ಸುಳ್ಯ ಬೊಳುಬೈಲ್ ನಲ್ಲಿರುವ ಪೀಸ್ ಸ್ಕೂಲ್ ನಲ್ಲಿ ಕರಾಟೆ ತರಬೇತಿ ಹಾಗೂ ತರಗತಿ ಉದ್ಘಾಟನೆ ಕಾರ್ಯಕ್ರಮ ಪೀಸ್ ಸ್ಕೂಲ್ ವಠಾರದಲ್ಲಿ ನಡೆಯಿತು.
ಸುಳ್ಯದ ಉದ್ಯಮಿ ಸುಳ್ಯಕಾರ್ಸ್ ಅಬ್ದುಲ್ಲಾ ತರಗತಿ ಯನ್ನು ಉದ್ಘಾಟಿಸಿದರು.ದ ಕ ಜಿಲ್ಲಾ ಟಿಕೊನ್ಡೊ ಅಸೋಸಿಯೇಷನ್ ಇದರ ಕರಾಟೆ ತರಬೇತುದಾರ ಶಿಹಾಬ್ ಟಿ ವಿದ್ಯಾರ್ಥಿಗಳಿಗೆ ಕರಾಟೆಯ ಕುರಿತು ಮಾಹಿತಿ ನೀಡಿ ಅದರ ಮಹತ್ವದ ವಿವರಣೆ ನೀಡಿದರು.ಪೀಸ್ ಸ್ಕೂಲ್ ಅಧ್ಯಕ್ಷ ಕೆ ಅಬೂಭಕ್ಕರ್ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಜಾಲ್ಸೂರ್ ಗ್ರಾ.ಪಂ ಸದಸ್ಯ ಮುಜೀಬ್,ಆರ್ ಬಿ ಬಶೀರ್,ಬಿ. ಅಬ್ಬಾಸ್ ಮೊದಲಾದವರು ಉಪಸ್ಥಿತರಿದ್ದರು.
ತೌಹೀದ್ ಎಜುಕೇಶನ್ ಚಾರಿಟೇಬಲ್ ಪೌಂಢೇಶನ್ ಇದರ ಉಪಾಧ್ಯಕ್ಷ ಸಂಶುದ್ದೀನ್ ಸ್ವಾಗತಿಸಿ,ಪೀಸ್ ಸ್ಕೂಲ್ ಪ್ರಾಂಶುಪಾಲ ಮಹಮ್ಮದ್ ಸೈಪುಲ್ಲಾ ಕಾರ್ಯಕ್ರಮ ನಿರೂಪಿಸಿದರು.
ಸ್ಕೂಲ್ ವಿದ್ಯಾರ್ಥಿ ಪವಾಜ್ ಕುರಾನ್ ಪಠಿಸಿದರು.