Breaking News

ಸುಳ್ಯ ನಗರ ಪಂಚಾಯತ್ ಸಾಮಾನ್ಯ ಸಭೆ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ನಗರದ ಪಾರ್ಕಿಂಗ್ ವ್ಯವಸ್ಥೆಯ ಕುರಿತು ಸುಳ್ಯ ಪೊಲೀಸ್ ಠಾಣಾ ಎಸ್ ಐ ದಿಲೀಪ್ ರವರೊಂದಿಗೆ ಚರ್ಚೆ

ಕಸ ವಿಲೇವಾರಿ, ಕುಡಿಯುವ ನೀರು, ದಾರಿದೀಪ ವಿಷಯಗಳ ಕುರಿತು ಸುದೀರ್ಘ ಚರ್ಚೆ

ಸುಳ್ಯ ನಗರ ಪಂಚಾಯತ್ ಇದರ ಸಾಮಾನ್ಯ ಸಭೆ ಸಮುದಾಯ ಭವನದ ಸಭಾಂಗಣದಲ್ಲಿ ನ ಪಂ ಅಧ್ಯಕ್ಷ ವಿನಯ್ ಕುಮಾರ್ ಕಂದಡ್ಕ ರವರ ಅಧ್ಯಕ್ಷತೆಯಲ್ಲಿ ಇಂದು ನಡೆಯಿತು.
ಸಭೆಯ ಆರಂಭದಲ್ಲಿ ಪ್ರಧಾನ ಮಂತ್ರಿ ಅವಾಸ್ ಯೋಜನೆಯ ಕುರಿತು ಕಿರು ಚಿತ್ರ ನಿರ್ಮಿಸಿ ದ್ವಿತೀಯ ಬಹುಮಾನ ಪಡೆದಿರುವ ಚಿತ್ರ ನಿರ್ಮಾಪಕ ತೇಜಸ್ವಿ ಕಡಪಾಲರವರಿಗೆ ಸುಳ್ಯ ನಗರ ಪಂಚಾಯತ್ ವತಿಯಿಂದ ಸನ್ಮಾನ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಅವರ ನಿರ್ಮಾಪಕದಲ್ಲಿ ಮೂಡಿ ಬಂದಿರುವ ಚಿತ್ರವನ್ನು ಪ್ರಸಾರ ಮಾಡಲಾಯಿತು.

ನಂತರ ಸಾಮಾನ್ಯ ಸಭೆ ಆರಂಭಗೊಂಡು ನಗರದ ಟ್ರಾಫಿಕ್ ಸಮಸ್ಯೆಗಳ ಬಗ್ಗೆ, ಪಾರ್ಕಿಂಗ್ ವಿಷಯಗಳ ಬಗ್ಗೆ ಸಭೆಗೆ ಹಾಜರಾಗಿದ್ದ ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚೆಗಳು ಮತ್ತು ಸಲಹಾ ಸೂಚನೆಗಳು ನಡೆಯಿತು.

