Breaking News

ಕೆ.ವಿ.ಜಿ ಇ೦ಜಿನಿಯರಿ೦ಗ್ ಕಾಲೇಜಿಗೆ ವಿ.ಟಿ.ಯು. ರಾಜ್ಯಮಟ್ಟದ ಪ್ರಾಜೆಕ್ಟ್ ಎಕ್ಸಿಭಿಷನ್ ಸೃಷ್ಟಿ-2022 ರ ಪ್ರಶಸ್ತಿ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

ವಿ.ಟಿ.ಯು. ರಾಜ್ಯಮಟ್ಟದ ಪ್ರಾಜೆಕ್ಟ್ ಎಕ್ಸಿಭಿಷನ್ ಸೃಷ್ಟಿ-2022 ಜುಲೈ 27 ರಂದು ಬೆಂಗಳೂರಿನ ಬಿ.ಎಂ.ಎಸ್. ಕಾಲೇಜಿನಲ್ಲಿ ನಡೆಯಿತು. ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನ ಮೆಕ್ಯಾನಿಕಲ್ ವಿಭಾಗದ ಲೋಕೇಶ್ ಜೆ.ಡಿ., ಪ್ರೀತಮ್ ಗೌಡ ಎಸ್. ಎಂ. ಮತ್ತು ಸಂಜೀವ್ ಕೆ.ಸಿ. ಸಿದ್ಧ ಪಡಿಸಿದ ಡಿಸೈನ್ ಅಂಡ್ ಫಾಬ್ರಿಕೇಶನ್ ಆಫ್ ಟ್ರಯಾಂಡ್ರ ಅರೆಕಾನಟ್ ಡಿಹಸ್ಕಿಂಗ್ ಮೆಶಿನ್ ಎಂಬ ಪ್ರಾಜೆಕ್ಟ್ ಮಾದರಿಗೆ ರಾಜ್ಯ ಮಟ್ಟದಲ್ಲಿ ಪ್ರಥಮ ಬಹುಮಾನ ದೊರೆತಿದೆ. ಈ ಬಹುಮಾನವು ಪ್ರಶಸ್ತಿ ಪತ್ರ ಹಾಗೂ ನಗದು ರೂ. ೨೫,೦೦ ಒಳಗೊಂಡಿದೆ. ಈ ಪ್ರಾಜೆಕ್ಟ್ ಮಾದರಿಯು ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಉಪನ್ಯಾಸಕರಾದ ಪ್ರೊ. ಪ್ರಶಾಂತ್ ಟಿ.ಎಂ. ಮಾರ್ಗದರ್ಶನದಲ್ಲಿ ಸಿದ್ಧಗೊಂಡಿದೆ.

ಅಲ್ಲದೆ ಕಂಪ್ಯೂಟರ್ ಸೈನ್ಸ್ ವಿಭಾಗದ ವಿದ್ಯಾರ್ಥಿಗಳಾದ ಸ್ಮಿತಾ ಬಂಟ್ವಾಳ್, ಪ್ರಜ್ಞಾ ಟಿ.ಎನ್., ಮಧುರ ಎ.ಕೆ. ಮತ್ತು ಯಶಸ್ವಿನಿ ಸಿದ್ಧಪಡಿಸಿದ ರಿಬ್ಡ್ ಸ್ಮೋಕ್ಡ್ ರಬ್ಬರ್ ಶೀಟ್ ಗ್ರೇಡಿಂಗ್ ಸಿಸ್ಟಮ್ ಎಂಬ ಪ್ರಾಜೆಕ್ಟ್ ಮಾದರಿ ಪ್ರದರ್ಶನಗೊಂಡಿರುತ್ತದೆ. ಈ ಪ್ರಾಜೆಕ್ಟ್ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ವಿಭಾಗದ ಪ್ರೊಫೆಸರ್ ಡಾ. ಸ್ಮಿತಾ ಎಂ.ಎಲ್. ಇವರ ಮಾರ್ಗದರ್ಶನದಲ್ಲಿ ಸಿದ್ಧಗೊಂಡಿದೆ.
ಎ.ಒ.ಎಲ್.ಇ ಪ್ರಧಾನ ಕಾರ್ಯದರ್ಶಿ ಡಾ. ರೇಣುಕಾಪ್ರಸಾದ್ ಕೆ.ವಿ., ಕಾಲೇಜಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಕಂಪ್ಯೂಟರ್ ಸೈನ್ಸ್ & ಇಂಜಿನಿಯರಿಂಗ್ ವಿಭಾಗ ಮುಖ್ಯಸ್ಥ ಡಾ. ಉಜ್ವಲ್ ಯು.ಜೆ., ಪ್ರಾಂಶುಪಾಲರಾದ ಡಾ. ಸುರೇಶ ವಿ., ಉಪಪ್ರಾಂಶುಪಾಲರಾದ ಡಾ. ಶ್ರೀಧರ್ ಕೆ., ಕಾಲೇಜಿನ ಪ್ರಾಜೆಕ್ಟ್ ಸಂಯೋಜಕರಾದ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ವಿಭಾಗದ ಪ್ರೊಫೆಸರ್ ಡಾ. ಸ್ಮಿತಾ ಎಂ.ಎಲ್., ಡೀನ್ ಅಕಾಡೆಮಿಕ್ ಹಾಗೂ ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥರಾದ ಡಾ. ಉಮಾಶಂಕರ್ ಕೆ.ಎಸ್. ಹಾಗೂ ಆಡಳಿತಾಧಿಕಾರಿ ನಾಗೇಶ್ ಕೊಚ್ಚಿ ಪ್ರಶಸ್ತಿ ಗಳಿಸಿದ ವಿದ್ಯಾರ್ಥಿಗಳನ್ನು ಅಭಿನ೦ದಿಸಿದ್ದಾರೆ.

 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.