Breaking News

ಕಾರ್ಯಕರ್ತರ ರಾಜಿನಾಮೆ ಸರಿಯಲ್ಲ, ವಾಸ್ತವ ಅರಿತು ಕೆಲಸ ಮಾಡುವ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

ಉತ್ತರ ಪ್ರದೇಶದ ವ್ಯವಸ್ಥೆಯೇ ಬೇರೆ, ಕರ್ನಾಟಕದ ವ್ಯವಸ್ಥೆಯೇ ಬೇರೆ : ಸಚಿವ ಎಸ್. ಅಂಗಾರ

ಜಿಲ್ಲೆಯಲ್ಲಿ ನಡೆದಿರುವ ಅಹಿತಕರ ಘಟನೆ ಹಿನ್ನಲೆಯಲ್ಲಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಗೂ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಸರಕಾರ ವಿಶೇಷ ಗಮನ ಹರಿಸಿದೆ. ಕೇರಳ ಗಡಿ ಭಾಗದಲ್ಲಿ ಈಗಾಗಲೇ ಕಟ್ಟೆಚ್ಚರ ವಹಿಸಲಾಗಿದ್ದು, ಗಡಿಭಾಗದ ೨೩ ಕಡೆಗಳಲ್ಲಿ ಸಿಸಿ ಕೆಮರಾ ಅಳವಡಿಸಲು ಸರಕಾರ ಕ್ರಮಕೈಗೊಂಡಿದೆ ಎಂದು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜನಸಾರಿಗೆ ಸಚಿವ ಎಸ್.ಅಂಗಾರ ಹೇಳಿದರು.

ಅವರು ಜು.31 ರಂದು ಸುಬ್ರಹ್ಮಣ್ಯದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಬೆಳ್ಳಾರೆಯಲ್ಲಿ ನಡೆದಿರುವ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆಗೆ ಸಂಬಂಧಿಸಿದಂತೆ ಆರೋಪಿಗಳ ಪತ್ತೆಕಾರ್ಯ ನಡೆಯುತ್ತಿದ್ದು, ಈಗಾಗಲೇ ಕೆಲವರ ಬಂಧಿಸಲಾಗಿದೆ. ಅಪರಾಧಿಗಳ ಮೇಲೆ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುತ್ತದೆ. ಜನರು ಸರಕಾರದ ಜತೆ ಸಹಕರಿಸಬೇಕು ಎಂದರು. ಪ್ರವೀಣ್ ಹತ್ಯೆ ಉದ್ದೇಶಪೂರ್ವಕವಾಗಿ ನಡೆದ ಕೃತ್ಯ. ಪಿಎಫ್‌ಐ, ಎಸ್‌ಡಿಪಿಐ ಪಿತೂರಿಯಿಂದ ಕೃತ್ಯ ನಡೆದಿದೆ. ಇದರಲ್ಲಿ ರಾಜಕೀಯ ಇಲ್ಲ ಎಂದ ಅವರು ಘಟನೆಯಲ್ಲಿ ಪೊಲೀಸ್ ಇಲಾಖೆಯ ನಿರ್ಲಕ್ಷ್ಯ ಇರುವ ಬಗ್ಗೆಯೂ ತನಿಖೆ ನಡೆಯಲಿದೆ. ತಪ್ಪಿತಸ್ಥರು ಯಾರೇ ಆಗಿದ್ದರು ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಜಿಲ್ಲೆಯಲ್ಲಿ ಘಟನೆ ಮರುಕಳುಹಿಸದಂತೆ ಕ್ರಮ ವಹಿಸಲು ಮುಖ್ಯಮಂತ್ರಿಗಳ ಜತೆ ಈಗಾಗಲೇ ಚರ್ಚಿಸಿದ್ದೇನೆ. ಮುಂದೆ ಶೀಘ್ರ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಕಾನೂನು ಸುವ್ಯವಸ್ಥೆ ಕಾಪಾಡಲು ಬೇಕಾಗುವ ಮೂಲಭೂತ ಬೇಡಿಕೆಗಳ ಬಗ್ಗೆ ಸಿಎಂಗೂ ತಿಳಿಸಿ ಈ ಬಗ್ಗೆ ಚರ್ಚೆ ನಡೆಸುತ್ತೇವೆ ಎಂದರು. ಸರಕಾರ ಇಂತಹ ಘಟನೆ ಮರುಕಳುಹಿಸದಂತೆ ಎರಡು ದಿನದಲ್ಲಿ ಸ್ಪಷ್ಟ ನಿರ್ಧಾರ ಕೈಗೊಳ್ಳುವ ನಿರೀಕ್ಷೆ ಇದೆ. ರಾಜ್ಯಗಳಿಗೆ ಕಾನೂನು ಕಾಪಾಡಲು ಯಾವ ಯೋಜನೆ ರೂಪಿಸಬೇಕೆಂಬ ಬಗ್ಗೆ ಕೇಂದ್ರ ಸರಕಾರ ಕ್ರಮಕೈಗೊಂಡು ರಾಜ್ಯಗಳಿಗೆ ಸೂಚಿಸುವ ಕೆಲಸವಾಗಬೇಕಿದೆ ಎಂದರು.