ಈ ಸಂದರ್ಭದಲ್ಲಿ ನಗರ ಪಂಚಾಯತಿ ವತಿಯಿಂದ ನಗರದ ಪಾರ್ಕಿಂಗ್ ವ್ಯವಸ್ಥೆಗೆ ಪೊಲೀಸ್ ಇಲಾಖೆಗೆ ಸಹಕರಿಸಬೇಕಾದ ಅಂಶಗಳನ್ನು ಪ್ರಸ್ತಾಪಿಸಿದ ಎ ಎಸ್ ಐ ಉದಯರವರು ನಗರದಲ್ಲಿ ವಾಹನ ಪಾರ್ಕಿಂಗ್ ಮಾಡುವ ಸ್ಥಳಗಳಲ್ಲಿ, ಮತ್ತು ನೋ ಪಾರ್ಕಿಂಗ್ ಏರಿಯಾ ಗಳಲ್ಲಿ ಬೋರ್ಡ್ ಅಳವಡಿಸಬೇಕೆಂದು, ಪಾದಾಚಾರಿಗಳು ರಸ್ತೆ ದಾಟುವ ಭಾಗದಲ್ಲಿ ಜೀಬ್ರಾ ಕ್ರಾಸ್ ಅಳವಡಿಸುವುದರ ಬಗ್ಗೆ, ಹಳೆ ಗೇಟು,ಜ್ಯೋತಿ ವೃತ,ಶ್ರೀರಾಮ್ ಪೇಟೆ,ಜಟಿಪಳ್ಳ ಕ್ರಾಸ್, ಖಾಸಗಿ ಬಸ್ ನಿಲ್ದಾಣ, ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣ, ಕಟ್ಟೆ ಜಂಕ್ಷನ್ ಬಳಿ, ಆಲೆಟ್ಟಿ ಜಂಕ್ಷನ್ ಮುಂತಾದ ಕಡೆಗಳಲ್ಲಿ 10 ಮೀಟರ್ ದೂರದವರೆಗೆ ನೋ ಪಾರ್ಕಿಂಗ್ ಬೋರ್ಡ್ ಅಳವಡಿಕೆ, ಶಾಲಾ ಮಕ್ಕಳು ರಸ್ತೆ ದಾಟುವ, ವೇಗದ ಮಿತಿ ಮುಂತಾದ ಫಲಕಗಳನ್ನು ಅಳವಡಿಸುವ ಬಗ್ಗೆ ಮುಂತಾದ ವಿಷಯಗಳ ಕುರಿತು ನಿರ್ಣಯಗಳನ್ನು ಕೈಗೊಂಡು ಪೊಲೀಸ್ ಇಲಾಖೆಗೆ ಸಹಕರಿಸುವಂತೆ ಕೇಳಿಕೊಂಡರು.
*ಇದೇ ವೇಳೆ ಸಭೆಗೆ ಬಂದ ಸುಳ್ಯ ಎಸ್ ಐ ದಿಲೀಪ್ ಮಾತನಾಡಿ ಸುಳ್ಯದ ಕೆಲವು ಭಾಗಗಳಲ್ಲಿ ರಾಜ್ಯ ಹೆದ್ದಾರಿಯಲ್ಲಿ ಆಟೋ ಚಾಲಕರು ವಾಹನವನ್ನು ಪಾರ್ಕ್ ಮಾಡುತ್ತಿದ್ದು ಇದರಿಂದ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದೆ. ಕೆಲವು ಕಡೆಗಳಲ್ಲಿ ಒಂದೇ ಏರಿಯಾದಲ್ಲಿ ಎರಡೆರಡು ಪಾರ್ಕಿಂಗ್ ಇದ್ದು ಅವುಗಳನ್ನು ನಿಯಂತ್ರಿಸುವಂತೆ ಕೇಳಿಕೊಂಡರು.


ಅದೇ ರೀತಿ ಸುಳ್ಯ ನಗರದ ಹಲವಾರು ವರ್ತಕರು ವ್ಯಾಪಾರ ಮಳಿಗೆಗಳಲ್ಲಿ ಸಿ ಸಿ ಕ್ಯಾಮರಗಳನ್ನು ಅಳವಡಿಸಿಕೊಂಡು ಏನಾದರು ಘಟನೆಗಳು ಸಂಭವಿಸಿದ ಸಂದರ್ಭದಲ್ಲಿ ಪೊಲೀಸ್ ಇಲಾಖೆಗೆ ಪೊಲೀಸ್ ಇಲಾಖೆಗೆ ಅವರಿಂದ ಸಂಪೂರ್ಣ ಸಹಕಾರಗಳು ದೊರಕುತ್ತಿದೆ. ಆದರೆ ರಾತ್ರಿ ಸಮಯಗಳಲ್ಲಿ ನಗರದ ಕಂಬಗಳಲ್ಲಿ ದೀಪಗಳು ಸರಿಯಾಗಿ ಇಲ್ಲದಿದ್ದರೆ ಸಿ ಸಿ ಕ್ಯಾಮರಾ ಇದ್ದೂ ಪ್ರಯೋಜನ ಇಲ್ಲದಂತಾಗುತ್ತದೆ. ಆದ್ದರಿಂದಇದರ ಬಗ್ಗೆ ಗಮನಹರಿಸುವಂತೆ ಕೇಳಿಕೊಂಡರು.
ಅಧ್ಯಕ್ಷರು ಮುಂದಿನ ಸಭೆಗೆ ಆಟೋ ಮತ್ತು ವ್ಯಾನ್ ಜೀಪು ಚಾಲುಕರನ್ನು,ಆರ್ ಟಿ ಓ ಅಧಿಕಾರಿಗಳನ್ನು, ವರ್ತಕರ ಸಂಘದವರನ್ನು, ಮತ್ತು ಪೊಲೀಸ್ ಅಧಿಕಾರಿಗಳನ್ನು ಕರೆದು ಚರ್ಚಿಸಿ ತೀರ್ಮಾನ ಕೈಗೊಳ್ಳವ ಬಗ್ಗೆ ಸಲಹೆ ನೀಡಿದರು.
ನಗರ ಪಂಚಾಯತ್ ಸದಸ್ಯ ಎಂ ವೆಂಕಪ್ಪಗೌಡ ಮಾತನಾಡಿ ಶ್ರೀರಾಮ್ ಪೇಟೆ ಬಳಿ ಕೆಎಸ್ಆರ್ಟಿಸಿ ಬಸ್ಸುಗಳು ಪ್ರಯಾಣಿಕರನ್ನು ಇಳಿಸುವ ಮತ್ತು ಹತ್ತಿಸುವ ಸಂದರ್ಭದಲ್ಲಿ ರಸ್ತೆಯ ಎರಡು ಬದಿಗಳಲ್ಲಿ ನೇರ ನೇರವಾಗಿ ಬಸ್ಸುಗಳನ್ನು ನಿಲ್ಲಿಸಿ ಬೇರೆ ವಾಹನಗಳಿಗೆ ಚಲಿಸಲು ತೊಂದರೆ ಮಾಡುತ್ತಿದ್ದಾರೆ. ಆದ್ದರಿಂದ ಇದರ ಬಗ್ಗೆ ಗಮನ ಅರಿಸಿ ಅವರಿಗೆ ತಿಳಿಸುವುದರೊಂದಿಗೆ ಅದನ್ನು ಪಾಲಿಸದಿದ್ದಲ್ಲಿ ಅಂತಹ ಚಾಲಕರಿಗೆ ಕೇಸ್ ಹಾಕುವ ಕಾರ್ಯವನ್ನು ಮಾಡಬೇಕು ಎಂದು ಹೇಳಿದರು.

