Breaking News

ಜ್ಞಾನದೀಪ ವಿದ್ಯಾಸಂಸ್ಥೆ ಎಲಿಮಲೆಯಲ್ಲಿ ತಾಲ್ಲೂಕು ಮಟ್ಟದ ಚದುರಂಗ ಸ್ಪರ್ಧೆ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಸುಳ್ಯ ಹಾಗೂ ಜ್ಞಾನದೀಪ ವಿದ್ಯಾಸಂಸ್ಥೆ ಎಲಿಮಲೆ ಇವುಗಳ ಸಹಯೋಗದಲ್ಲಿ ಜ್ಞಾನದೀಪ ವಿದ್ಯಾಸಂಸ್ಥೆ ಎಲಿಮಲೆ ಇಲ್ಲಿ ತಾಲ್ಲೂಕು ಮಟ್ಟದ 14ರ ವಯೋಮಾನದ ಬಾಲಕರ ಹಾಗೂ ಬಾಲಕಿಯರ ಚದುರಂಗ ಸ್ಪರ್ಧೆಯನ್ನು ಜು.26ರಂದು ನಡೆಯಿತು. ಜ್ಞಾನದೀಪ ವಿಶ್ವಸ್ಥ ಮಂಡಳಿಯ ಅಧ್ಯಕ್ಷ ಚಂದ್ರಶೇಖರ ಭಟ್ ತಳೂರು ದೀಪ ಬೆಳಗಿಸಿ ಉದ್ಘಾಟಿಸಿದರು.

ಶಾಲಾ ಮುಖ್ಯೋಪಾಧ್ಯಾಯರಾದ ಗದಾಧರ್ ಬಾಳುಗೋಡು ಸ್ವಾಗತಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಚಂದ್ರಶೇಖರ ಭಟ್ ಮಾತನಾಡಿ ” ಕ್ರೀಡೆಯಲ್ಲಿ ಸ್ಪರ್ಧಾ ಮನೋಭಾವ ಮುಖ್ಯ. ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸುವುದು ಕ್ರೀಡೆಯ ಒಳ್ಳೆಯ ಲಕ್ಷಣವಾಗಿದೆ . ಈ ಮನೋಭಾವ ಜೀವನದ ಕಷ್ಟ ಸುಖಗಳನ್ನು ಎದುರಿಸಲು ಸಹಕಾರಿಯಾಗುತ್ತದೆ ” ಎಂದರು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಸುಳ್ಯ ಇದರ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಸೂಫಿ ಪೆರಾಜೆ, ದೇವಚಳ್ಳ ವಲಯ ಸಂಪನ್ಮೂಲ ವ್ಯಕ್ತಿ ಸಂತೋಷ್, ಜ್ಞಾನದೀಪ ವಿದ್ಯಾಸಂಸ್ಥೆಯ ಸಂಚಾಲಕರಾದ ಎ. ವಿ. ತೀರ್ಥರಾಮ, ನಿರ್ದೇಶಕರಾದ ರಾಧಾಕೃಷ್ಣ ಮಾವಿನಕಟ್ಟೆ, ಸದಸ್ಯರಾದ ಈಶ್ವರಪ್ಪ ಹರ್ಲಡ್ಕ ಉಪಸ್ಥಿತರಿದ್ದರು. ಸುಮಾರು 30 ಶಾಲೆಗಳಿಂದ 170 ವಿದ್ಯಾರ್ಥಿಗಳು ಸ್ಪರ್ಧಾಳುಗಳಾಗಿ ಆಗಮಿಸಿದ್ದರು. ಸ್ಪರ್ಧಾ ಚಟುವಟಿಕೆಗಳು ಬಹು ಚುರುಕಾಗಿ ಕೊನೆಗೊಂಡಿದ್ದು ಡೆರಿಕ್ ಚೆಸ್ ಸ್ಕೂಲ್ ಮಂಗಳೂರು ಇಲ್ಲಿಯ ಶಿಕ್ಷಕಿ ದೀಕ್ಷಿತಾ ಮಂಗಳೂರು ಇವರು ಚೆಸ್ ಆರ್ಬಿಟರ್ ಆಗಿ ಸಹಕರಿಸಿದ್ದರು. ದೈಹಿಕ ಶಿಕ್ಷಕರುಗಳಾದ ನಾಗರಾಜ್ , ರಮೇಶ್, ತಿರುಮಲೇಶ್ವರಿ ಹಾಗೂ ಎಲ್ಲಾ ಶಿಕ್ಷಕರು ಮತ್ತು ದೈಹಿಕ ಶಿಕ್ಷಕರು ಸಹಕರಿಸಿದರು. ಸ್ಪರ್ಧಾ ವಿಜೇತರಾಗಿ 14 ರ ವಯೋಮಾನದ ಪ್ರಾಥಮಿಕ ಬಾಲಕಿಯರ ವಿಭಾಗದಲ್ಲಿ ಪ್ರಥಮ ಸ್ಥಾನಿಯಾಗಿ ನೇಹಾ ಸಿ. ಪಿ. ಜ್ಞಾನದೀಪ ಆಂಗ್ಲ ಮಾಧ್ಯಮ ಶಾಲೆ ಎಲಿಮಲೆ , ದ್ವಿತೀಯ ಸ್ಥಾನಿಯಾಗಿ ಆಮೃತಾ ಸಿ. ಕುಮಾರಸ್ವಾಮಿ ಆಂಗ್ಲ ಮಾಧ್ಯಮ ಶಾಲೆ ಸುಬ್ರಹ್ಮಣ್ಯ ಹಾಗೂ ತೃತೀಯ ಸ್ಥಾನಿಯಾಗಿ ಅಂಜನಾ.