ಸುಳ್ಯದ ಜ್ಯೋತಿ ಇಂಡಸ್ಟ್ರೀಸ್ ಮಾಲಕ ಹಾಗೂ ಸುಳ್ಯ ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ ನೆಲ್ಯಾಜೆ ಜಗನ್ನಾಥ ರೈ ಕನ್ನೆಜಾಲು ರವರು ಜು.19 ರಂದು ನಿಧನರಾಗಿದ್ದು ಅವರ ಉತ್ತರ ಕ್ರಿಯಾಧಿ ಸದ್ಗತಿ ಕಾರ್ಯಕ್ರಮ ಹಾಗೂ ಸಾರ್ವಜನಿಕ ಶ್ರದ್ಧಾಂಜಲಿ ಸಭೆಯು ಅಮರಶ್ರೀಭಾಗ್ ನ ಕುರುಂಜಿ ಜಾನಕಿ ವೆಂಕಟರಮಣ ಸಭಾ ಭವನದಲ್ಲಿ ನಡೆಯಿತು.
ಮೃತರ ಜೀವನಗಾಥೆಯ ಬಗ್ಗೆ ಮಾತನಾಡಿದ ಶ್ರೀಮತಿ ಮೀನಾಕ್ಷಿ ಗೌಡ ರವರು ಅವರನ್ನು ನೆನೆದು ಭಾವುಕರಾದರು. ಕುಟುಂಬಸ್ಥರ ಪರವಾಗಿ ಪ್ರವೀಣ್ ರೈ ಮತ್ತು ಸಾರ್ವಜನಿಕ ಸಂಘ ಸಂಸ್ಥೆಗಳ ಪರವಾಗಿ ಪತ್ರಕರ್ತ ಸುದ್ದಿ ಚಾನೆಲ್ ಮುಖ್ಯಸ್ಥ ದುರ್ಗಾಕುಮಾರ್ ನಾಯರ್ ಕೆರೆ ಯವರು ನುಡಿ ನಮನ ಸಲ್ಲಿಸಿದರು. ವರ್ತಕರ ಸಂಘದ ಅಧ್ಯಕ್ಷ
ಪಿ.ಬಿ.ಸುಧಾಕರ ರೈ ನೆಟ್ ಕಾಂ ರವರು ಕಾರ್ಯಕ್ರಮ ನಿರ್ವಹಿಸಿದರು. ಬಳಿಕ ಸೇರಿದ ಸಭಿಕರು ಒಂದು ನಿಮಿಷದ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ
ಮೃತರ ಪತ್ನಿ ಶ್ರೀಮತಿ ಜಯಂತಿ ಜೆ ರೈ,ಪುತ್ರ ಜೀವನ್ ರೈ, ಪುತ್ರಿ ಶ್ರೀಮತಿ ಜ್ಯೋತಿ ಜೆ. ರೈ, ಅಳಿಯ ರಂಜನ್ ಕುಮಾರ್ ರೈ, ಸೊಸೆ ಶ್ರೀಮತಿ ವಿದ್ಯಾಜೀವನ್ ರೈ, ಮತ್ತು ಮೊಮ್ಮಕ್ಕಳು, ಹಾಗೂ ಕುಟುಂಬದ ಹಿರಿಯ ಕಿರಿಯ ಸದಸ್ಯರು , ಅಪಾರ ಬಂಧು ಮಿತ್ರರು ಆಗಮಿಸಿ ಮೃತರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಶ್ರದ್ಧಾಂಜಲಿ ಕೋರಿದರು.