ಸಭೆ ಪ್ರಾರಂಭದಲ್ಲಿ ವೆಂಕಪ್ಪಗೌಡರು ಮಾತನಾಡಿ ಕಳೆದ ಒಂದು ವಾರಗಳಲ್ಲಿ ಬೆಳ್ಳಾರೆಯಲ್ಲಿ ಪ್ರವೀಣ್ ಪೂಜಾರಿ, ಮತ್ತು ಮಸೂದ್ ರವರ ಹತ್ಯೆ ಘಟನೆಗೆ ಸಂಭಂದಿಸಿ ಖಂಡನಾ ನಿರ್ಣಯವನ್ನು ಕೈಗೊಳ್ಳಬೇಕೆಂದು ಹೇಳಿದರು. ಇದಕ್ಕೆ ಅಧ್ಯಕ್ಷ ವಿನಯಕುಮಾರ್ ಕಂದಡ್ಕ ಮೊದಲು ಅಜೆಂಡಾದ ವಿಷಯಗಳು ಚರ್ಚೆಗೆ ಬರಲಿ ಇತರ ವಿಷಯಗಳ ಬಗ್ಗೆ ಮತ್ತೆ ಚರ್ಚಿಸೋಣ ಎಂದು ಹೇಳಿ ಕಳೆದ ಸಭೆಯಲ್ಲಿ ಜರುಗಿದ ನಡವಳಿಗಳನ್ನು ಮಂಡಿಸಿ ಪ್ರಶ್ನೋತ್ತರ ಗಳಿಗೆ ಅವಕಾಶ ಕಲ್ಪಿಸಲಾಯಿತು.
ಈ ಸಂದರ್ಭದಲ್ಲಿ ನೀರು ಸರಬರಾಜು ವಿಭಾಗಕ್ಕೆ ಹೊರಗುತ್ತಿಗೆಯಲ್ಲಿ ಸಿಬ್ಬಂದಿಗಳನ್ನು ಹೊದಗಿಸಲು 2015. 16ರಲ್ಲಿ ಕರೆದಿರುವ ಟೆಂಡರು ಅವಧಿಯು ಮುಗಿದಿದ್ದು, ಮುಂದಿನ ಸಾಲಿಗೆ ಟೆಂಡರ್ ಕರೆಯುವ ಕುರಿತು, ಕಲ್ಚರ್ಪೆ ಘನತ್ಯಾಜ ಘಟಕದ ಗ್ಯಾಸ್ಫಿಕೇಶನ್ ಕಾರ್ಯಕ್ಕೆ ಹೊರಗುತ್ತಿಗೆ ನೌಕರರನ್ನು ಹೊದಗಿಸುವ ಅಂದಾಜು ಪಟ್ಟಿಗೆ ಮಾನ್ಯ ಸಹಾಯಕ ಕಾರ್ಯಪಾಲಕ ಅಭಿಯಂತರರು, ಡಿ ಯು ಡಿ ಸಿ ಮಂಗಳೂರು ಇವರಿಂದ ತಾಂತ್ರಿಕ ಮಂಜೂರಾತಿ ಪಡೆದಿರುತ್ತದೆ. ಸದ್ರಿ ಕಾಮಗಾರಿಯ ಅಂದಾಜು ಮೊತ್ತ ರೂಪಾಯಿ 29 ಲಕ್ಷವಾಗಿದ್ದು ಈ ಬಗ್ಗೆ ಟೆಂಡರು ಕರೆಯುವ ವಿಷಯದಲ್ಲಿ ಅಧ್ಯಕ್ಷರು ಪ್ರಸ್ತಾಪಿಸಿದರು.


