Breaking News

ಕೆ.ವಿ.ಜಿ.ಐ.ಪಿ.ಎಸ್ ಗೆ ಕೆಸರುಗದ್ದೆ ಕ್ರೀಡಾಕೂಟದಲ್ಲಿ ಅತ್ಯುತ್ತಮ ಬಹುಮಾನಗಳು

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಬ್ರಹ್ಮಗಿರಿ ಸಹೋದಯ ಕಾಂಪ್ಲೆಕ್ಸ್ ಸಿ.ಬಿ.ಎಸ್.ಇ ಆಯೋಜಿಸಿದ ವಾರ್ಷಿಕ ಕೆಸರುಗದ್ದೆ ಕ್ರೀಡಾಕೂಟವು ಜು.28 ರಂದು ಅಂಕೂರ್ ಪಬ್ಲಿಕ್ ಸ್ಕೂಲ್, ನಾಪೋಕ್ಲುನಲ್ಲಿ ನಡೆಯಿತು.

ಕೆವಿಜಿ ಇಂಟರ್ನ್ಯಾಷನಲ್ ಪಬ್ಲಿಕ್ ಶಾಲೆ ಸೇರಿದಂತೆ ಹಲವು ಶಾಲೆಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಕೆವಿ ಜಿ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ ನ ಪ್ರೌಢಶಾಲಾ ವಿದ್ಯಾರ್ಥಿಗಳು ಹುಡುಗರ ಹಗ್ಗಜಗ್ಗಾಟದಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾರೆ. ( ಚಿತ್ರದ ಬಲ ಭಾಗದಿಂದ ನಾಯಕ ಶಿವಶಂಕರ್ 10ನೇ ತರಗತಿ, ಉತ್ಸವ್ ಯು. ಯು 8ನೇ ತರಗತಿ ಹಾಗೂ ಎಡ ಭಾಗದಿಂದ 10ನೇ ತರಗತಿ ವಿದ್ಯರ್ಥಿಗಳಾದ ಶ್ರೇಯಸ್ ಎಸ್, ಯಶಸ್, ನಿಹಾಲ್, ಮೊಹಮ್ಮದ್ ಅನ್ಸಿಫ್, ಶಮಂತ್, ಶ್ರೇಯಸ್ ಎಮ್, ತನ್ವಿತ್ ಮತ್ತು ಪ್ರಾಪ್ತ್ )

ಹುಡುಗಿಯರ ಹಗ್ಗಜಗ್ಗಾಟದಲ್ಲಿ ಅತ್ಯುತ್ತಮ ಪ್ರದರ್ಶನ ಪ್ರಶಸ್ಥಿಯನ್ನು ಪಡೆದರು.100ಮೀ ಕೆಸರುಗದ್ದೆ ಓಟದ ಸ್ಪರ್ಧೆಯಲ್ಲಿ ಹತ್ತನೇ ತರಗತಿಯ ಶಿವಶಂಕರ್ ಕಂಚಿನ ಪದಕವನ್ನು ಪಡೆದರು.
ಈ ಸಂದರ್ಭದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಪ್ರಾಂಶುಪಾಲರಾದ ಅರುಣ್ ಕುಮಾರ್ ಮತ್ತು ಉಪ ಪ್ರಾಂಶುಪಾಲರಾದ ಶಿಲ್ಪ ಬಿದ್ದಪ್ಪ ಇವರುಗಳ ಮಾರ್ಗದರ್ಶನದಲ್ಲಿ ದೈಹಿಕ ಶಿಕ್ಷಕರಾದ ತೀರ್ಥವರ್ಣ ಬಳ್ಳಡ್ಕ ಮತ್ತು ಶ್ರೀಮತಿ ಸುಪ್ರಿಯ ತರಬೇತಿಯನ್ನು ನೀಡಿದ್ದರು.

ಈ ಕ್ರೀಡಾ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳನ್ನು ಕೆವಿಜಿ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಪ್ರಧಾನ ಕಾರ್ಯದರ್ಶಿ ಡಾ. ರೇಣುಕಾಪ್ರಸಾದ್, ಕಾರ್ಯನಿರ್ವಹಣಾಧಿಕಾರಿ ಡಾ. ಉಜ್ವಲ್ ಯು. ಜೆ ಅಭಿನಂದಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.