Breaking News

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ : ಸರಕಾರ ಇನ್ನಷ್ಟು ದಿಟ್ಟ ಕ್ರಮ ಕೈಗೊಳ್ಳಬೇಕಿತ್ತು

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಸರಕಾರದ ವೈಫಲ್ಯ ಎಂಬ ಭಾವನೆ ಜನರಿಗೆ ಬಂದಿದೆ; ಶೈಲಿ ತಿದ್ದಿಕೊಳ್ಳಬೇಕು

ಮಾಜಿ ಮುಖ್ಯಮಂತ್ರಿ, ಸಂಸದ ಡಿ.ವಿ.ಸದಾನಂದ ಗೌಡ ಪ್ರತಿಕ್ರಿಯೆ

ಸರಕಾರದ ಪ್ರತಿನಿಧಿಗಳಾಗಿ ಎಲ್ಲರ ಮನೆಗೆ ಹೋಗುವುದು ನ್ಯಾಯ ಮತ್ತು ಜವಾಬ್ದಾರಿ

ಪ್ರವೀಣ್ ನೆಟ್ಟಾರು ಹತ್ಯೆ ಅತ್ಯಂತ ಖಂಡನೀಯ. ಈ ಘಟನೆಯ ಹಿಂದೆ ಮತ್ತು ನಂತರದ ಸಂದರ್ಭದಲ್ಲಿ ಸರಕಾರ ಇನ್ನಷ್ಟು ದಿಟ್ಟ ಕ್ರಮಗಳನ್ನು ಕೈಗೊಳ್ಳಬೇಕಿತ್ತು. ಇದರಲ್ಲಿ ಸರಕಾರ ಎಡವಿದೆ ಎಂದು ಜನ ಭಾವಿಸುವುದು ಸಹಜ ಎಂದು ಮುಖ್ಯಮಂತ್ರಿ, ಸಂಸದ ಡಿ.ವಿ.ಸದಾನಂದ ಗೌಡ ಹೇಳಿದ್ದಾರೆ.

ಇಂದು ಪ್ರವೀಣ್ ನೆಟ್ಟಾರು ಅವರ ಮನೆಗೆ ಭೇಟಿ ನೀಡಿದ ಬಳಿಕ ಮಾಧ್ಯಮದವರನ್ನುದ್ಧೇಶಿಸಿ ಮಾತನಾಡಿದ ಸದಾನಂದ ಗೌಡರು, ನಮ್ಮದೇ ಸರಕಾರ ಇದ್ದರೂ ಕಾನೂನು ಸುವ್ಯವಸ್ಥೆಯಲ್ಲಿ ಕಠಿಣ ಕ್ರಮ ತೆಗೆದುಕೊಳ್ಳುವುದಕ್ಕೆ ಯಾಕೆ ಸಾಧ್ಯವಾಗಿಲ್ಲ ಎಂಬ ಆರೋಪ ಎಲ್ಲರಲ್ಲೂ ಇದೆ. ಈ ರೀತಿಯ ಕ್ರಮ ಕೈಗೊಳ್ಳುವಲ್ಲಿ ನಾವು ಹಿಂದೆ ಬಿದ್ದಿದ್ದೇವೆ ಎಂಬುದನ್ನು ನಾನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳುತ್ತೇನೆ.
ಇತ್ತೀಚಿನ ಬೆಳವಣಿಗೆಗಳ ಹಿನ್ನಲೆಯಲ್ಲಿ ನಾವು ಹೆಚ್ಚು ಕಟ್ಟೆಚ್ಚರ ವಹಿಸಬೇಕಿತ್ತು. ಪೊಲೀಸ್ ಇಲಾಖೆ ಕೂಡಾ ಹೆಚ್ಚು ಒತ್ತು ಕೊಟ್ಟು ಕೆಲಸ ಮಾಡಬೇಕಿತ್ತು. ಇತ್ತೀಚಿನ ದಿನಗಳಲ್ಲಿ ಪೊಲೀಸರೆಂದರೆ ಭಯ ಇಲ್ಲದ ವಾತಾವರಣ ಸೃಷ್ಟಿಯಾಗಿದೆ ಎಂದು ಹೇಳಿದರು.