ಇದರ ಬಗ್ಗೆ ಮಾತನಾಡಿದ ವೆಂಕಪ್ಪಗೌಡರು ಈಗಾಗಲೇ ಕಲ್ಚರ್ಪೆ ಯಲ್ಲಿ ಕಸದ ಬಗ್ಗೆ ಬೇರೆ ಬೇರೆ ಯಂತ್ರಗಳಿಗೆ ಸುಮಾರು ಹಣಗಳನ್ನು ಖರ್ಚು ಮಾಡಲಾಗಿದೆ.
ಮತ್ತೆ ಮತ್ತೆ ಅಲ್ಲಿಗೆ ಹಣ ಸುರಿಯುವುದು ನನಗೆ ಸರಿ ಕಾಣುತ್ತಿಲ್ಲ ಎಂದು ಹೇಳಿದರು. ಕ್ರಮಬದ್ಧವಾಗಿ ಕಸಗಳನ್ನು ಬರ್ನ್ ಮಾಡುವ ಕಾರ್ಯ ಮಾಡಬೇಕು. ಅದು ಬಿಟ್ಟು ಬೇರೆ ಬೇರೆ ರೀತಿಯಲ್ಲಿ ಇನ್ನು ಅಲ್ಲಿಗೆ ಖರ್ಚು ಮಾಡುವುದು ಸರಿಯಲ್ಲ ಎಂದು ಹೇಳಿದರು.
ಸುಳ್ಯ ನಗರ ಪಂಚಾಯತಿ ವ್ಯಾಪ್ತಿಯ ಬಸ್ ನಿಲ್ದಾಣದ ಬಳಿ ಇರುವ ಹಿಂದುಸ್ತಾನ್ ಸಿಟಿ ಡೆವಲಪರ್ಸ್ ಇವರ ವಾಣಿಜ್ಯ ಮಳಿಗೆಯ ಮುಂಭಾಗದಲ್ಲಿ ಇರುವ ಹೂವಿನ ಮಾರುಕಟ್ಟೆಯನ್ನು ಸ್ಥಳಾಂತರಿಸಿ ನೀಡುವಂತೆ ಸಂಸ್ಥೆಯವರು ಮನವಿಯನ್ನು ನೀಡಿರುವ ಬಗ್ಗೆ ಅಧ್ಯಕ್ಷರು ಪ್ರಸ್ತಾಪಿಸಿದಾಗ ಇದಕ್ಕೆ ಉತ್ತರಿಸಿದ ಸದಸ್ಯ ಕೆ ಎಸ್ ಉಮ್ಮರ್ ವಾಣಿಜ್ಯ ಕಟ್ಟಡ ರಚನೆಯಾಗುವ ಸಂದರ್ಭದಲ್ಲಿ ಅಲ್ಲೇ ಪಕ್ಕದಲ್ಲಿ ಬೋರುಗುಡ್ಡೆಗೆ ಗೆ ಸಂಪರ್ಕಿಸುವ ರಸ್ತೆಯನ್ನು ದುರಸ್ತಿ ಪಡಿಸಿ ಕೊಡುವ ಬಗ್ಗೆ ನಗರ ಪಂಚಾಯತ್ ಅವರಿಗೆ ಸೂಚಿಸಿತ್ತು. ಆದರೆ ಅದನ್ನು ಅವರು ಮಾಡಲಿಲ್ಲ. ಅಲ್ಲಿ ರಸ್ತೆಯ ದುರಸ್ತಿ ಕಾರ್ಯ ಮಾಡಿದರೆ ಎಲ್ಲದಕ್ಕೂ ವ್ಯವಸ್ಥೆ ಆಗುತ್ತದೆ
ಮೊದಲು ಅದನ್ನು ಮಾಡಿಕೊಡಲಿ ನಂತರ ಅವರು ನೀಡಿರುವ ಮನವಿಯ ಬಗ್ಗೆ ಚಿಂತಿಸೋಣ ಎಂದು ಹೇಳಿದರು.
ಈ ಮಾತಿಗೆ ಸಹ ಮತ ತೋರಿದ ನಗರ ಪಂಚಾಯತ್ ಸದಸ್ಯರುಗಳಾದ ಧೀರಕ್ರಾಸ್ತಾ, ವೆಂಕಪ್ಪಗೌಡರು ಏಕಾಏಕಿ ಹೂವಿನ ಅಂಗಡಿಗಳನ್ನು ಸ್ಥಳಾಂತರಿಸುವ ವಿಷಯ ಸರಿಯಲ್ಲ. ಆ ರೀತಿ ಮಾಡಿದರೆ ಹೂವಿನ ವ್ಯಾಪಾರಿಗಳಿಗೂ ಮತ್ತು ಪಂಚಾಯತ್ ಗೂ ತುಂಬಾ ನಷ್ಟ ಉಂಟಾಗುತ್ತದೆ. ಆದ್ದರಿಂದ ಅಧ್ಯಕ್ಷರು ಇದರ ಬಗ್ಗೆ ಗಂಭೀರವಾಗಿ ಪರಿಗಣಿಸಿಕೊಳ್ಳಬೇಕು ಎಂದು ಹೇಳಿದರು.

