ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಜ್ಞಾನದೀಪ ಎಲಿಮಲೆ ಸಹಯೋಗದಲ್ಲಿ ಜು.26ರಂದು ನಡೆದ ತಾಲೂಕು ಮಟ್ಟದ 14 ರ ವಯೋಮಾನದ ಪ್ರಾಥಮಿಕ ಬಾಲಕಿಯರ ಚದುರಂಗ ಸ್ಪರ್ಧೆಯಲ್ಲಿ ಜ್ಞಾನದೀಪ ವಿದ್ಯಾಸಂಸ್ಥೆ ಎಲಿಮಲೆಯ ನೇಹಾ ಸಿ. ಪಿ. ಪ್ರಥಮ ಸ್ಥಾನವನ್ನು ಪಡೆದುಕೊಂಡು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾಳೆ. ಇವಳು ಎಲಿಮಲೆ ಸ್ನೇಹ ನಿಲಯದ ಶ್ರೀಮತಿ ಜಾಹ್ನವಿ ಮತ್ತು ಪುರುಷೋತ್ತಮ ಇವರ ಪುತ್ರಿ. ಪ್ರಸ್ತುತ 7ನೇ ತರಗತಿಯ ವಿದ್ಯಾರ್ಥಿನಿ.