ವಿ. ಕೆ.ಪಿ.ಎಸ್. ಬೆಳ್ಳಾರೆ ಇವರು ಪಡೆದುಕೊಂಡರೆ, 14 ರ ವಯೋಮಾನದ ಪ್ರಾಥಮಿಕ ಬಾಲಕರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ನಿಶಾಲ್ ಭಾಸ್ಕರ್ ವಿದ್ಯಾಬೋಧಿನಿ ಪ್ರಾಥಮಿಕ ಶಾಲೆ ಬಾಳಿಲ , ದ್ವಿತೀಯ ಸ್ಥಾನವನ್ನು ಭುವನ್ ಕೆ. ವಿದ್ಯಾಬೋಧಿನಿ ಪ್ರಾಥಮಿಕ ಶಾಲೆ ಬಾಳಿಲ ಹಾಗೂ ತೃತೀಯ ಸ್ಥಾನವನ್ನು ವಚನ್. ಕೆ. ವಿದ್ಯಾಬೋಧಿನಿ ಪ್ರಾಥಮಿಕ ಶಾಲೆ ಬಾಳಿಲ ಇವರುಗಳು ಪಡೆದುಕೊಂಡರು. ಹಾಗೆಯೇ 14 ರ ವಯೋಮಾನದ ಪ್ರಾಥಮಿಕ ಪ್ರತ್ಯೇಕ ಎಂಟನೇ ತರಗತಿಯ ಬಾಲಕಿಯರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಗೌರಿ. ಕೆ. ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ವಿನೋಬನಗರ ಜಾಲ್ಸೂರು ಹಾಗೂ ದ್ವಿತೀಯ ಸ್ಥಾನವನ್ನು ಯತಿಕಾ. ಎ. ಜಿ. ಬ್ಲೆಸ್ಡ್ ಕುರಿಯಾಕೋಸ್ ಆಂಗ್ಲಮಾಧ್ಯಮ ಶಾಲೆ ಗುತ್ತಿಗಾರು ಪಡೆದುಕೊಂಡರೆ, 14 ರ ವಯೋಮಾನದ ಪ್ರಾಥಮಿಕ ಪ್ರತ್ಯೇಕ ಬಾಲಕರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಕುನಾಲ್ ರವಿತೇಜ್ ಸತ್ಯಸಾಯಿ ಆಂಗ್ಲ ಮಾಧ್ಯಮ ಶಾಲೆ ಚೊಕ್ಕಾಡಿ , ಹಾಗೂ ದ್ವಿತೀಯ ಸ್ಥಾನವನ್ನು ಪ್ರಣಾಮ್ ಕೆ. ಸಿ. ಸರಕಾರಿ ಪದವಿ ಪೂರ್ವ ಕಾಲೇಜು ಸುಳ್ಯ ಇವರು ಪಡೆದುಕೊಂಡರು. ಕಾರ್ಯಕ್ರಮದ ಕೊನೆಯ ಅಂಗವಾಗಿ ಸಮಾರೋಪ ಸಮಾರಂಭ ನಡೆಸಲಾಗಿ ಜ್ಞಾನದೀಪ ಶಿಕ್ಷಕರಾದ ಪುನೀತ್ ರವಿ ಇವರು ವೇದಿಕೆಯಲ್ಲಿ ಆಸೀನರಾಗಿದ್ದ ಅಧ್ಯಕ್ಷರು ಹಾಗೂ ಅತಿಥಿಗಳನ್ನು ಸ್ವಾಗತಿಸಿದರು. ಇದರ ಅಧ್ಯಕ್ಷತೆಯನ್ನು ಸೂಫಿ ಪೆರಾಜೆಯವರು ವಹಿಸಿಕೊಂಡಿದ್ದರು. ಜ್ಞಾನದೀಪ ವಿದ್ಯಾಸಂಸ್ಥೆಯ ದೈಹಿಕ ಶಿಕ್ಷಕಿಯಾದ ದಿವ್ಯಕುಮಾರಿ ಬಾಳುಗೋಡು ಇವರು ಸ್ಪರ್ಧಾ ವಿಜೇತರ ಪಟ್ಟಿಯನ್ನು ವಾಚಿಸಿರು. ವೇದಿಕೆಯಲ್ಲಿದ್ದ ಜ್ಞಾನದೀಪ ವಿದ್ಯಾಸಂಸ್ಥೆಯ ನಿರ್ದೇಶಕರಾದ ಕೃಷ್ಣಯ್ಯ ಮೂಲೆತೋಟ ಬಹುಮಾನವನ್ನು ವಿತರಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.