Breaking News

ಆಲೆಟ್ಟಿ: ಮನೆ ಬಿಟ್ಟು ಬಂದು ಬಸ್ ತಂಗುದಾಣದಲ್ಲಿ ದಿನ ಕಳೆಯುತ್ತಿದ್ದ ವೃದ್ಧರೊಬ್ಬರನ್ನು ಮತ್ತೆ ಮನೆಗೆ ಸೇರಿಸಿ ಮಾನವೀಯತೆ ಮೆರೆದ ಪಂಚಾಯತ್ ಉಪಾಧ್ಯಕ್ಷ- ಕಣಕ್ಕೂರು

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

 

ಮನೆಯವರ ಜತೆ ಕಲಹ ಉಂಟಾಗಿ ಅಸಮಾಧಾನಗೊಂಡು ಮನೆ ಬಿಟ್ಟು ಬಂದು ತಿರುಗಾಡಿ ಜೀವನ ನಡೆಸುತ್ತಿದ್ದ ವ್ಯಕ್ತಿ ಯೊಬ್ಬರನ್ನು ಮತ್ತೆ ಅವರ ಸಂಸಾರದೊಂದಿಗೆ ಒಟ್ಟು ಸೇರಿಸಿ ಆಸರೆಯಾಗುವಂತೆ ಪ್ರಯತ್ನಿಸಿದ ಜನಪ್ರತಿನಿಧಿ ಸ್ಥಳೀಯ ಪಂಚಾಯತ್ ಉಪಾಧ್ಯಕ್ಷರೊಬ್ಬರ ಮುತುವರ್ಜಿ ಕಾರ್ಯ ಮಾದರಿಯಾಗಿದೆ.


ಮೂಲತಃ ಪುತ್ತೂರು ತಾಲೂಕಿನ ಮಿತ್ತೂರು ಎಂಬಲ್ಲಿ ವಾಸಿಸುತ್ತಿದ್ದ ಮೋನಪ್ಪ ನಾಯ್ಕ ಎಂಬವರು ಕಳೆದ 30 ವರ್ಷಗಳ ಹಿಂದೆ ಮನೆಯವರ ಜತೆ ಕಲಹವುಂಟಾಗಿ ಕೋಪಿಸಿಕೊಂಡು ಮನೆ ಬಿಟ್ಟು ಬಂದಿದ್ದರು.
ಮನೆ ಬಿಟ್ಟು ಬಂದಿರುವ ಮೋನಪ್ಪ ರವರು ನೇರವಾಗಿ ಸುಳ್ಯ ಬಸ್ ಏರಿದ್ದರು. ಸುಳ್ಯ ಕ್ಕೆ ಬಂದ ಅವರು ಆಲೆಟ್ಟಿ ಗ್ರಾಮದ ಕೋಲ್ಚಾರಿಗೆ ಬಂದು ಸುಮಾರು 15 ವರ್ಷಗಳಿಂದ ಕೂಲಿ ಕೆಲಸ ಮಾಡುತ್ತಿದ್ದರು. ನಂತರ ಪೆರಾಜೆಯ ಕುಂದಲ್ಪಾಡಿ ಯಲ್ಲಿ ಹಲವಾರು ವರ್ಷ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿತ್ತು. ಇದೀಗ ಮತ್ತೆ 2 ತಿಂಗಳ ಹಿಂದೆ ಮೋನಪ್ಪ ನಾಯ್ಕರು ಕೋಲ್ಚಾರಿಗೆ ಬಂದಿದ್ದರು. ರಾತ್ರಿ ಸಮಯದಲ್ಲಿ ಅಂಗಡಿ ಮುಂದೆ ಅಥವಾ ಬಸ್ಸು ತಂಗುದಾಣದಲ್ಲಿ ಮಲಗಿಕೊಂಡಿರುತ್ತಿದ್ದರು.
ಹೀಗೆ ದಿನ ಕಳೆಯುತ್ತಿದ ಮೋನಪ್ಪ ನಾಯ್ಕರವರಲ್ಲಿ ಮಾತನಾಡಿಸಿದ ಸ್ಥಳೀಯ ಪಂಚಾಯತ್ ಉಪಾಧ್ಯಕ್ಷ‌ ದಿನೇಶ್ ಕಣಕ್ಕೂರು ರವರು ಅವರ ಕುಟುಂಬದ ವಿವರ ಪಡೆದು ಅವರ ಮಕ್ಕಳನ್ನು ಹಾಗೂ ಸಂಬಂಧಿಕರನ್ನು ಸಂಪರ್ಕಿಸುವಲ್ಲಿ ಯಶಸ್ವಿಯಾದರು. ಅವರಲ್ಲಿ ವಿಷಯ ತಿಳಿಸಿದ ಮೇರೆಗೆ ಸ್ಪಂದಿಸಿದ ಅವರ ಕುಟುಂಬದವರನ್ನು ಕೋಲ್ಚಾರಿಗೆ ಬರುವಂತೆ ತಿಳಿಸಲಾಯಿತು.ಅದರಂತೆ ಮೋನಪ್ಪ ನಾಯ್ಕರ ಪುತ್ರರಾದ ಬಾಲಕೃಷ್ಣ ಮತ್ತು ಲೋಕೇಶ್ ರವರು ಸಂಬಂಧಿಗಳೊಂದಿಗೆ ಕೋಲ್ಚಾರಿಗೆ ಬಂದು ತಂದೆ ಮೋನಪ್ಪ ನಾಯ್ಕರನ್ನು ಜು.30 ರಂದು ಮತ್ತೆ ಮಿತ್ತೂರಿನ‌ ಮನೆಗೆ ಕರೆದುಕೊಂಡು ಹೋಗಿರುತ್ತಾರೆ. ಕ್ಷುಲ್ಲಕ ‌ಕಾರಣಕ್ಕಾಗಿ ಮನೆ ಮಂದಿಯನ್ನು ಬಿಟ್ಟು ಬಂದ ಬಡಪಾಯಿ ಜೀವಕ್ಕೆ ತನ್ನ ವೃದ್ಧಾಪ್ಯದ ಇಳಿ ವಯಸ್ಸಿನಲ್ಲಿ ಮತ್ತೆ ಆಸರೆ ಸಿಗುವಂತೆ ಮಾಡಲು ಪ್ರಯತ್ನಿಸಿದ ಜನಪ್ರತಿನಿಧಿ ದಿನೇಶ್ ಕಣಕ್ಕೂರು ರವರ ಕಾರ್ಯ ನಿಜಕ್ಕೂ ಶ್ಲಾಘನೀಯವಾಗಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.