ಸಂಘಟನೆಯನ್ನು ದುರ್ಬಲಗೊಳಿಸುವ ಕೆಲಸ ಬೇಡ – ಎಲ್ಲದಕ್ಕೂ ರಾಜೀನಾಮೆಯೊಂದೇ ಪರಿಹಾರವಲ್ಲ
ಸಂಘಟನೆ ಕಾರ್ಯಕರ್ತ ಮಕ್ಕಳೊಂದಿಗೆ ತಾಯಂದಿರಾದ ನಾವಿದ್ದೇವೆ
“ಪ್ರವೀಣ್ ನೆಟ್ಟಾರು ಹತ್ಯೆಯ ಹಂತಕರ ಕುರಿತು ಸರಕಾರ ತನಿಖೆ ನಡೆಸುತ್ತಿದೆ. ಕೃತ್ಯ ಮಾಡಿದವರಿಗೆ ಶಿಕ್ಷೆ ಆಗಿಯೇ ಆಗುತ್ತದೆ. ಅದಕ್ಕೆಂದು ಕಾರ್ಯಕರ್ತರು ರಾಜೀನಾಮೆ ನೀಡುವುದು ಪರಿಹಾರವಲ್ಲ. ಸ್ವಲ್ಪ ಸಮಯ ಕಾದು ನೋಡೋಣ. ಕಾರ್ಯಕರ್ತರ ನೋವು ವರಿಷ್ಠರಿಗೆ ತಲುಪಿದೆ ಹಾಗೂ ಇಲ್ಲಿಯ ಕಾರ್ಯಕರ್ತರಿಗೆ ತಾಯಂದಿರಾದ ನಾವು ಸದಾ ಬೆನ್ನೆಲುಬಾಗಿ ಇರುತ್ತೇವೆ” ಎಂದು ಪರಿವಾರ ಸಂಘಟನೆಯ ಮಹಿಳಾ ಘಟಕದ ಪ್ರಮುಖರಾದ ಡಾ| ಯಶೋದಾ ರಾಮಚಂದ್ರ ಮತ್ತು ಹಿರಿಯರಾದ ವಿನೋಬನಗರದ ಶ್ರೀಮತಿ ಪದ್ಮಾವತಿ ಕಾಮತ್ ಹೇಳಿದ್ದಾರೆ.
ಜು.೨೯ರಂದು ಸುಳ್ಯ ಸದರ್ನ್ ರೆಸಿಡೆನ್ಸಿಯಲ್ಲಿ ಪತ್ರಿಕಾಗೋಷ್ಠಿ ಕರೆದು ಮಾತನಾಡಿದ ಡಾ| ಯಶೋದಾ ರಾಮಚಂದ್ರರು, “ಮೊನ್ನೆ ಬೆಳ್ಳಾರೆಯಲ್ಲಿ ಆಗಬಾರದ ಘಟನೆ ಆಗಿದೆ ಹೋಗಿದೆ. ಪ್ರವಿಣ್ ನೆಟ್ಟಾರು ಹತ್ಯೆ ಹಿಂದೂ ಸಮಾಜಕ್ಕೆ ಬಹು ದೊಡ್ಡ ನಷ್ಠ. ಆ ನಂತರದ ಬೆಳವಣಿಗೆ ಸಹಜವಾದುದು. ಆದರೆ ಇಲ್ಲಿ ಸಂಘಟನೆಯನ್ನು ದುರ್ಬಲ ಗೊಳಿಸುವ ಹುನ್ನಾರ ಆಗ್ತಾ ಇದೆ. ಇದು ಆಗಬಾರದು. ಈ ಸಂದರ್ಭ ಆಕ್ರೋಶ, ಅಸಾಮಾಧಾನದಿಂದಿರುವ ಮಕ್ಕಳಲ್ಲಿ ನಾವು ವಿನಂತಿಸುವುದೆಂದರೆ ಈ ಸಂದರ್ಭದಲ್ಲಿ ನಾವು ತಾಳೆಳ್ಮೆಯಿಂದಿರೋಣ. ನಿಮ್ಮ ನೋವುಗಳು ವರಿಷ್ಠರಿಗೆ ತಲುಪಿದೆ. ಎಲ್ಲದಕ್ಕೂ ರಾಜೀನಾಮೆಯೊಂದೇ ಪರಿಹಾರವಲ್ಲ. ತಪ್ಪಿತಸ್ಥರಿಗೆ ಶಿಕ್ಷೆ ಆಗಿಯೇ ಗುತ್ತದೆ. ಎಲ್ಲರೂ ಸೇರಿ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವ ಕೆಲಸ ಆಗಬೇಕು. ತಕ್ಷಣ ಹೊರ ಬರುವುದು ಸರಿಯಲ್ಲ. ಮಕ್ಕಳೇ ಸಂಘಟನೆಯ ಶಕ್ತಿಯಾಗಿದ್ದಾರೆ. ಅಂತ ಮಕ್ಕಳ ಜತೆಗೆ ತಾಯಂದಿರಾದ ನಾವು ಇದ್ದೇವೆ” ಎಂದು ಹೇಳಿದರು.