ನಗರ ಪಂಚಾಯತಿ ಸಭೆಗೆ ಶಾಸಕರು ಮತ್ತು ಸಂಸದರು ಇಂದಿನವರೆಗೆ ಬರಲೇ ಇಲ್ಲ :  ಕೆ ಎಸ್ ಉಮ್ಮರ್

ಪ್ರತಿ ಬಾರಿ ನಗರ ಪಂಚಾಯತಿ ಸಾಮಾನ್ಯ ಸಭೆಯ ನೋಟಿಸಿನಲ್ಲಿ ಪ್ರತಿಯನ್ನು ಶಾಸಕರಿಗೆ ಮತ್ತು ಮಂಗಳೂರು ಲೋಕಸಭಾ ಕ್ಷೇತ್ರ ಸಂಸದರಿಗೆ ಗೌರವಪೂರ್ವಕವಾಗಿ ಸಲ್ಲಿಸುತ್ತೇವೆ ಎಂದು ಬರೆದಿರುತ್ತದೆ, ಆದರೆ ನಾನು ಕಳೆದ ಏಳು ವರ್ಷಗಳಿಂದ ನಗರ ಪಂಚಾಯತಿ ಸಭೆಯಲ್ಲಿ ಭಾಗವಹಿಸುತ್ತಿದ್ದೇನೆ, ಆದರೆ ಇಂದಿನವರೆಗೆ ಯಾವುದೇ ಸಭೆಗಳಿಗೆ ನಮ್ಮ ಶಾಸಕರು, ಇದೀಗ ಸಚಿವರಾಗಿದ್ದಾರೆ ಮತ್ತು ಸಂಸದರು ಬರಲೇ ಇಲ್ಲ.
ಇದು ಇಡೀ ಕರ್ನಾಟಕಕ್ಕೆ ಸಂಬಂಧಿಸಿದಂತೆ ಸುಳ್ಯದಲ್ಲಿ ಮಾತ್ರ ಇದಾಗುತ್ತಿದೆ.
ಪಕ್ಕದ ಕೊಡಗು ಜಿಲ್ಲೆಯ ಮಡಿಕೇರಿ ನಗರ ಪಂಚಾಯತಿನಲ್ಲಿ 30 ಕೋಟಿ ರೂಪಾಯಿ ನಗರ ಅಭಿವೃದ್ಧಿಗೆ ಬಂದಿರುತ್ತದೆ ಎಂಬ ವಿಷಯ ಕೇಳಿದಾಗ ನನಗೆ ಅಚ್ಚರಿಯಾಗಿದೆ. ನಮ್ಮ ಸುಳ್ಯದಲ್ಲಿಯೂ ಕೂಡ ನಮ್ಮ ಶಾಸಕರು ಪಂಚಾಯತಿ ಸಭೆಗೆ ಬಂದರೆ ನಗರದಲ್ಲಿ ಉಂಟಾಗಿರುವ ಎಲ್ಲಾ ಮೂಲಭೂತ ಸಮಸ್ಯೆಗಳ ಬಗ್ಗೆ ಅವರಿಗೆ ತಿಳಿಯುತ್ತದೆ. ಅದರಿಂದ ಅವರಿಗೆ ಪರಿಹಾರ ತರಲು ಸಾಧ್ಯವಾಗುತ್ತದೆ. ಈ ಹಿನ್ನಲೆಯಲ್ಲಿ ನಗರವು ತನ್ನಷ್ಟಕ್ಕೆ ಅಭಿವೃದ್ಧಿಗೊಳ್ಳುತ್ತದೆ ಆದ್ದರಿಂದ ಮುಂದಿನ ಸಭೆಗೆ ನಮ್ಮ ಶಾಸಕರು ಬರುವಂತೆ ಮಾಡಬೇಕೆಂದು ಅವರು ಅಧ್ಯಕ್ಷರ ಬಳಿ ಹೇಳಿದರು.