ಸಂಸದ ತೇಜಸ್ವಿ ಸೂರ್ಯ ಹೇಳಿಕೆಗೆ ಸಂಬಂಧಿಸಿ ಪ್ರತಿಕ್ರಿಯಿಸಿದ ಸದಾನಂದ ಗೌಡರು, ಪೊಲೀಸರಿಗೆ ಪ್ರತಿಯೊಬ್ಬರ ಹಿಂದೆ ನಿಲ್ಲುವುದು ಅಸಾಧ್ಯ ಸರಿ. ಆದರೆ ಸಮಾಜದಲ್ಲಿ ಈ ರೀತಿ ಮಾಡಿದರೆ ನಮಗೆ ಭವಿಷ್ಯವಿಲ್ಲ ಎಂಬ ವಾತಾವರಣ ಸರಕಾರ ಸೃಷ್ಟಿಸಬೇಕು ಎಂದು ಹೇಳಿದರು.

ಎನ್.ಐ.ಎ. ತನಿಖೆಯ ಅಧಿಕೃತ ಆದೇಶ ರಾಜ್ಯ ಸರಕಾರದಿಂದ ಬಂದ ಕೂಡಲೇ ಸೋಮವಾರ ಅಥವಾ ಮಂಗಳವಾರ ರಾಜ್ಯದ ಸಂಸದರು ಗೃಹಮಂತ್ರಿಗಳನ್ನು ಭೇಟಿ ಮಾಡಿ ಎನ್‌ಐಎ ತನಿಖೆಗೆ ಒಪ್ಪಿಸುವ ತೀರ್ಮಾನ ಮಾಡಿದ್ದೇವೆ ಎಂದವರು ಹೇಳಿದರು. ಪ್ರಕರಣದ ಆರೋಪಿಗಳು ಜಗತ್ತಿನ ಎಲ್ಲೇ ಅಡಗಿದ್ದರೂ ಅವರನ್ನು ಬಂಧಿಸಲಾಗುವುದು ಎಂದು ಹೇಳಿದರು.

ಮುಖ್ಯಮಂತ್ರಿ ಮತ್ತು ಇತರ ಜನಪ್ರತಿನಿಧಿಗಳು ಮಸೂದ್ ಮನೆಗೆ ಭೇಟಿ ನೀಡಿಲ್ಲ ಆರೋಪದ ಕುರಿತಂತೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಡಿ.ವಿ., ನಾನು ಸಂಘಟನೆಯ ಪ್ರಮುಖನ ನೆಲೆಯಲ್ಲಿ ಮತ್ತು ಈ ಕುಟುಂಬದ ಪರಿಚಯದ ನೆಲೆಯಲ್ಲಿ ಬಂದಿದ್ದೇನೆ. ಸರಕಾರದ ಪ್ರತಿನಿಧಿಗಳು ಯಾರದ್ದೇ ಮನೆಯಾದರೂ ಹೋಗಬೇಕಾದದ್ದು ನ್ಯಾಯ ಮತ್ತು ಜವಾಬ್ದಾರಿ ಎಂದರು.

ಬಿಜೆಪಿ ರಾಜ್ಯಾಧ್ಯಕ್ಷರ ವಿರುದ್ಧದ ಕಾರ್ಯಕರ್ತರ ಆಕ್ರೋಶದ ಬಗೆಗಿನ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ನಮ್ಮ ಶೈಲಿ ಬದಲಾಗಬೇಕು ಎಂಬುದು ಕಾರ್ಯಕರ್ತರ ಬಯಕೆಯಾಗಿದೆ ಎಂದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.