ಕಾರ್ಯಕರ್ತರು ಯಾವ ದೃಷ್ಟಿಯಿಂದ ರಾಜೀನಾಮೆ ನೀಡಿದ್ದಾರೆ ಗೊತ್ತಿಲ್ಲ. ಅವರಿಗೆ ವಾಸ್ತವ ತಿಳಿಸುವ ಕೆಲಸ ಆಗಲಿದೆ. ರಾಜೀನಾಮೆ ಪರಿಹಾರವಲ್ಲ. ತಪ್ಪನು ಸರಿಪಡಿಸುವ ಕೆಲಸ ಮಾಡಲಾಗುವುದು ಎಂದರು.

ಪ್ರವೀಣ್ ಹತ್ಯೆಯ ಬಳಿಕ ಸರಕಾರ ಉತ್ತಮವಾಗಿ ಮನೆಯವರಿಗೆ ಸ್ಪಂಧಿಸಿದೆ. ಸಿಎಂ ಸಹಿತ ಸಚಿವರು ಮನೆಗೆ ಭೇಟಿ ನೀಡಿದ್ದಾರೆ. ನಾನು ದೆಹಲಿಯಲ್ಲಿದ್ದರೂ ಅಲ್ಲಿಂದ ಮರುದಿನವೇ ಆಗಮಿಸಿದ್ದೇನೆ. ತನಿಖೆಯನ್ನು ಎನ್‌ಐಎ ವಹಿಸುವ ಕಾರ್ಯವೂ ನಡೆದಿದೆ. ಪಕ್ಷದ ಕಾರ್ಯಕರ್ತರ ನೋವಿಗೆ ಸ್ಪಂಧಿಸಿದ್ದೇವೆ. ಮನಸ್ಸಿನ ನೋವಿನಿಂದ ಕೆಲವರು ಬೇಸರ ವ್ಯಕ್ತಪಡಿಸಿದ್ದಾರೆ ಎಂದ ಅವರು ಬಿಜೆಪಿ ಸಾಮಾನ್ಯ ಕಾರ್ಯಕರ್ತನ ಬಗ್ಗೆಯೂ ಉತ್ತವಾಗಿ ಸ್ಪಂದಿಸುತ್ತದೆ ಎಂದರು.

ಸುಳ್ಯ ಕ್ಷೇತ್ರದಲ್ಲಿ ಉತ್ತಮ ರೀತಿಯಲ್ಲಿ ಅಭಿವೃದ್ಧಿ ಕೆಲಸ ನಡೆದಿದೆ. ಎಲ್ಲಾ ಅಭಿವೃದ್ಧಿ ಆಗಿಲ್ಲ. ಅಭಿವೃದ್ಧಿ ಬಗ್ಗೆ ಸರಕಾರಕ್ಕೆ ಕೇಳಲಾಗಿದೆ. ನಮ್ಮ ಸರಕಾರದ ಸೀಮಿತ ಅವಧಿಯಲ್ಲಿ ವೇಗದ ಅಭಿವೃದ್ಧಿ ನಡೆದಿದೆ ಎಂಬ ವಿಶ್ವಾಸ ಇದೆ. ಸಾಮಾಜಿಕ ಜಾಲತಾಣಗಳಲ್ಲಿ ಬರೆದು ಹಾಕುವುದರಿಂದ ಅಭಿವೃದ್ಧಿ ಸಾಧ್ಯವಿಲ್ಲ ಎಂದರು.

