Breaking News

ಸುಳ್ಯ ನಗರದಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ನ.ಪಂ. ನೇತೃತ್ವದಲ್ಲಿ ನಿರ್ಧಾರ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಸ್ಪರ್ಧಾ ಕಾರ್ಯಕ್ರಮ

ಆಗಸ್ಟ್ 13 ರಂದು ಸುಳ್ಯ ನಗರದಲ್ಲಿ ಮಾನವ ಸರಪಳಿ ನಿರ್ಮಾಣ

ಮುಂದಿನ ಆಗಸ್ಟ್ 15 ರಂದು ನಡೆಯುವ ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಸುಳ್ಯ ನಗರದಲ್ಲಿ ಅಭೂತಪೂರ್ವವಾಗಿ ಆಚರಿಸಲು ನ.ಪಂ. ನೇತೃತ್ವದ ಸಭೆಯಲ್ಲಿ ನಿರ್ಧರಿಸಲಾಗಿದೆ.

 

ನಗರ ವ್ಯಾಪ್ತಿಯ ಎಲ್ಲ ಶಾಲಾ ಕಾಲೇಜುಗಳಲ್ಲಿ ದೇಶಭಕ್ತಿಗೆ ಸಂಬಂಧಿಸಿದಂತೆ ಭಾಷಣ, ಚಿತ್ರಕಲೆ ಮತ್ತು ಪ್ರಬಂಧ ಸ್ಪರ್ಧೆಗಳನ್ನು ಏರ್ಪಡಿಸಲು ಹಾಗೂ ಆಗಸ್ಟ್ 13 ರಂದು ಸುಳ್ಯ ನಗರದಲ್ಲಿ ಎಲ್ಲ ವರ್ತಕರು ಮತ್ತು ವಿದ್ಯಾರ್ಥಿಗಳ ಸಾರ್ವಜನಿಕರ ಸಹಭಾಗಿತ್ವದೊಂದಿಗೆ ಅತ್ಯಂತ ವಿಶಿಷ್ಟವಾದ ರೀತಿಯಲ್ಲಿ ಮಾನವ ಸರಪಳಿ ರಚಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.

ನ ಪಂ ಅಧ್ಯಕ್ಷ ವಿನಯಕುಮಾರ್ ಕಂದಡ್ಕ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಮುಖ್ಯಾಧಿಕಾರಿ ಸುಧಾಕರ ಎಚ್.ಎಂ., ಉಪಾಧ್ಯಕ್ಷೆ ಶ್ರೀಮತಿ ಸರೋಜಿನಿ ಪೆಲತ್ತಡ್ಕ , ಸ್ಥಾಯಿ ಸಮಿತಿ ಅಧ್ಯಕ್ಷೆ ಶ್ರೀಮತಿ ಶೀಲಾ ಕುರುಂಜಿ, ಆಡಳಿತ ಪಕ್ಷ ಮತ್ತು ವಿಪಕ್ಷದ ನ.ಪಂ. ಸದಸ್ಯರುಗಳು, ನಗರದ ಶಾಲಾ ಕಾಲೇಜುಗಳ ಮುಖ್ಯಸ್ಥರುಗಳು, ರಿಕ್ಷಾ ಚಾಲಕರ ಸಂಘದ ಮತ್ತು ಕಾರು ಚಾಲಕರ ಸಂಘದ ಪದಾಧಿ ಕಾರಿಗಳು ಭಾಗವಹಿಸಿದ್ದರು.

ಸಂಭ್ರಮಾಚರಣೆಯ ವಾತಾವರಣ ನಿರ್ಮಾಣಕ್ಕಾಗಿ ನಗರದ ಕೆಲವೆಡೆ ಮುಖ್ಯಸ್ಥಳಗಳಲ್ಲಿ ರಾಷ್ಟ್ರಧ್ವಜದ ಕಟೌಟ್ ಗಳನ್ನಿರಿಸಿ ಸೆಲ್ಫಿ ಕೇಂದ್ರಗಳನ್ನು ನಿರ್ಮಿಸಲು ನಿರ್ಧರಿಸಲಾಯಿತು. ಮತ್ತು ರಾಷ್ಟ್ರ ಲಾಂಛನದ ಮಹತ್ವ ವಿವರಿಸುವ ವ್ಯವಸ್ಥೆ ಮಾಡುವುದೆಂದು ನಿರ್ಧರಿಸಲಾಯಿತು.
ಆಗಸ್ಟ್ 13 ರಂದು ಬೆಳಿಗ್ಗೆ 9 ಗಂಟೆಗೆ ಸರಿಯಾಗಿ ಸುಳ್ಯ ನಗರದ ಎಲ್ಲ ಅಂಗಡಿಗಳವರು ತಮ್ಮ ತಮ್ಮ ಅಂಗಡಿಗಳಿಂದ ಹೊರಬಂದು ರಸ್ತೆ ಬದಿಯಲ್ಲಿ ರಾಷ್ಟ್ರಧ್ವಜ ಹಿಡಿದುಕೊಂಡು ಪರಸ್ಪರ ಕೈ ಹಿಡಿದುಕೊಂಡು ಮಾನವ ಸರಪಳಿ ನಿರ್ಮಿಸಬೇಕು. ನಗರದ ಶಾಲಾ ಕಾಲೇಜುಗಳ ವಿದ್ಯಾರ್ಥಿ ವಿದ್ಯಾರ್ಥಿನಿಯರು ಕೂಡ ಅವರ ಜತೆ ಸೇರಬೇಕು. ಸಂಘಸಂಸ್ಥೆಗಳವರನ್ನು ಕೂಡ ಇದರಲ್ಲಿ ಭಾಗಿಯಾಗುವಂತೆ ಕೇಳುವುದೆಂದು ನಿರ್ಧರಿಸಲಾಯಿತು. ನಗರ ಪಂಚಾಯತ್ ನ ವತಿಯಿಂದ 3 ಟ್ಯಾಬ್ಲೋಗಳನ್ನು ನಿರ್ಮಿಸಿ ಸ್ವಾತಂತ್ರ್ಯದ ಗೀತೆಯನ್ನು ಹಾಡುತ್ತಾ ಆ ಟ್ಯಾಬ್ಲೋ ರಸ್ತೆಯಲ್ಲಿ ಸಾಗಬೇಕು. ಟ್ಯಾಬ್ಲೋ ಬರುವವರೆಗೆ ಅಂಗಡಿಗಳವರು ತಮ್ಮ ತಮ್ಮ ಅಂಗಡಿ ಎದುರು ನಿಂತು ಟ್ಯಾಬ್ಲೋ ದಾಟಿದ ಬಳಿಕ ಅಂಗಡಿಯೊಳಗೆ ಹೋಗಿ ವ್ಯವಹಾರ ಪುನರಾರಂಭಿಸುವಂತೆ ಕೇಳಿಕೊಳ್ಳುವುದೆಂದು ಸಭೆಯಲ್ಲಿ ನಿರ್ಧರಿಸಲಾಯಿತು.
ಈ ಎಲ್ಲಾ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆಯುವಂತೆ ನೋಡಿಕೊಳ್ಳಲು ಕಮಿಟಿಯೊಂದನ್ನು ರಚಿಸಲು ನಿರ್ಧರಿಸಲಾಯಿತು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.