ಶೈಕ್ಷಣಿಕ ಸಮನ್ವಯ ಸಮಿತಿ ವತಿಯಿಂದ ನೀಡಲಾದ ಸಮವಸ್ತ್ರ ವಿತರಣೆ ಮತ್ತು ಪೋಷಕರ ಸಭೆಯು ಬೊಳ್ಳಾಜೆ ಶ್ರೀ ಶಾರದಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಬೊಳ್ಳಾಜೆಯಲ್ಲಿ (ಜು.30) ಇಂದು ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಎಸ್.ಡಿ.ಎಂ.ಸಿ. ಅಧ್ಯಕ್ಷ ವಾಸುದೇವ ಹೈದಂಗೂರು ವಹಿಸಿದ್ದರು. ವೇದಿಕೆಯಲ್ಲಿ ಜನಜಾಗೃತಿ ವೇದಿಕೆ ದೊಡ್ಡತೋಟ ವಲಯದ ಅಧ್ಯಕ್ಷ ರಾಜಾರಾಮ ಭಟ್ ಬೆಟ್ಟ, ನಿವೃತ್ತ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಶ್ಯಾಮಲಾ, ಆಡಳಿತ ಮಂಡಳಿ ಕಾರ್ಯದರ್ಶಿ ಅನಂತ ಭಟ್ ಕನಿಯಾಲ, ಮುಖ್ಯೋಪಾಧ್ಯಾಯರಾದ ಗಿರಿಯಪ್ಪ ಸಾಲಿಯಾನ್ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಶೈಕ್ಷಣಿಕ ಸಮನ್ವಯ ಸಮಿತಿ ಸಂಚಾಲಕ ಗೋಪಾಲಕೃಷ್ಣ ಭಟ್ ಕೊಡುಗೆಯಾಗಿ ನೀಡಿದ ಸಮವಸ್ತ್ರ ವಿತರಿಸಲಾಯಿತು.
ಬಳಿಕ ಪೋಷಕರ ಸಭೆ ನಡೆಯಿತು.
ಶಿಕ್ಷಕಿ ಸುಮಿತ್ರಾ ಕಿಲಾರ್ಕಜೆ ಸ್ವಾಗತಿಸಿದರು.
ಶಾಲಾ ಮುಖ್ಯ ಶಿಕ್ಷಕ ಸೀತಾರಾಮ ಸಿ.ಎನ್. ಕಾರ್ಯಕ್ರಮ ನಿರೂಪಿಸಿದರು.