ಇಲಾಖೆ, ಹಿತೈಷಿಗಳು, ಬಂಧು-ಮಿತ್ರರಿಂದ ನಂಗಾರುರಿಗೆ ಗೌರವ
ಸುಳ್ಯ ಕೃಷಿ ಇಲಾಖೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿ ಜು.೩೧ರಂದು ನಿವೃತ್ತರಾದ ಕೃಷಿ ತಾಂತ್ರಿಕ ಅಧಿಕಾರಿ ಮೋಹನ್ ನಂಗಾರುರವರು ತಮ್ಮ ಸೇವಾವಧಿಯಲ್ಲಿ ಸಹಕರಿಸಿದ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು, ಹಿತೈಷಿಗಳು, ಬಂಧು ಮಿತ್ರರಿಗೆ ಔvಣ ಕೂಟವನ್ನು ಜು.೩೦ರಂದು ಸುಳ್ಯದ ಗಿರಿದರ್ಶಿನಿ ಸಭಾಭವನದಲ್ಲಿ ನಡೆಯಿತು.
ಸಮಾರಂಭಕ್ಕೆ ಆಗಮಿಸಿದ ಗಣ್ಯರು ಹಾಗೂ ಹಿತೈಷಿಗಳು, ಬಂಧುಗಳು ಮೋಹನ್ ನಂಗಾರರಿಗೆ ಹಾರ, ಶಾಲು ಹಾಕಿ ಗೌರವಿಸಿದರು. ಕೃಷಿ ಇಲಾಖಾ ವತಿಯಿಂದ ಮೋಹನ್ ನಂಗಾರುರನ್ನು ಸನ್ಮಾನಿಸಿ ಬೀಳ್ಕೊಡುವ ಕಾರ್ಯಕ್ರಮವೂ ನಡೆಯಿತು.
ಕೃಷಿ ಇಲಾಖೆಯ ಪುತ್ತೂರು ಉಪವಿಭಾಗದ ಉಪ ನಿರ್ದೇಶಕ ಶಿವಶಂಕರ್ ಸನ್ಮಾನ ನೆರವೇರಿಸಿದರು. ಎಡಿಎ ರಂಜಿತ್ ಕುಮಾರ್, ನಿವೃತ್ತ ಎಡಿಎ ಪಾಲಿಚಂದ್ರ, ಕೃಷಿ ಅಧಿಕಾರಿ ನಾಗರಾಜ್ ಹಾಗೂ ಸಿಬ್ಬಂದಿ ವರ್ಗದವರು ಈ ಸಂದರ್ಭದಲ್ಲಿ ಇದ್ದರು.
ಸಮಾರಂಭಕ್ಕೆ ಆಗಮಿಸಿದ ನ್ಯಾಯಾಧೀಶರಾದ ಸೋಮಶೇಖರ್, ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಡಾ| ರೇಣುಕಾಪ್ರಸಾದ್ ಕೆ.ವಿ., ತಹಶೀಲ್ದಾರ್ ಕು.ಅನಿತಾಲಕ್ಷ್ಮಿ, ಇ.ಒ. ಭವಾನಿಶಂಕರ್, ಪದ್ಮಶ್ರೀ ಪುರಸ್ಕೃತ ಗಿರೀಶ್ ಭಾರದ್ವಾಜ್, ಕೃಷಿಕ ಸಮಾಜದ ಅಧ್ಯಕ್ಷ ಅಡ್ಡಂತಡ್ಕ ದೇರಣ್ಣ ಗೌಡ, ಸಿಡಿಪಿಒ ಶ್ರೀಮತಿ ರಶ್ಮಿ, ತೋಟಗಾರಿಕಾ ಅಧಿಕಾರಿ ಶ್ರೀಮತಿ ಸುಹಾನ, ಪಿಡಬ್ಲ್ಯೂಡಿ .ಇ.ಇ. ಲೋಕೇಶ್, ಸುಳ್ಯ ನಗರ ಪಂಚಾಯತ್ ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ ಸಹಿತ ಹಲವು ಮಂದಿ ಗಣ್ಯರು ಆಗಮಿಸಿ ಶುಭಹಾರೈಸಿದರು.
ಕುಕ್ಕಂದೂರು ಮುರುಗನ್ ದೇವಸ್ಥಾನದ ಸಮಿತಿಯವರು ಆಗಮಿಸಿ ಸನ್ಮಾನ ನೆರವೇರಿಸಿದರು. ಆಗಮಿಸಿದ ಎಲ್ಲರನ್ನು ಮೋಹನ್ ನಂಗಾರು, ಅವರ ಪತ್ನಿ ಶ್ರೀಮತಿ ಚಂದ್ರಕಲಾ, ಮಕ್ಕಳಾದ ಹಿತೇಶ್ ನಂಗಾರು, ಕು.ಮೇಘನಾ ನಂಗಾರು ಸ್ವಾಗತಿಸಿದರು.