ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯ ಸುಳ್ಯ ಇಲ್ಲಿ ಅಡುಗೆಯವರಾಗಿ ಕೆಲಸ ನಿರ್ವಹಿಸುತ್ತಿದ್ದ ಈಶ್ವರ ನಾಯ್ಕರವರು ತಮ್ಮ ೩೨ ವರ್ಷಗಳ ಸುದೀರ್ಘ ಸೇವೆಯಿಂದ ಜು.೩೦ರಂದು ನಿವೃತ್ತಿ ಹೊಂದಿದ್ದಾರೆ.
೧೯೯೧ ನವೆಂಬರ್ ೨೦ ರಂದು ಸೇವೆಗೆ ಸೇರಿ ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯ ಚೆಟ್ಟಳ್ಳಿ ಇಲ್ಲಿ ಸಹಾಯಕ ಅಡುಗೆಯವರಾಗಿ ಉದ್ಯೋಗ ಪ್ರಾರಂಭಿಸಿದರು. ಬಳಿಕ ೧೯೯೪ ರಲ್ಲಿ ಕೊಡಗು ಸಂಪಾಜೆ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ ಇಲ್ಲಿ ಕರ್ತವ್ಯ ನಿರ್ವಹಿಸಿ, ೨೦೦೦ ಇಸವಿಯಲ್ಲಿ ಪುತ್ತೂರು ತಾಲೂಕು ಉಪ್ಪಿನಂಗಡಿ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಸೇವೆ ಸಲ್ಲಿಸಿದ ಬಳಿಕ ೨೦೦೮ರಲ್ಲಿ ಸುಳ್ಯಕ್ಕೆ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ಮುಖ್ಯ ಅಡುಗೆಯವರಾಗಿ ವರ್ಗಾವಣೆಗೊಂಡರು. ಸುಮಾರು ೩೨ ವರ್ಷಗಳ ಸುದೀರ್ಘ ಸೇವೆಯಿಂದ ಜು.೩೦ರಂದು ನಿವೃತ್ತಿ ಹೊಂದಿದ್ದಾರೆ.
ಇವರು ಕಳಂಜ ಗ್ರಾಮದ ತಂಟೆಪ್ಪಾಡಿ ಮನೆಯ ನಾರ್ಣು ನಾಯ್ಕ ಹಾಗೂ ಲಕ್ಷ್ಮಿ ದಂಪತಿಯ ಪುತ್ರ. ಪತ್ನಿ ಗುಲಾಬಿ ಗೃಹಿಣಿಯಾಗಿದ್ದು, ಪುತ್ರರಾದ ಹರಿಶ್ಚಂದ್ರ ಕೃಷಿಯಲ್ಲಿ ತೊಡಗಿದ್ದು, ಹೇಮಂತ್ ಕುಮಾರ್ ಕ್ರೈನ್ ಉದ್ಯಮ ನಡೆಸುತ್ತಿದ್ದಾರೆ, ಪುತ್ರಿ ಲತಾ ಕುಮಾರಿ ಕೇನ್ಯದ ಕೇದಾರ ಪ್ರಸನ್ನ ವಿವಾಹವಾಗಿದ್ದು, ಎಂಎಸ್ಸಿ ಪದವಿ ಪಡೆದು ಬೆಳ್ಳಾರೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ಉದ್ಯೋಗಿಯಾಗಿದ್ದಾರೆ.
ಇಲಾಖೆ ವತಿಯಿಂದ ಸನ್ಮಾನ – ಬೀಳ್ಕೊಡುಗೆ
ನಿವೃತ್ತಿಗೊಂಡ ಟಿ.ಈಶ್ವರ ನಾಯ್ಕರವರಿಗೆ ಇಲಾಖೆ ವತಿಯಿಂದ ಬೀಳ್ಕೊಡುಗೆ ಕಾರ್ಯಕ್ರಮವು ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯ ಸುಳ್ಯ ಇಲ್ಲಿ ಜು.30 ರಂದು ನಡೆಯಿತು.
ತಾಲೂಕು ವಿದ್ಯಾರ್ಥಿ ನಿಲಯಗಳ ಮೇಲ್ವಿಚಾರಕರಾದ ವಿಜಯ್ ಎಂ.ಪಿ. , ದೀಪಿಕಾ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಶುಭ ಹಾಗೂ ಸಿಬ್ಬಂದಿ ವರ್ಗ , ವಿದ್ಯಾರ್ಥಿಗಳು ಉಪಸ್ಥಿತರಿದ್ದರು.