ರೋಟರಿ ಕ್ಲಬ್ ಸುಬ್ರಹ್ಮಣ್ಯ, ಆನಂದಾಶ್ರಮ ಸೇವಾ ಟ್ರಸ್ಟ್ ಪುತ್ತೂರು, ಇನ್ನರ್ ವ್ಹೀಲ್ ಕ್ಲಬ್, ಸುಬ್ರಹ್ಮಣ್ಯ ಗ್ರಾಮ ಪಂಚಾಯತ್, ರೋಟರಿ ಕ್ಲಬ್ ಬಂಟ್ವಾಾಳ ಇವರ ಸಹಭಾಗಿತ್ವದಲ್ಲಿ
ಆ.5 ರಂದು ರಾಜೀವ ಗಾಂಧಿ ಸಭಾಭವನ ಗ್ರಾಮ ಪಂಚಾಯತ್ ಸುಬ್ರಹ್ಮಣ್ಯ ಇಲ್ಲಿ
ಉಚಿತ ನೇತ್ರ ಚಿಕಿತ್ಸಾ ಸೇವಾ ಶಿಬಿರ ನಡೆಯಲಿದೆ. ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ, ಮಂಗಳೂರು, ಜಿಲ್ಲಾಸಂಚಾರಿ ನೇತ್ರ ಚಿಕಿತ್ಸಾ ಘಟಕ
ಹಾಗೂ ಮಂಗಳೂರಿನ ಖ್ಯಾತ ಜಿಲ್ಲಾ ಆಸ್ಪತ್ರೆ ಇದರ ಸಹಯೋಗದಲ್ಲಿ
ಕೆ.ಎಂ.ಸಿ.ಯ ಪ್ರಸಿದ್ಧ ನೇತ್ರ ತಜ್ಞರು ಭಾಗವಹಿಸಲಿದ್ದಾಾರೆ.
ತಪಾಸಣೆಯ ನಂತರ ಅಗತ್ಯತೆ ಇರುವವರಿಗೆ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ತಜ್ಞ ವೈದ್ಯರಿಂದ ಉಚಿತವಾಗಿ ಶಸ್ತ್ರಚಿಕಿತ್ಸೆಯ ವ್ಯವಸ್ಥೆ ಇರುತ್ತದೆ. ಆನಂದಾಶ್ರಮ ಸೇವಾ ಟ್ರಸ್ಟ್ ಪುತ್ತೂರು- ಇವರ ವತಿಯಿಂದ
ದೃಷ್ಟಿದೋಷ ಇರುವವರಿಗೆ ಉಚಿತವಾಗಿ ಕನ್ನಡಕಗಳನ್ನು ವಿತರಿಸಲಾಗುವುದು. ಎಂದು ಸಂಘಟಕರು ತಿಳಿಸಿದ್ದಾರೆ. ಮಾಹಿತಿಗಾಗಿ ಹೆಚ್. ಎಲ್. ವೆಂಕಟೇಶ್ (7892008637), ಸುಬ್ರಹ್ಮಣ್ಯ ಎ.ಯು.(9448725642)
ನಾಗರಾಜ ಪರಮಲೆ (9731158296, ರವಿ ಕಕ್ಕೆಪದವು (9535436854), ಪಿ.ಸದಾಶಿವ ಪೈ( 9980076707),
ಡಾ ಪಿ.ಗೌರಿ ಪೈ (9902010799) ಸಂಪರ್ಕಿಸುವಂತೆ ಕೋರಲಾಗಿದೆ.