ಸುಳ್ಯ ತಾಲೂಕು ಪತ್ರಕರ್ತರ ಪ್ರೆಸ್ ಕ್ಲಬ್ ಕಟ್ಟಡ ನಿರ್ಮಾಣಕ್ಕೆ, ಮತ್ತು ಎಂ ಬಿ ಫೌಂಡೇಶನ್ ದಿವ್ಯಂಗ ಚೇತನ ಮಕ್ಕಳ ಕ್ಷೇಮಾಭಿವೃದ್ಧಿ ಕಾರ್ಯಕ್ರಮಗಳಿಗೆ ವಿಕಲಚೇತನರ ಕಲ್ಯಾಣ ನಿಧಿಯಿಂದ ಅನುದಾನ ಒದಗಿಸಿಕೊಡುವ ಬಗ್ಗೆ ಬಂದ ಮನವಿಯ ಬಗ್ಗೆ ಚರ್ಚಿಸಿ ಎಲ್ಲಾ ಸದಸ್ಯರ ಅನುಮತಿ ಮೇರೆಗೆ ಎರಡು ಸಂಸ್ಥೆಗಳಿಗೆ ಅನುದಾನ ನೀಡುವ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು.

ನಗರದಲ್ಲಿರುವ ಕೆಲವು ಪ್ರಯಾಣಿಕರ ತಂಗುದಾಣಗಳಲ್ಲಿ ಕೆಲವರು ಕುಳಿತು ಪಾನ್ ಪರಾಗ್, ಗುಟ್ಕಾ ಮುಂತಾದವುಗಳಸೇವನೆ ಮಾಡಿ ಅಲ್ಲಿ ಕಸಗಳನ್ನು ಹಾಕಿ ಪರಿಸರ ಅಸ್ವಚ್ಚತೆ ಮಾಡುತ್ತಿದ್ದು ಅಂಥವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಸದಸ್ಯ ರಾಧಾಕೃಷ್ಣ ಬೂಡು ಹೇಳಿದರು. ಸದಸ್ಯೆ ಶಿಲ್ಪ ಸುದೀಪ್ ಧ್ವನಿಗೂಡಿಸಿದರು.
*ಮತ್ತೆ ಕಸ ವಿಲೇವಾರಿಯ ಬಗ್ಗೆ ನಡೆದ ದೀರ್ಘ ಚರ್ಚೆ*
ಇಂದಿನ ಸಭೆಯ ಅಜೆಂಡಾದಲ್ಲಿ ನಗರ ಪಂಚಾಯತ್ ಆವರಣದಲ್ಲಿ ಶೇಖರಣ ಗೊಂಡಿರುವ ಒಣ ಕಸವನ್ನು ಸಾಗಿಸಲು ಈಗಾಗಲೇ ಅಂದಾಜು 200 ಟನ್ ಗಳಿಗೆ ಟೆಂಡರು ಕರೆದು ಕಾರ್ಯಾದೇಶ ನೀಡಲಾಗಿದೆ. ಒಣ ಕಸ ಪ್ರಮಾಣ 210 ಟನ್ ನಷ್ಟು ಈಗಾಗಲೇ ಸಾಗಿಸಲಾಗಿರುತ್ತದೆ. ಇದೀಗ ಪಂಚಾಯತ್ ಆವರಣದಲ್ಲಿ ಇನ್ನೂ ಕೂಡ ಅಂದಾಜು 800 ಟನ್ ನಷ್ಟು ಒಣ ಕಸ ಇರುವುದರಿಂದ ಇದರ ವಿಲೇವಾರಿ ಮಾಡುವ ಕುರಿತು ಚರ್ಚೆ ನಡೆಯಬೇಕಾಗಿದೆ ಎಂದು ವಿಷಯ ಪಸ್ತಾಪವಾಹಿತು.