ಉತ್ತರ ಪ್ರದೇಶದ ವ್ಯವಸ್ಥೆಯೇ ಬೇರೆ, ಕರ್ನಾಟಕದ ವ್ಯವಸ್ಥೆಯೇ ಬೇರೆ, ಭಾರತ ದೇಶದಲ್ಲೇ ಕರ್ನಾಟಕ ಉತ್ತಮ ರೀತಿಯಲ್ಲಿ ಅಭಿವೃದ್ಧಿ ಹೊಂದುತ್ತಿರುವ ರಾಜ್ಯ. ಇಲ್ಲಿನ ವ್ಯವಸ್ಥೆಗೆ ಉತ್ತಮ ಕಾನೂನು ವ್ಯವಸ್ಥೆಯನ್ನು ಹೊಂದಿದೆ ಎಂದರು.

ಒಳನಾಡು ಮೀನುಗಾರಿಕೆಗೆ ಸಂಬಂಧಪಟ್ಟಂತೆ ಸ್ವ ಉದ್ಯೋಗಕ್ಕೆ ಮಹತ್ವ ನೀಡಲಾಗಿದೆ. ಬಯೋಪ್ಲಾಕ್ ಮೀನುಗಾರಿಕೆಯ ಪ್ರಧಾನಮಂತ್ರಿ ಮತ್ಸ್ಯ ಸಮೃದ್ಧಿಯಡಿ ಯೋಜನೆಗೆ ಸಹಾಯಧನ ಸಿಗಲಿದೆ. ಕರಾವಳಿಯಲ್ಲಿ ಮೀನುಗಾರಿಕೆಯ ಮೂಲಕ ಮಾರುಕಟ್ಟೆಗೆ ಇಳಿಸುವ ಕೆಲಸ ಆಗಲಿದೆ ಎಂದರು. ಮೀನಿನ ತ್ಯಾಜ್ಯದಿಂದ ಬಯೋ ಡೀಸೆಲ್ ಉತ್ಪದಿಸುವ ಬಗ್ಗೆ ಸರಕಾರ ಅನುಮೋದನೆ ನೀಡಿದೆ. ಉಪ್ಪುನೀರನ್ನು ಸಿಹಿ ನೀರಾಗಿ ಪರಿವರ್ತಿಸುವ ತಂತ್ರಜ್ಞಾನ ಬೋಟ್‌ಗಳಲ್ಲಿ ಅಳವಡಿಸುವ ಬಗ್ಗೆ ಸರಕಾರ ಒಪ್ಪಿಗೆ ನೀಡಿದೆ. ಬಂದರು ಮತ್ತು ಒಳನಾಡು ಜಲಸಾರಿಗೆಯ ಮಂಜೂರಾದ ೨೬ ಯೋಜನೆಗಳಲ್ಲಿ ೮ ಪೂರ್ಣಗೊಂಡಿದ್ದು, ಉಳಿಕೆ ಯೋಜನೆಗೆ ಮಂಜೂರಾತಿ ನೀಡುವಂತೆ ದೆಹಲಿಯಲ್ಲಿ ಕೇಂದ್ರ ಸಚಿವರಿಗೆ ಮನವಿ ಮಾಡಲಾಗಿದ್ದು, ಮಂಜೂರಾತಿ ಭರವಸೆ ಇದೆ. ರಾಜ್ಯದಲ್ಲಿ ಬಂದರಿನಲ್ಲಿ ಇರುವ ಹೂಳು ತೆರವಿಗೆ ಹಾಗೂ ಹೊಸ ಬಂದರು ನಿರ್ಮಾಣಕ್ಕೂ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

ಸುಳ್ಯ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ವೆಂಕಟ್ ವಳಲಂಬೆ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ವೆಂಕಟ್ ದಂಬೆಕೋಡಿ, ಪ್ರಮುಖರಾದ ಶಿವಪ್ರಸಾದ್ ನಡುತೋಟ, ದಿನೇಶ್ ಸಂಪ್ಯಾಡಿ, ರಾಜೇಶ್ ಎನ್.ಎಸ್., ರಾಜೇಶ್ ಕುಲ್ಕುಂದ, ಚಿದಾನಂದ ಕಂದಡ್ಕ, ಅಶೋಕ್ ಆಚಾರ್ಯ, ವೆಂಕಟೇಶ್ ಎಚ್.ಎಲ್., ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.