ನೂತನ ಸಮಿತಿ ರಚನೆ
ಮುರುಳ್ಯ ಅಲೆಕ್ಕಾಡಿಯಲ್ಲಿ ಇಪ್ಪತ್ತೆರಡನೇ ವರ್ಷದ ಗಣೇಶೋತ್ಸವ ಆಚರಣೆ ನಡೆಯಲಿದ್ದು, ಜುಲೈ 24ರಂದು ಪೂರ್ವಭಾವಿ ಸಭೆ ನಡೆಸಿ ಸಮಿತಿ ರಚನೆಗೊಂಡಿತು.
ಅಧ್ಯಕ್ಷರಾಗಿ ಬಾಲಕೃಷ್ಣ ನಾವೂರು, ಕರ್ಯದರ್ಶಿಯಾಗಿ ಅನುರಾಜ್ ಸಿ.ಬಿ., ಉಪಾಧ್ಯಕ್ಷರಾಗಿ ಸುಮಂತ್ ಅಲೆಕ್ಕಾಡಿ, ಜೊತೆ ಕಾರ್ಯದರ್ಶಿಯಾಗಿ ಧನುಷ್ ನಾವೂರು, ಖಜಾಂಜಿಯಾಗಿ ಆನಂದ ಅಲೆಕ್ಕಾಡಿ, ಸಂಚಾಲಕರುಗಳಾಗಿ ಜಯಪ್ರಕಾಶ್ ಮದಿಪು ಮತ್ತು ಬಾಲಕೃಷ್ಣ ಪೂಜಾರಿ ನೂಜಾಡಿ ಹಾಗೂ ಸುಮಾರು 28 ಮಂದಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.