ಸುಳ್ಯ:ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಲವು ಕಡೆ ಕ್ಲಿನಿಕ್ಗಳನ್ನು ಹೊಂದಿರುವ ಫಾತಿಮಾ ಸ್ಮೈಲ್ ಗ್ರೂಪ್ಸ್ ನವರ ನೂತನ ದಂತ ಚಿಕಿತ್ಸಾಲಯ ‘ಫಾತಿಮ ಸ್ಮೈಲ್ ಸಿಟಿ ಸುಳ್ಯ ಗಾಂಧಿನಗರ ಯೂನಿಯನ್ ಬ್ಯಾಂಕ್ ಮುಂಬಾಗ ಗ್ಲೋಬಲ್ ಟ್ರೇಡ್ ಸೆಂಟರ್ ನಲ್ಲಿ ಜು.31 ರಂದು ಶುಭಾರಂಭಗೊಂಡಿತು.
ಅತ್ಯಾಧುನಿಕ ಶೈಲಿಯ ತಂತ್ರಜ್ಞಾನ ಮತ್ತು ಉಪಕರಣಗಳೊಂದಿಗೆ ಆಧುನಿಕ ಚಿಕಿತ್ಸಾ ವ್ಯವಸ್ಥೆಯನ್ನು ಕ್ಲಿನಿಕ್ ಹೊಂದಿದೆ.
ಉಡುಪಿ ಮತ್ತು ಚಿಕ್ಕಮಗಳೂರು ಖಾಝಿ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಉಸ್ತಾದ್ ಉದ್ಘಾಟಿಸಿದರು.
ಪದ್ಮಶ್ರೀ ಪುರಸ್ಕೃತ ಗೀರಿಶ್ ಭಾರದ್ವಾಜ್, ವರ್ತಕರ ಸಂಘದ ಅಧ್ಯಕ್ಷ ಪಿ.ಬಿ.ಸುಧಾಕರ ರೈ, ನಗರ ಪಂಚಾಯತ್ ಮಾಜಿ ಅಧ್ಯಕ್ಷರಾದ ಎಂ. ವೆಂಕಪ್ಪ ಗೌಡ,ಎಸ್ ಸಂಶುದ್ದೀನ್,ಕೆ ಪಿ ಸಿ ಸಿ ಕಾರ್ಯದರ್ಶಿ ಧನಂಜಯ ಅಡ್ಪಂಗಾಯ, ಎಪಿಎಂಸಿ ಮಾಜಿ ನಿರ್ದೇಶಕ ಆದಂ ಹಾಜಿ ಕಮ್ಮಾಡಿ, ನಗರ ಪಂಚಾಯತ್ ಸದಸ್ಯರಾದ ಕೆ.ಎಸ್.ಉಮ್ಮರ್, ಶರೀಫ್ ಕಂಠಿ, ರಿಯಾಜ್ ಕಟ್ಟೆಕ್ಕಾರ್,ಕೆ ಬಿ ಇಬ್ರಾಹಿಂ,ಸಂಪಾಜೆ ಗ್ರಾಮ ಪಂಚಾಯತ್ ಸದಸ್ಯ ಶೌವಾದ್ ಗೂನಡ್ಕ,ಅನ್ಸಾರಿಯಾ ಅಧ್ಯಕ್ಷ ಹಾಜಿ ಅಬ್ದುಲ್ ಮಜೀದ್, ಅನ್ಸಾರ್ ಅಧ್ಯಕ್ಷ ಹಾಜಿ ಅಬ್ದುಲ್ ಶುಕೂರ್, ಪಿಡಬ್ಲ್ಯೂಡಿ ಗುತ್ತಿಗೆದಾರರ ಸಂಘದ ಸುಳ್ಯ ನಗರಧ್ಯಾಕ್ಷ ಅಬ್ದುಲ್ ಲತೀಫ್ ಎಂ ಕೆ,ಇಬ್ರಾಹಿಂ ಹಾಜಿ ಕತ್ತಾರ್, ಅಬ್ದುಲ್ ಖಾದರ್ ಪಟೇಲ್,ಡಾ ಬದ್ರುದ್ದೀನ್,ಇಬ್ರಾಹಿಂ ಹಾಜಿ ದರ್ಬೆ,ಮಹಮ್ಮದ್ ಕೆಎಂಎಸ್,ಇಕ್ಬಾಲ್ ಎಲಿಮಲೆ, ಹಾಜಿ ಹಮೀದ್ ಜನತಾ,ಸುಧೀರ್ ರೈ,ಕನಕಮಜಲು ಗ್ರಾಮ ಪಂಚಾಯತ್ ಸದಸ್ಯ ಇಬ್ರಾಹಿಂ ಖಾಸೀಮ್,ಶಾಹುಲ್ ಹಮೀದ್ ಕುತ್ತಮೊಟ್ಟೆ,ಅಬ್ದುಲ್ ರಹಿಮಾನ್ ಅತೂರು,ಅಬ್ಬಾಸ್ ಸಿ ಎ,ಪಿ ಎಸ್ ಗಂಗಾಧರ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಮಾಣಿ ಉಸ್ತಾದರಿಗೆ ಮತ್ತು ಪದ್ಮಶ್ರೀ ಗೀರಿಶ್ ಭಾರದ್ವಾಜ್ ರವರನ್ನು ಸನ್ಮಾನಿಸಿ ಗೌರವಿಸಿದರು.
ದ.ಕ ಜಿಲ್ಲಾ ವಕ್ಪ್ ಬೋರ್ಡ್ ಮಾಜಿ ಸದಸ್ಯ ಕೆ.ಎಂ ಮುಸ್ತಫಾ ,ಬಶೀರ್ ಸಪ್ನಾ ಕಾರ್ಯಕ್ರಮದಲ್ಲಿ ಸಹಕರಿಸಿದರು.
ದಂತ ಚಿಕಿತ್ಸಾಲಯ ಶುಭಾರಂಭ ಪ್ರಯುಕ್ತ ಜು.31 ಉಚಿತ ದಂತ ಚಿಕಿತ್ಸೆ ಶಿಬಿರ ನಡೆಯಿತು.
ಹಲ್ಲು ಕೀಳುವುದು, ಹಲ್ಲು ತುಂಬಿಸುವುದು,ವಕ್ರದಂತ ಚಿಕಿತ್ಸೆ, ಬೇರುನಾಳ ಚಿಕಿತ್ಸೆ, ಕೃತಕ ಹಲ್ಲು ಜೋಡಣೆ, ಮಕ್ಕಳ ಹಲ್ಲಿನ ಚಿಕಿತ್ಸೆ, ಒಸಡು ಶಸ್ತ್ರಚಿಕಿತ್ಸೆ ಇತ್ಯಾದಿ ಹಲ್ಲುಗಳಿಗೆ ಸಂಬಂಧಿಸಿದ ಚಿಕಿತ್ಸೆಗಳು ಕ್ಲೀನಿಕ್ನಲ್ಲಿ ಲಭ್ಯವಿದೆ ಎಂದು ಡಾ ಶಾಫಿ.ಬಿ ತಿಳಿಸಿದ್ದಾರೆ.
ಡಾ.ಸರ್ಫರಾಜ್, ಡಾ.ಶಾಫಿ ಬಿ .ಡಾಮಹಮ್ಮದ್ ಅನಸ್,ಡಾ.ಫಾತಿಮ ಜಾಸ್ಮಿನ್ ಎಸ್,ಡಾ. ಅಶಿಶ್ ಶೆಟ್ಟಿ,ಡಾ.ಅಲ್ವೀನ್ ಆಂತೋನಿ, ತೋಟತ್ತಿಲ್,ಡಾ.ಝುನೈದ,ಡಾ.ಶಿಯಾದ್,ಇಲ್ಲಿ ಸೇವೆಗೆ ಲಭ್ಯರಿರುತ್ತಾರೆ.