ಇತ್ತೀಚೆಗೆ ಆಳ್ವಾಸ್ ಕಾಲೇಜ್ ಮೂಡುಬಿದ್ರೆಯಲ್ಲಿ ನಡೆದ ಮಂಗಳೂರು ವಿಶ್ವವಿದ್ಯಾಲಯ ಮಟ್ಟದ ಅಂತರ ಕಾಲೇಜು ಭಾರ ಎತ್ತುವ ಸ್ಪರ್ಧೆಯಲ್ಲಿ ನೆಹರು ಮೆಮೋರಿಯಲ್ ಕಾಲೇಜು ಸುಳ್ಯ ಇದರ ವಿದ್ಯಾರ್ಥಿಗಳಾದ ಶಶಾಂಕ್ ಪಿ ಎನ್, 56 ಕೆಜಿ ವಿಭಾಗ ಮತ್ತು ಲಿಕಿನ್ ಪಿ.ಎ. 81 ಕೆಜಿ ವಿಭಾಗದಲ್ಲಿ ಇವರು ತಮ್ಮ ಶ್ರೇಷ್ಠ ಪ್ರದರ್ಶನದೊಂದಿಗೆ ಕಂಚಿನ ಪದಕವನ್ನು ಗೆದ್ದುಕೊಂಡರು. ಮಾಜಿ ರಾಷ್ಟ್ರೀಯ ವೇಟ್ ಲಿಫ್ಟಿಂಗ್ ಚಾಂಪಿಯನ್ ಚಾಂಪಿಯನ್ ರಮೇಶ್ ಮೆಮೋರಿಯಲ್ ಕಾಲೇಜಿನ ತಂಡಕ್ಕೆ ತರಬೇತಿಯನ್ನು ನೀಡುತ್ತಿದ್ದಾರೆ.