Breaking News

ಡಿ.ವಿ.ಸದಾನಂದ ಗೌಡರ ಸಮ್ಮುಖದಲ್ಲೂ ಅಸಮಾಧಾನ ತೋಡಿಕೊಂಡ ಪ್ರವೀಣ್ ಪತ್ನಿ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಈ ಘಟನೆಗೆ ಸರಕಾರವೂ ಕಾರಣ, ಒಪ್ಪಿಕೊಳ್ಳಿ ಎಂದ ಪತ್ನಿ ನೂತನ

ಎನ್‌ಐಎ ಕಚೇರಿ ತಡವಾಗುತ್ತಿದೆ, ಪಕ್ಷದ ಕಚೇರಿಯಾದರೆ ಬೇಗ ಮಾಡುತ್ತಿರಲಿಲ್ಲವೇ?

ದುಷ್ಕರ್ಮಿಗಳಿಂದ ಹತ್ಯೆಗೀಡಾದ ಬಿಜೆಪಿಯ ಯುವ ಮುಖಂಡ ಪ್ರವೀಣ್ ನೆಟ್ಟಾರು ಮನೆಗೆ ಇಂದು ಮಾಜಿ ಮುಖ್ಯಮಂತ್ರಿ, ಸಂಸದ ಡಿ.ವಿ.ಸದಾನಂದ ಗೌಡ ಭೇಟಿ ನೀಡಿದ್ದು, ಅವರ ಸಮ್ಮುಖದಲ್ಲೂ ಪ್ರವೀಣ್ ಪತ್ನಿ ನೂತನ ಹಾಗೂ ಮನೆಯವರು ತಮ್ಮ ಅಸಮಾಧಾನ ಮತ್ತು ಆಕ್ರೋಶ ತೋಡಿಕೊಂಡ ಘಟನೆ ನಡೆಯಿತು.
ಡಿ.ವಿ.ಸದಾನಂದ ಗೌಡರು ಪ್ರವೀಣ್‌ರವರ ಮನೆ ಪ್ರವೇಶಿಸಿ ಕುಳಿತುಕೊಳ್ಳುತ್ತಿದ್ದಂತೆ “ಕೇಸು ಏನಾಯಿತು ಸರ್” ಎಂದು ಪ್ರವೀಣ್ ಪತ್ನಿ ನೂತನ ಪ್ರಶ್ನಿಸಿದರು. ನಾನು ಎಸ್.ಪಿ.ಯವರೊಂದಿಗೆ ಮಾತನಾಡಿದ್ದೇನೆ. ಎನ್‌ಐಎ ತನಿಖೆಗೂ ಒಪ್ಪಿಸಲಾಗಿದ್ದು, ಸೋಮವಾರ ಗೃಹ ಸಚಿವರನ್ನು ಭೇಟಿ ಮಾಡಲಿದ್ದೇವೆ ಎಂದು ಡಿವಿಎಸ್ ಮಾತನಾಡುತ್ತಿದ್ದಂತೆ, ಸಿ.ಎಂ. ಬಂದು ಹೋಗಿ ೨ ದಿವಸ ಆಯಿತು. ಇನ್ನೂ ಆರೋಪಿಗಳನ್ನು ಬಂಧಿಸಿಲ್ಲ ಎಂದರೆ ಏನರ್ಥ? ಈ ಘಟನೆಗೆ ನಿಮ್ಮ ಸರಕಾರವೂ ಕಾರಣ. ದಯವಿಟ್ಟು ಒಪ್ಪಿಕೊಳ್ಳಿ ಎಂದು ನೂತನ ಹೇಳಿದರು.
ನಾನು ಮುಖ್ಯಮಂತ್ರಿಯಾಗಿರುವಾಗಲೂ ಇಂತಹ ಹಲವು ಘಟನೆ ನಡೆದಿತ್ತು… ಎಂದು ಡಿವಿಎಸ್ ಹೇಳುತ್ತಿದ್ದಂತೆ, ನೀವು ಅವತ್ತೇ ಸರಿಯಾದ ಕ್ರಮ ಕೈಗೊಳ್ಳುತ್ತಿದ್ದರೆ ಈ ರೀತಿ ಆಗುತ್ತಿತ್ತಾ? ಎಂದು ನೂತನ ಮತ್ತೆ ಪ್ರಶ್ನಿಸಿದರು. ಹೀಗೆಲ್ಲಾ ಆದರೆ ಅವರು ನಮ್ಮನ್ನೆಲ್ಲಾ ಕೊಂದು ಮುಗಿಸ್ತಾರೆ. ಭಾರತ ಪಾಕಿಸ್ತಾನವಾಗುತ್ತದೆ ಎಂದು ಮನೆಯವರು ಹೇಳಿದರು.
ಪ್ರವೀಣ್‌ರಿಗೆ ಬೆದರಿಕೆ ಕರೆ ಇತ್ತು. ಆದರೂ ಪೊಲೀಸರು ಕ್ರಮ ಕೈಗೊಂಡಿಲ್ಲ ಎಂದು ಸಂಬಂಧಿಗಳು ಹೇಳಿದಾಗ ಈ ಮಾಹಿತಿ ನನಗೆ ಈಗಷ್ಟೇ ಗೊತ್ತಾಯಿತು. ಇದು ಹೌದೇ ಆದಾದರೆ ಇದೊಂದು ಗಂಭೀರ ವಿಷಯ ಎಂದು ಡಿವಿಎಸ್ ಹೇಳಿದರು. ನಿಮ್ಮೂರಿನ ಕಾರ್ಯಕರ್ತನಲ್ಲವೇ? ಮಾಹಿತಿ ಪಡೆದುಕೊಳ್ಳುವುದು ನಿಮ್ಮ ಜವಾಬ್ದಾರಿ ಅಲ್ಲವೇ? ಎಂದು ನೂತನ ಪ್ರಶ್ನಿಸಿದರು.
ಸದಾನಂದ ಗೌಡರು ಎನ್‌ಐಎ ಕಚೇರಿ ಬಗ್ಗೆ ಪ್ರಸ್ತಾಪಿಸಿದಾಗ, ಇನ್ನೆಷ್ಟು ಸಮಯ ಬೇಕು ಇದಕ್ಕೆ. ಪಕ್ಷದ ಕಚೇರಿಯಾದರೆ ಬೇಗ ಮಾಡುತ್ತಿರಲಿಲ್ಲವೇ? ಎಂದೂ ಮನೆಯವರು ಪ್ರಶ್ನಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.