Breaking News

ಪರವಾನಿಗೆ ಇಲ್ಲದೆ ಮರ ಸಾಗಾಟ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಅರಣ್ಯ ಇಲಾಖೆಯಿಂದ ವಶ

ಅಜ್ಜಾವರ ಗ್ರಾಮದ ಮುಂಡೋಳಿಮೂಲೆ ಸಮೀಪದಿಂದ ಹಲಸು ಮರದ ದಿಮ್ಮಿಗಳನ್ನು ಸಾಗಿಸುತ್ತಿದ್ದ ಖಚಿತ ಮಾಹಿತಿ ಪಡೆದ ಸುಳ್ಯ ಅರಣ್ಯ ಇಲಾಖೆ ಸಿಬ್ಬಂದಿಗಳು ವಾಹನ ಸಹಿತ, ಮರವನ್ನು ಹಾಗೂ ಮರ ಸಾಗಿಸುತ್ತಿದ್ದ ಮೂವರ ಸಹಿತ ನಾಲ್ಕು ಮಂದಿಯ ಮೇಲೆ ಕೇಸು ದಾಖಲಿಸಿಕೊಂಡ ಘಟನೆ ಜು.೨೯ರಂದು ರಾತ್ರಿ ವರದಿಯಾಗಿದೆ.


ಅರಣ್ಯ ಇಲಾಖೆ ಸಿಬ್ಬಂದಿಗಳು ರಾತ್ರಿ ೯ರ ವೇಳೆ ಗಸ್ತು ತಿರುಗುತ್ತಿದ್ದಾಗ ಮರ ಸಾಗಿಸುವ ಮಾಹಿತಿ ಗೊತ್ತಾಗಿ ಮುಂಡೋಳಿಮೂಲೆ ಎಂಬಲ್ಲಿಗೆ ಹೋಗುತ್ತಿದ್ದಂತೆ ಮುಳ್ಯ ಕಜೆ ಎಂಬಲ್ಲಿ ರಸ್ತೆಯಲ್ಲಿ ಸ್ವರಾಜ್ ಮಜ್ದ ವಾಹನದಲ್ಲಿ ಹಲಸು ಮರದ ದಿಮ್ಮಿ ಸಾಗಾಟವಾಗುತ್ತಿರುವುದು ಕಂಡು ಬಂತು. ತಕ್ಷಣ ಅರಣ್ಯ ಇಲಾಖೆಯವರು ವಾಹನವನ್ನು ತಡೆದು, ಪರವಾನಿಗೆ ಇಲ್ಲದೆ ಮರ ಸಾಗಿಸುತ್ತಿದ್ದ ಮಹಮ್ಮದ್ ಶಫೀಕ್ ಅಡ್ಕಾರ್, ಸುಂದರ್ ಅಡ್ಕಾರ್, ಫೈಝಲ್ ಅಡ್ಕಾರ್ ಎಂಬವರನ್ನು ವಶಕ್ಕೆ ಪಡೆದರು. ಬಂಧಿತರು ನೀಡಿದ ಹೇಳಿಕೆಯಂತೆ ಮರ ಸಾಗಾಟದ ಪ್ರಮುಖ ಆರೋಪಿಯೆಂದು ಅಬ್ದುಲ್ ಮಜೀದ್ ನಡುವಡ್ಕರೆಂದು ತಿಳಿದು ಅವರ ಮೇಲೂ ಕೇಸು ದಾಖಲಾಗಿರುವುದಾಗಿ ತಿಳಿದು ಬಂದಿದೆ.
ಸುಳ್ಯ ಎ.ಸಿ.ಎಫ್. ಪ್ರವೀಣ್ ಕುಮಾರ್ ಶೆಟ್ಟಿ, ರೇಂಜರ್ ಗಿರೀಶ್ ರ ಮಾರ್ಗದರ್ಶನದ ಮೇರೆಗೆ ಫಾರೆಸ್ಟರ್ ಯಶೋಧರ, ಸಿಬ್ಬಂದಿಗಳಾದ ದೇವಿಪ್ರಸಾದ್, ಲಿಂಗಪ್ಪ, ಗಂಗಾಧರ್, ಪುರುಷೋತ್ತಮ್ ಕಾರ್ಯಾಚರಣೆಯಲ್ಲಿದ್ದರೆಂದು ತಿಳಿದು ಬಂದಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.