ದ.ಕ. ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಸುಳ್ಯ ತಾಲೂಕಿನಲ್ಲಿ 144 ಸೆಕ್ಷನ್ ವಿಧಿಸಿರುವ ಹಿನ್ನೆಲೆಯಲ್ಲಿ ಸುಳ್ಯ ತಾಲೂಕಿನ ಜಾಲ್ಸೂರು ಘಟಕದ ವತಿಯಿಂದ ಜು.30ರಂದು ಜಾಲ್ಸೂರು ಗ್ರಾಮ ಪಂಚಾಯತಿ ಸಭಾಭವನದಲ್ಲಿ ನಡೆಯಬೇಕಿದ್ದ ಆಟಿ ಉತ್ಸವವನ್ನು ಮುಂದೂಡಲಾಗಿದೆ ಎಂದು ಸಂಧ್ಯಾಚೇತನ ಹಿರಿಯ ನಾಗರಿಕರ ಸಂಘದ ಸಂಯೋಜಕರಾದ ಚೆನ್ನಕೇಶವ ಜಾಲ್ಸೂರು ಅವರು ತಿಳಿಸಿದ್ದಾರೆ.