ಪಂಬೆತ್ತಾಡಿ ಸ.ಹಿ.ಪ್ರಾ. ಶಾಲೆಯಲ್ಲಿ ಪೋಷಕರು ಹಾಗೂ ವಿದ್ಯಾಭಿಮಾನಿಗಳಿಂದ ನೀಡಲ್ಪಟ್ಟ ಕಂಪ್ಯೂಟರ್( ಲ್ಯಾಪ್ಟಾಪ್) ಮತ್ತು ಪ್ರಿಂಟರ್ ನ ಉದ್ಘಾಟನಾ ಕಾರ್ಯಕ್ರಮ ಜು. 25ರಂದು ನಡೆಯಿತು.
ಶಾಲಾ ಸ್ಥಳ ದಾನಿಗಳಾದ ದಿ| ಗಣಪತಿ ಭಟ್ ರವರ ಹಿರಿಯ ಪುತ್ರ ರಾಮಚಂದ್ರ ಭಟ್ ಬರ್ಲಾಯಬೆಟ್ಟು ಉದ್ಘಾಟಿಸಿ ಶುಭ ಹಾರೈಸಿದರು. ಮುಖ್ಯ ಶಿಕ್ಷಕಿ ಶ್ರೀಮತಿ ಭವ್ಯ ಬಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಸತ್ಯಶಂಕರ ಕಲ್ಚಾರುರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಶಾಲಾ ಅಭಿವೃದ್ಧಿ ಕಾರ್ಯಗಳ ಬಗ್ಗೆ ತಿಳಿಸಿದರು. ಎಸ್.ಡಿ.ಎಂ.ಸಿ ಸದಸ್ಯರು, ಪೋಷಕರು, ವಿದ್ಯಾಭಿಮಾನಿಗಳು, ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕು. ಶರಣ್ಯ ಕೆ.ಎಸ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ಲತಾ ಧನ್ಯವಾದವಿತ್ತರು.