ಶ್ರೀಮತಿ ಪದ್ಮಾವತಿ ಕಾಮತ್ರವರು ಮಾತನಾಡಿ ಬಿಜೆಪಿಗೆ ರಾಜೀನಾಮೆ ಕೊಟ್ಟ ಕೂಡಲೇ ಏನೂ ಮಾಡಲು ಸಾಧ್ಯವಿಲ್ಲ. ರಾಜೀನಾಮೆ ನೀಡಿದರೆ ಸಂಘಟನೆಯ ಶಕ್ತಿ ಕಡಿಮೆ ಆಗುತ್ತದೆ. ನಮ್ಮ ಬಲವನ್ನು ಹೆಚ್ಚಿಸಲು ಮಕ್ಕಳೊಂದಿಗೆ ತಾಯಂದಿರಾಗಿ ನಾವಿzವೆ. ನಾನೋಬ್ಬ ಮಾತೆಯಾಗಿ ಈ ಸರಕಾರಕ್ಕೆ ಕೇಳಬಯಸುವುದೇನೆಂದರೆ ಇಷ್ಟು ಮಕ್ಕಳನ್ನು ತೆಗೆಯುವಾಗ ಬಿಜೆಪಿ ಸರಕಾರ ಏನು ಮಾಡುತ್ತಿದೆ ಎಂಬುದು ನನ್ನ ಪ್ರಶ್ನೆ. ಅಲ್ಲಿ ಕೂತು ಕಂಡಿಸ್ತೇವೆ, ಮಾಡ್ತೇವೆ ಎಂದು ಹೇಳಿದರೆ ಸಾಕಾಗುವುದಿಲ್ಲ. ಹೀಗಾದರೆ ತಾಯಂದಿರೇ ಹೊರಡಬೇಕಾದೀತು. ರಾಜೀನಾಮೆ ಕೊಟ್ಟಿರುವ ಎಲ್ಲ ಕಾಯ್ಕರ್ತರು ಕೂಡಾ ವಾಪಸ್ ಪಡೆದು ನಮ್ಮೊಂದಿಗೆ ಬರಬೇಕೆಂದು ಅವರು ವಿನಂತಿಸಿಕೊಂಡರು.
ಆರೋಪಿಗಳಿಗೆ ಕಠಿಣ ಶಿಕ್ಷೆ ಆಗಬೇಕೆಂಬ ಆಗ್ರಹ ನಮ್ಮದೂ ಇದೆ. ಸರಕಾರ ತನಿಖೆ ನಡೆಸಿ ಆರೋಫಿಗಳನ್ನು ಬಂಧಿಸುವ ವಿಶ್ವಾಸವೂ ಇದೆ” ಎಂದು ಶ್ರೀಮತಿ ಶುಭದಾ ಎಸ್ ರೈ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಶ್ರೀಮತಿ ಪುಷ್ಪಾವತಿ ಬಾಳಿಲ, ಶ್ರೀಮತಿ ಪುಲಸ್ತ್ಯ ರೈ, ಶ್ರೀಮತಿಗುಣವತಿ ಕೊಲ್ಲಂತಡ್ಕ, ಕು.ಭಾಗೀರಥಿ ಮುರುಳ್ಯ ಇದ್ದರು.