ಪಂಜಿಗಾರು ಸಮೀಪ ಇಂದು ಸುರಿದ ಭಾರೀ ಮಳೆ,ಗಾಳಿಗೆ ಮರವೊಂದು ಮನೆಗೆ ಬಿದ್ದು ಅಪಾರ ನಷ್ಟ ಉಂಟಾದ ಘಟನೆ ನಡೆದಿದೆ.
ರಾಮಕುಮೇರ್ ರೇವತಿ ಎಂಬವರ ಮನೆಗೆ ಮನೆ ಪಕ್ಕದಲ್ಲಿದ್ದ ಮರವೊಂದು ಬಿದ್ದಿದ್ದು ಮನೆಯ ಹಂಚು ಪಕ್ಕಾಸು ಮುರಿದು ಹೋಗಿದೆ.
ಮನೆಯ ಒಳಗೆಯೂ ಹಾನಿಯಾಗಿದ್ದು ಅಪಾರ ನಷ್ಟವುಂಟಾಗಿರುವುದಾಗಿ ತಿಳಿದು ಬಂದಿದೆ.
ಮರ ಬೀಳುವ ಹೊತ್ತಿಗೆ ಮನೆಯಲ್ಲಿ ಯಾರೂ ಇಲ್ಲದಿದ್ದುದರಿಂದ ಅನಾಹುತ ತಪ್ಪಿದಂತಾಗಿದೆ.