ಈ ವೇಳೆ ಕಳೆದ ದಿನಗಳಲ್ಲಿ ನಗರ ಪಂಚಾಯತಿ ಸಭೆಗಳಲ್ಲಿ ನಿರ್ಣಯ ಕೈಗೊಂಡಿದ್ದ ಕಸದ ಲೆಕ್ಕಪತ್ರವನ್ನು, ಮತ್ತು ಈಗಾಗಲೇ ವಿಲೇವಾರಿ ಮಾಡಿರುವ ಲೆಕ್ಕಪತ್ರವನ್ನು ದಾಖಲೆ ಸಮೇತ ಸಭೆಗೆ ಮಾಹಿತಿ ನೀಡಿದ ವೆಂಕಪ್ಪಗೌಡರು ಇದು ಯಾವ ರೀತಿಯ ಲೆಕ್ಕ ಎಂದು ಪ್ರಶ್ನೆ ಕೇಳಿದರು.
ನೀವು ಹೇಳಿದಾಗೆ ಇದಕ್ಕೆ ಮೊದಲು ಕಸವನ್ನು ಲೆಕ್ಕಾಚಾರ ಮಾಡಿದ ಇಂಜಿನಿಯರ್ಗಳು 215 ಟನ್ ಕಸ ನಗರ ಪಂಚಾಯತ್ ಆವರಣದಲ್ಲಿ ಶೇಖರಣೆ ಗೊಂಡಿದೆ ಎಂದು ಹೇಳಿದ್ದೀರಿ.
ಅದರಲ್ಲಿ 200 ಟನ್ ಈಗಾಗಲೇ ಗುತ್ತಿಗೆದಾರರು ಅದನ್ನು ಕೊಂಡು ಹೋಗಿದ್ದಾರೆ. ಮತ್ತೆ 800 ಟನ್ ಇದೆ ಎಂದು ಈಗ ಹೇಳುತ್ತೀರಿ, ಈ 800 ಟನ್ ಕಸದ ಲೆಕ್ಕವನ್ನು ಕೊಟ್ಟ ಇಂಜಿನಿಯರ್ ಯಾರು?
ಹಾಗಾದರೆ ಈಗ ಲೆಕ್ಕ ಕೊಟ್ಟ ಇಂಜಿನಿಯರ್ ಯಾವ ಶಾಲೆಯಲ್ಲಿ ಕಲಿತವರು ಎಂದು ಲೇವಡಿ ಮಾಡಿದರು.
ಈ ವಿಷಯ ಬಹಳ ಗಂಭೀರವಾದ ಕಾರಣ ಇದನ್ನು ಲಘುವಾಗಿ ಪರಿಗಣಿಸಬಾರದು.
ಕಸ ವಿಲೇವಾರಿ ಮಾಡುವ ಸಂದರ್ಭ ಅದರ ತೂಕವನ್ನು ಇಲ್ಲೇ ಸ್ಥಳೀಯವಾಗಿ ಇರುವ ತೂಕ ಕೇಂದ್ರದಲ್ಲಿ ಮಾಡುವುದನ್ನು ಬಿಟ್ಟು ಮೈಸೂರು,ಹುಣಸೂರು ಭಾಗದಲ್ಲಿ ಮಾಡಿದರೆ ಅದನ್ನು ಅಲ್ಲಿಗೆ ಹೋಗಿ ನೋಡಿದವರು ಯಾರು? ಅದರ ದಾಖಲೆಯನ್ನು ಸಭೆಗೆ ನೀಡಿ ಎಂದು ಅವರು ಹೇಳಿದರು.

ಈ ವೇಳೆ ನಗರ ಪಂಚಾಯತಿ ಮುಖ್ಯ ಅಧಿಕಾರಿ ಸುಧಾಕರ ಎಂ ಎಚ್ ಉತ್ತರ ನೀಡಿ ಇದರ ಬಗ್ಗೆ ಮೊದಲು ನೀಡಿರುವಂತಹ ಶೇಖರಣೆ ಗೊಂಡ ಕಸದ ಪ್ರಮಾಣದ ಲೆಕ್ಕ ತಪ್ಪಾಗಿದೆ. ಇಲ್ಲಿಂದ ವಿಲೇವಾರಿಗೊಂಡ ಕಸ ದ ಎಲ್ಲಾ ಲೆಕ್ಕಪತ್ರಗಳು ಸರಿಯಾಗಿದೆ. ಇದರಲ್ಲಿ ಯಾವುದೇ ಲೋಪ ದೋಷ ಸಂಭವಿಸಿಲ್ಲ.
ಇದರ ಬಗ್ಗೆ ನಮ್ಮ ಕಚೇರಿಯಲ್ಲಿ ಸಂಬಂಧಪಟ್ಟ ವರ ಬಳಿ ಇರುವ ಎಲ್ಲಾ ದಾಖಲೆಗಳನ್ನು ಮರು ಪರಿಶೀಲಿಸಿ ಇದಕ್ಕಾಗಿ ಒಂದು ಪ್ರತ್ಯೇಕ ಸಭೆಯನ್ನು ಮಾಡಿ ಕಸದ ಸಮಸ್ಯೆಯನ್ನು ಪರಿಹರಿಸುವ ಬಗ್ಗೆ ಚರ್ಚಿಸೋಣ ಎಂದು ಹೇಳಿದರು. ಇದಕ್ಕೆ ನಗರ ಪಂಚಾಯತ್ ಅಧ್ಯಕ್ಷರು ಧ್ವನಿಗೂಡಿಸಿದರು.

