ನೂತನ ಪದಾಧಿಕಾರಿಗಳ ಆಯ್ಕೆ
ಕಲ್ಲುಗುಂಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಸುಳ್ಯ ತಾಲೂಕು ಘಟಕ ವತಿಯಿಂದ ಅಡಿಕೆ ಎಲೆ ಹಳದಿ ರೋಗದ ಸ್ವಯಂ ಘೋಷಿತ ಅರ್ಜಿ ವಿತರಿಸುವ ಬಗ್ಗೆ ಸಭೆ ಜು.30 ರಂದು ನಡೆಸಲಾಯಿತು.
ಸಭಾಧ್ಯಕ್ಷತೆಯನ್ನು ತೀರ್ಥರಾಮ ಪರ್ನೋಜಿ ಅತಿಥಿಗಳಾಗಿ ಲೋಲಜಾಕ್ಷ ಭೂತಕಲ್ಲು, ದಿವಾಕರ ಪೈ ಗ್ರಾಮ ಘಟಕದ ಅಧ್ಯಕ್ಷರಾದ ಆನಂದ ಗೌಡರು ವೇದಿಕೆಯಲ್ಲಿದ್ದರು. ತಾಲೂಕು ಕಾರ್ಯದರ್ಶಿ ಭರತ್ ಕುಮಾರ್. ಕೆ ಸ್ವಾಗತಿಸಿ ಪ್ರಾಸ್ತಾವಿಕ ಭಾಷಣ ಮಾಡಿದರು. ನಂತರ ಸ್ವಯಂ ಘೋಷಿತ ಅರ್ಜಿಯ ಬಗ್ಗೆ ಮಾಹಿತಿ ನೀಡಿದರು. ಗ್ರಾಮದ ರೈತ ಬಂಧುಗಳೊಂದಿಗೆ ಸಂವಾದ ನಡೆಸಲಾಯಿತು. ಲೋಲಜಾಕ್ಷ ಭೂತಕಲ್ಲು ಮಾತನಾಡಿದರು. ಅಧ್ಯಕ್ಷ ಸ್ಥಾನದಿಂದ ತೀರ್ಥರಾಮ ಪರ್ನೋಜಿ ಮಾತನಾಡಿದರು.
ಇದೇ ಸಂದರ್ಭ ದ.ಕ.ಸಂಪಾಜೆ ಗ್ರಾಮ ಘಟಕವನ್ನು ರಚಿಸಲಾಯಿತು.
ಗೌರವಧ್ಯಕ್ಷರಾಗಿ ಆನಂದ ಗೌಡ,
ಅಧ್ಯಕ್ಷರಾಗಿ ವಸಂತ ಪೆಲ್ತಡ್ಕ, ಉಪಾಧ್ಯಕ್ಷರಾಗಿ ಗಣಪತಿ ಭಟ್, ಕಾರ್ಯದರ್ಶಿಯಾಗಿ ಚಂದ್ರಶೇಖರ ಯು. ಬಿ, ಜತೆ ಕಾರ್ಯದರ್ಶಿಯಾಗಿ ಚಂದ್ರಶೇಖರ ಎಸ್. ಕೆ,
ಖಜಾಂಜಿಯಾಗಿ ಧನಂಜಯ ಗೌಡ ಆಯ್ಕೆಯಾದರು.
ನಂತರ ಸ್ವಯಂ ಘೋಷಿತ ಅರ್ಜಿಯನ್ನು ವಿತರಿಸಲಾಯಿತು.
ನೂತನ ಗ್ರಾಮ ಘಟಕದ ಪರವಾಗಿ ಗಣಪತಿ ಭಟ್ ಮಾತನಾಡಿದರು. ಕಾರ್ಯಕ್ರಮವನ್ನು ತಾಲೂಕು ಘಟಕದ ಕಾರ್ಯದರ್ಶಿ ನಿರೂಪಿಸಿ ಧನ್ಯವಾದ ಸಮರ್ಪಿಸಿದರು.