ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಸಹಾಯಕ ಪೊಲೀಸ್ ಉಪನಿರೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಜು. 31ರಂದು ನಿವೃತ್ತಿ ಹೊಂದಿದ ಭಾಸ್ಕರ ಅಡ್ಕಾರು ಮತ್ತು ನಾರಾಯಣ ಪಿ.ಯವರಿಗೆ ಬೀಳ್ಕೊಡುಗೆ ಕಾರ್ಯಕ್ರಮ ಜು. 31ರಂದು ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ನಡೆಯಿತು. ಡಿ.ಎಸ್.ಪಿ. ಡಾ. ಗಾನ ಕುಮಾರಿ ನಿವೃತ್ತರನ್ನು ಸನ್ಮಾನಿಸಿದರು.ಪಿ.ಎಸ್.ಐ. ರುಕ್ಮ ನಾಯ್ಕ್ ಸ್ವಾಗತಿಸಿ ನಿವೃತ್ತರಿಗೆ ಅಭಿನಂದನಾ ಮಾತುಗಳನ್ನಾಡಿ ಶುಭ ಹಾರೈಸಿದರು. ಪುತ್ತೂರು ಗ್ರಾಮಾಂತರ ವೃತ್ತದ ವೃತ್ತ ನಿರೀಕ್ಷಕ ಉಮೇಶ್ ಉಪ್ಪಳಿಕೆ ಪಿ.ಎಸ್.ಐ. ಆನಂದ್, ಬೆಳ್ಳಾರೆ ಠಾಣೆಗೆ ಆಗಮಿಸಿದ ನೂತನ ಪಿ.ಎಸ್.ಐ. ಸುಹಾಸ್, ಪ್ರೊಭೆಷನರಿ ಪಿ.ಎಸ್.ಐ. ಸವಿತಾ, ಎ.ಎಸ್.ಐ. ಸುಧಾಕರ್ ಸೇರಿದಂತೆ ಇತರ ಸಿಬ್ಬಂದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಶುಭ ಹಾರೈಸಿದರು.