ನಂತರ ಸಭೆಯಲ್ಲಿ ನಗರ ವ್ಯಾಪ್ತಿಯಲ್ಲಿರುವ ಅಪಾಯಕಾರಿ ಮರಗಳ ತೆರವಿನ ಬಗ್ಗೆ, ಅರಣ್ಯ ಇಲಾಖೆ ಯ ಗಮನಕ್ಕೆ ತಂದು ತೆರವುಗೊಳಿಸುವ ಮರಗಳನ್ನು ನಗರ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಸ್ಮಶಾನಗಳಿಗೆ ನೀಡುವ ಬಗ್ಗೆ,
ಜಯನಗರ ಹಿಂದೂ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆಗಳಿಗೆ 3 ಸಾವಿರ ರೂ ನಿಗದಿಪಡಿಸಿ, ಅಂತ್ಯಕ್ರಿಯೆ ಕಾರ್ಯಗಳಿಗೆ ಒಬ್ಬರನ್ನು ಕೆಲಸಕ್ಕೆ ನೇಮಿಸುವ ಬಗ್ಗೆ ಚರ್ಚೆಗಳು ನಡೆಯಿತು.
ಕಲ್ಲು ಮುಟ್ಲು ನೀರು ಸರಬರಾಜು ಘಟಕದಲ್ಲಿ ತುರ್ತಾಗಿ ಆಗಬೇಕಾಗಿರುವ ಕಾಮಗಾರಿಗಳ ಕುರಿತು, ಪೌರಕಾರ್ಮಿಕರ ಎರಡು ಹುದ್ದೆಗಳ ನೇಮಕಾತಿ ಮತ್ತು ಇತ್ತೀಚೆಗೆ ಮರಣ ಹೊಂದಿದ ಓರ್ವ ಕಾರ್ಮಿಕ ಹುದ್ದೆಯ ನೇಮಕಾತಿಯ ಕುರಿತು ನಿರ್ಣಯ ಕೈಗೊಳ್ಳಲಾಯಿತು.

ಕುರಂಜಿಭಾಗಿನಲ್ಲಿರುವ ಹೊರಾಂಗಣದ ಅಭಿವೃದ್ಧಿ ಮತ್ತು ನಿರ್ವಹಣೆಗೆ ನೀಡುವ ಕುರಿತು ಅಜೆಂಡಾದಲ್ಲಿ ವಿಷಯ ಪ್ರಸ್ತಾಪವಾದಾಗ ಸದಸ್ಯ ಶರೀಫ್ ಕಂಠಿ ಮಾತಾಡಿ ಹೊರಾಂಗಣ ಕ್ರೀಡಾಂಗಣವನ್ನು ಸಾರ್ವಜನಿಕರಿಗೆ ಅನುಕೂಲವಾಗುವ ರೀತಿಯಲ್ಲಿ ಗೇಮ್ ಸಿಟಿ ಮಾಡುವ ಯೋಜನೆ ರೂಪಿಸಿ ಸುಂದರ ಕ್ರೀಡಾ ತಾಣವಾಗಿ ಮಾಡಬೇಕೆಂದು ಸಲಹೆ ನೀಡಿದರು.

ನಂತರ ಸಭೆಯ ಕೊನೆಯಲ್ಲಿ ಸುಳ್ಯ ನಗರ ಪಂಚಾಯತ್ ಇಂಜಿನಿಯರ್ ಆಗಿ ಸೇವೆ ಸಲ್ಲಿಸಿ ಇದೀಗ ಮೈಸೂರಿಗೆ ವರ್ಗಾವಣೆಗೊಂಡಿರುವ ಶಿವಕುಮಾರ್ ರವರನ್ನು ಪಂಚಾಯತ್ ವತಿಯಿಂದ ಬೀಳ್ಕೊಡುಗೆ ಸಮಾರಂಭ ನಡೆಸಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ವೇದಿಕೆಯಲ್ಲಿ ನಗರ ಪಂಚಾಯತ್ ಉಪಾಧ್ಯಕ್ಷೆ ಸರೋಜಿನಿ ಪೆಲ್ತಡ್ಕ, ಸ್ಥಾಯಿ ಸಮಿತಿ ಅಧ್ಯಕ್ಷೆ ಶೀಲಾ ಕುರುಂಜಿ ಉಪಸ್ಥಿತರಿದ್ದರು.
ಸಭೆಯಲ್ಲಿ ನಗರ ಪಂಚಾಯತ್ ಸದಸ್ಯರುಗಳಾದ ಬಾಲಕೃಷ್ಣ ಭಟ್ ಕೊಡಂಕೇರಿ, ಪೂಜಿತಾ ಶಿವಪ್ರಸಾದ್, ಶಶಿಕಲಾ ನೀರಬಿದ್ರೆ, ಕಿಶೋರಿ ಸೆಟ್, ಸುಶೀಲ ಜಿನ್ನಪ್ಪ, ಪ್ರವಿತಾ, ನಾರಾಯಣ ಶಾಂತಿನಗರ, ಸುಧಾಕರ, ಬಾಲಕೃಷ್ಣರೈ, ಬುದ್ಧ ನ್ಯಾಕ್, ಯತೀಶ್ ಬೀರಮಂಗಲ, ರಿಯಾಜ್ ಕಟ್ಟೆಕಾರ್ ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.