ಪಂಬೆತ್ತಾಡಿ ಗ್ರಾಮದ ಪಂಬೆತ್ತಾಡಿ ಪ್ರಾ.ಕೃ.ಪ.ಸ.ಸಂಘದಿಂದ 100 ಮೀ. ಕಾಂತುಕುಮೇರಿ ರಸ್ತೆಯಲ್ಲಿ ಇಂದು ಬಾವಿಯ ರೀತಿಯ ಹೊಂಡ ಕಾಣಿಸಿಕೊಂಡಿದ್ದು, ಗ್ರಾಮಸ್ಥರು ಆತಂಕಗೊಂಡಿದ್ದಾರೆ.
ಮೇಲಿನಿಂದ ನೋಡುವಾಗ ಬಾವಿಯಂತೆ ಆಳವಾಗಿ ಕಾಣುತ್ತಿದೆ. ಘಟನಾ ಸ್ಥಳಕ್ಕೆ ಕಲ್ಮಡ್ಕ ಗ್ರಾ.ಪಂ. ಉಪಾಧ್ಯಕ್ಷ ಮಹೇಶ್ ಕುಮಾರ್ ಕರಿಕ್ಕಳ, ಪಿ.ಡಿ.ಓ. ಪ್ರವೀಣ್, ಸದಸ್ಯೆ ಪವಿತ್ರ ಕುದ್ವ ಸೇರಿದಂತೆ ಹಲವು ಮಂದಿ ಊರವರು ಆಗಮಿಸಿದ್ದಾರೆ. ಇದು ಪಂಬೆತ್ತಾಡಿಯಿಂದ ಕಾಂತುಕುಮೇರಿ ಭಾಗಕ್ಕೆ ಸಂಪರ್ಕ ಕಲ್ಪಿಸುವ ಜಿ.ಪಂ.ಗೆ ಒಳಪಟ್ಟ ಪ್ರಮುಖ ರಸ್ತಯಾಗಿದ್ದು, ಈ ರಸ್ತೆಯನ್ನು ಅಭಿವೃದ್ಧಿ ಪಡಿಸುವಂತೆ ಈ ಮೊದಲು ಎರಡು ಬಾರಿ ಇಲಾಖೆಗೆ ಮನವಿ ಮಾಡಿದ್ದರೂ ಇಲಾಖೆ ಯಾವುದೇ ಕ್ರಮ ಕೈಗೊಳ್ಳದಿರುವುದಕ್ಕೆ ಸಾರ್ವಜನಿಕರು ಆಕ್ರೋಶಗೊಂಡಿದ್ದಾರೆ.
ಈ ರಸ್ತೆಯಲ್ಲಿ ಸಂಚರಿಸುವವರು ಜಾಗ್ರತೆವಹಿಸಬೇಕು. ಈ ಘಟನೆಯನ್ನು ಕೂಡಲೆ ಜಿಲ್ಲಾಡಳಿತದ ಗಮನಕ್ಕೆ ತರಲಾಗುವುದೆಂದು ಮಹೇಶ್ ಕುಮಾರ್ ಕರಿಕ್ಕಳ ಸುದ್ದಿಗೆ ತಿಳಿಸಿದ್ದಾರೆ.