ದುಷ್ಕರ್ಮಿಗಳಿಂದ ಭೀಕರವಾಗಿ ಹತ್ಯೆಗೀಡಾದ ಬಿಜೆಪಿ ಯುವಮೋರ್ಚಾ ಸದಸ್ಯರಾಗಿದ್ದ ಪ್ರವೀಣ್ ನೆಟ್ಟಾರು ಹಂತಕರು ಕೇರಳ ಮೂಲದವರೆಂಬ ಸಂಶಯ ಎಲ್ಲರಲ್ಲೂ ಮೂಡಿದ್ದು, ಪೊಲೀಸರು ಕರ್ನಾಟಕ – ಕೇರಳ ಗಡಿಪ್ರದೇಶವಾದ ಜಾಲ್ಸೂರಿನಲ್ಲಿ ಜು.31ರಂದು ಬೆಳಿಗ್ಗೆ ಪೊಲೀಸ್ ಪಥಸಂಚಲನ ನಡೆಸಿದರು.
ಸುಳ್ಯ ಸರ್ಕಲ್ ಇನ್ಸ್ ಪೆಕ್ಟರ್ ನವೀನಚಂದ್ರ ಜೋಗಿ ಅವರ ನೇತೃತ್ವದಲ್ಲಿ ಜಾಲ್ಸೂರು ಪೇಟೆಯಲ್ಲಿ ಪೊಲೀಸ್ ಪಥಸಂಚಲನ ನಡೆಸಲಾಯಿತು.
ಕರ್ನಾಟಕ – ಕೇರಳ ಗಡಿಪ್ರದೇಶವಾದ ಜಾಲ್ಸೂರಿನಲ್ಲಿ ಜು.30ರಂದು ಬೆಳಿಗ್ಗೆಯೇ ಪೊಲೀಸ್ ಬಸ್ಸು ಬಂದು ಸ್ಥಳದಲ್ಲಿ ನಿಂತಿದ್ದು, ಗಡಿಪ್ರದೇಶದಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.