂಲಿ ಕಾರ್ಮಿಕರಾಗಿ ದುಡಿದು ಸಂಸಾರವನ್ನು ಸಾಗಿಸುತ್ತಿದ್ದ ರವಿ ಎಂಬುವವರು ಕೆಲಸ ಮಾಡುತ್ತಿದ್ದ ಸಂದರ್ಭ ಕಾಂಪೌಂಡ್ ನಿಂದ ಬಿದ್ದು ಸೊಂಟದ ಕೆಳಭಾಗ ಸಂಪೂರ್ಣ ಸ್ವಾಧೀನವನ್ನು ಕಳೆದುಕೊಂಡು ಸುಳ್ಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಆರ್ಥಿಕವಾಗಿ ಸಂಕಷ್ಟವನ್ನು ಎದುರಿಸುತ್ತಿದ್ದಾರೆ.
ಇವರ ಚಿಕಿತ್ಸೆಗೆ ನೆರವಾಗಲು ಮೊಗರ್ಪಣೆ ಶಾಖೆ ಎಸ್ ಎಸ್ ಎಫ್ ರಿಲೀಫ್ ಫಂಡ್ ಗ್ರೂಪ್ ವತಿಯಿಂದ ದಾನಿಗಳ ಸಹಕಾರದಿಂದ ಸಂಗ್ರಹಿಸಿದ 27 ಸಾವಿರ ರೂಪಾಯಿಗಳ ಧನ ಸಹಾಯವನ್ನು ರವಿ ಅವರ ಕುಟುಂಬಕ್ಕೆ ಇಂದು ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಎಸ್ ಎಸ್ ಎಫ್ ಮೊಗರ್ಪಣೆ ಶಾಖೆಯ ರಿಲೀಫ್ ಫಂಡ್ ವಾಟ್ಸಪ್ ಗ್ರೂಪಿನ ಅಡ್ಮಿನ್ ಶರೀಫ್ ಜಯನಗರ, ಸಂಘಟನೆಯ ಮುಖಂಡರುಗಳಾದ ಸಮೀರ್ ಜಯನಗರ, ಆಸಿಫ್ ಜಯನಗರ, ಹಿರಿಯರಾದ ಹನೀಫ್ ಪೋಸೊಟ್ , ಹಸೈನಾರ್ ಜಯನಗರ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಎಸ್ ಎಸ್ ಎಫ್ ರಿಲೀಫ್ ಫಂಡ್ ವಾಟ್ಸಪ್ ಗ್ರೂಪಿನ ಅಡ್ಮಿನ್ ಶರೀಫ್ ಜಯನಗರ ರವರ ನೇತೃತ್ವದಲ್ಲಿ ಇದಕ್ಕೂ ಮೊದಲು ಬಡ ಹೆಣ್ಣು ಮಕ್ಕಳ ವಿವಾಹ ಕಾರ್ಯಕ್ಕೆ, ಬಡ ಅನಾರೋಗ್ಯ ಪೀಡಿತ ಕುಟುಂಬಗಳಿಗೆ, ಬಡವರಿಗೆ ಮನೆ ನಿವೇಶನಕ್ಕೆ ಕಾರ್ಯಗಳಿಗೆ ಸುಮಾರು ಲಕ್ಷಗಳಷ್ಟು ದಾನಿಗಳಿಂದ ಧನ ಸಂಗ್ರಹ ಮಾಡಿ ನೀಡಲಾಗಿದೆ.ಅದೇ ರೀತಿ ರೋಗಿಗಳಿಗೆ ರಕ್ತದಾನ ಮಾಡುವ ಮೂಲಕ ನಾನಾ ರೀತಿಯ ಸಾಮಾಜಿಕ ಸೇವೆಗಳನ್ನು ಸಲ್ಲಿಸುತ್ತಾ ಬಂದಿರುತ್ತಾರೆ. ಸಂಘಟನೆಯ ಈ ಕಾರ್ಯಗಳಿಗೆ ಸಾರ್ವಜನಿಕರಿಂದ ಪ್ರಶಂಸೆಗೆ ಪಾತ್ರರಾಗಿದ್ದಾರೆ.