ಪ್ರವೀಣ್ ನೆಟ್ಟಾರು ಹತ್ಯೆ ಹಿನ್ನಲೆಯಲ್ಲಿ ಐವತ್ತೊಕ್ಲು 3 ವಾರ್ಡ್ ಗಳ ಬಿಜೆಪಿ ಬೂತ್ ಸಮಿತಿಯ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ತಮ್ಮ ಜವಾಬ್ದಾರಿ ಸ್ಥಾನಗಳಿಗೆ ರಾಜೀನಾಮೆ ನೀಡಿದ ಘಟನೆ ಪಂಜದಿಂದ ವರದಿಯಾಗಿದೆ.
ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹಂತಕರ ಮೇಲೆ ಕಾನೂನು ರೀತಿಯಲ್ಲಿ ಕಠಿಣ ಶಿಕ್ಷೆ ಆಗುವ ತನಕ ತಮ್ಮ ಬೂತ್ ಗೆ ಜವಾಬ್ದಾರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಉಳಿಯುವುದಾಗಿ ಐವತ್ತೊಕ್ಲು 1 ನೇ ವಾರ್ಡ್ ಬಿಜೆಪಿ ಬೂತ್ ಸಮಿತಿ ಅಧ್ಯಕ್ಷ ಚಂದ್ರಶೇಖರ ಮೇಲ್ಪಾಡಿ, ಕಾರ್ಯದರ್ಶಿ ನಿರಂಜನ್ ತೋಟ,
ಐವತ್ತೊಕ್ಲು 2 ನೇ ವಾರ್ಡ್ ಬಿಜೆಪಿ ಬೂತ್ ಸಮಿತಿ ಅಧ್ಯಕ್ಷ ಮೋನಪ್ಪ ಕೆಬ್ಲಾಡಿ, ಕಾರ್ಯದರ್ಶಿ ಕಿರಣ್ ನೆಕ್ಕಿಲ,ಐವತ್ತೊಕ್ಲು ,3ನೇ ವಾರ್ಡ್ ಬಿಜೆಪಿ ಬೂತ್ ಸಮಿತಿ ಅಧ್ಯಕ್ಷ ಚಂದ್ರಶೇಖರ ದೇರಾಜೆ, ಕಾರ್ಯದರ್ಶಿ ಕವನ್ ಪಲ್ಲೋಡಿ ರಾಜೀನಾಮೆ ನೀಡಿದ್ದಾರೆ.